ನವದೆಹಲಿ:ದೆಹಲಿ ವಿಧಾನಸಭೆಯ ಶಾಂತಿ ಹಾಗೂ ಸೌಹಾರ್ದ ಸಮಿತಿಯು ಫೇಸ್​ಬುಕ್​ ಸಂಸ್ಥೆಗೆ ಹೊಸ ಹಾಗೂ ಅಂತಿಮ ಸಮನ್ಸ್ ಜಾರಿ ಮಾಡಿದೆ.
ಫೇಸ್​ಬುಕ್​ ಇಂಡಿಯಾದ ಪ್ರತಿನಿಧಿಗಳು ಬುಧವಾರದೊಳಗೆ ಸಮಿತಿ ಮುಂದೆ ಹಾಜರಾಗಬೇಕು ಎಂಬುದಾಗಿ ಸಮನ್ಸ್​ ಮೂಲಕ ತಾಕೀತು ಮಾಡಲಾಗಿದೆ. ದ್ವೇಷಪೂರಿತ ಪೋಸ್ಟ್ ಸಂಬಂಧ ನಿಯಮ ರೂಪಿಸಲು ಫೇಸ್​ಬುಕ್​ ಉದ್ದೇಶಪೂರ್ವಕವಾಗಿ ನಿರಾಸಕ್ತಿ ತೋರುತ್ತಿದೆ ಎಂಬ ಹಿನ್ನೆಲೆಯಲ್ಲಿ ಈ ಸಮನ್ಸ್ ಜಾರಿಗೊಳಿಸಲಾಗಿದೆ.
ಸೆ. 15ರಂದು ಈಗಾಗಲೇ ಒಂದು ಸಮನ್ಸ್​ ನೀಡಲಾಗಿದ್ದರೂ ಫೇಸ್​ಬುಕ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್, ಈ ಸಂಬಂಧ ಈಗಾಗಲೇ ಸಂಸತ್​ ಸಮಿತಿ ಮುಂದೆ ಹಾಜರಾಗಿರುವುದರಿಂದ ದೆಹಲಿಯ ಸದನ ಸಮನ್ಸ್ ಹಿಂಪಡೆದುಕೊಳ್ಳಬೇಕು ಎಂದು ಕೋರಿದ್ದರು. ಅದಕ್ಕೊಪ್ಪದ ಸಮಿತಿ ಹೊಸದಾಗಿ ಮತ್ತೊಂದು ಸಮನ್ಸ್​ ಜಾರಿ ಮಾಡಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
