ಲಂಡನ್​: ಕರೊನಾ ಪಿಡುಗಿನ ಕುರಿತು ಔಷಧ-ಲಸಿಕೆ ಇನ್ನೂ ಕಂಡು ಹಿಡಿಯಲಾಗದ್ದು ಒಂದೆಡೆಯಾದರೆ, ಮತ್ತೊಂದೆಡೆ ಕರೊನಾ ವೈರಸ್​ ಕೂಡ ಸ್ವಭಾವ ಬದಲಿಸಿ ಮತ್ತೆ ಮತ್ತೆ ಕಾಡುತ್ತಲೇ ಇದೆ. ಈ ಮಧ್ಯೆ ಸೋಂಕಿತರ ಚಿಕಿತ್ಸೆ ಕುರಿತು ಸ್ಪಷ್ಟ ನಿಲುವು ತಳೆಯುವಂಥ ಪರೀಕ್ಷೆಯೊಂದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಡಬ್ಲಿನ್​ ಬಾಸ್ಟನ್​ ಸ್ಕೋರ್ ಎಂದು ಕರೆಯಲಾಗುವ ಈ ರಕ್ತ ಪರೀಕ್ಷೆಯಿಂದ ಸೋಂಕಿತರ ಮುಂದಿನ ಸ್ಥಿತಿಯನ್ನು ಖಚಿತವಾಗಿ ತಿಳಿಯಬಹುದು ಎಂಬ ಅಧ್ಯಯನ ವರದಿ ಇ-ಬಯೋಮೆಡಿಸಿನ್ ಜರ್ನಲ್​ನಲ್ಲಿ ಪ್ರಕಟಗೊಂಡಿದೆ.
ಸೋಂಕು ಪತ್ತೆಯಾದ ಮೊದಲ 4 ದಿನಗಳಲ್ಲಿ ನಡೆಸುವ ಈ ಪರೀಕ್ಷೆಯಿಂದ ಮುಂದಿನ ಏಳು ದಿನಗಳಲ್ಲಿ ಸೋಂಕಿತರ ಪರಿಸ್ಥಿತಿ ಹೇಗಿರಲಿದೆ, ಸೋಂಕಿತರ ಪೈಕಿ ಯಾರು ಗಂಭೀರ ಪರಿಸ್ಥಿತಿಗೆ ಒಳಗಾಗಲಿದ್ದಾರೆ, ಯಾರಿಗೆ ಬರೀ ಚಿಕಿತ್ಸೆ ಸಾಕು, ಯಾರಿಗೆ ಐಸಿಯು ಬೇಕು ಎಂಬುದನ್ನು ನಿಖರವಾಗಿ ತಿಳಿಯಬಹುದು. ಈ ಪರೀಕ್ಷೆಯನ್ನು ಆಸ್ಪತ್ರೆಗೆ ದಾಖಲಿಸಲಾದ ಎಲ್ಲ ಸೋಂಕಿತರಿಗೂ ಮಾಡಬಹುದು ಎಂಬುದಾಗಿ ಐರ್ಲೆಂಡ್​ನ ಆರ್​ಸಿಎಸ್​ಐ ಯುನಿವರ್ಸಿಟಿಯ ಸ್ಟಡಿ ಆಥರ್​ ಗೆರ್ರಿ ಮೆಕ್​ ಎಲ್ವಾನೆ ಹೇಳಿದ್ದಾರೆ.
ಇಂಟರ್​ಲ್ಯೂಕಿನ್​ (ಐಎಲ್​)-6 ಮತ್ತೊಂದು ಇಂಟರ್​ಲ್ಯೂಕಿನ್​(ಐಎಲ್​) -10 ಎಂಬ ಎರಡು ಪರಮಾಣುಗಳ ಮಟ್ಟದ ಮೇಲೆ ಈ ಪರೀಕ್ಷೆ ನಡೆಯಲಿದೆ. ಗಂಭೀರ ಪರಿಸ್ಥಿತಿಯ ರೋಗಿಗಳಲ್ಲಿ ಈ ಎರಡರ ಮಟ್ಟದಲ್ಲೂ ತೀವ್ರ ವ್ಯತ್ಯಯವಾಗಿರುತ್ತದೆ. ಇವೆರಡರ ಅನುಪಾತದ ಮೇಲೆ ರೋಗಿಯ ಸಂಭಾವ್ಯ ಪರಿಸ್ಥಿತಿಯ ಮಾಹಿತಿ ಲಭಿಸುತ್ತದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
