ನವದೆಹಲಿ:ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಮತ್ತು ಹೊಸದಾಗಿ ಚುನಾಯಿತರಾದ ಲೋಕಸಭಾ ಸಂಸದ ಕಿಂಜರಪು ರಾಮ್ ಮೋಹನ್ ನಾಯ್ಡು ಅವರು ಅಧಿಕೃತವಾಗಿ ನಾಗರಿಕ ವಿಮಾನಯಾನ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಚಿವಾಲಯದ ಅಧಿಕಾರ ವಹಿಸಿಕೊಳ್ಳುವ ಮೊದಲು ದೆಹಲಿಯ ರಾಜೀವ್​​​ಗಾಂಧಿ ಭವನದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸುವ ಸಮಾರಂಭವನ್ನು ನಡೆಸಿದರು.
ಇದನ್ನು ಓದಿ:ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ ಟಿಎಂಸಿ
ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ನಿಖರವಾಗಿ ಮಧ್ಯಾಹ್ನ 1.11ಕ್ಕೆ 21 ಬಾರಿ ” ಓಂ ಶ್ರೀ ರಾಮ್ ” ಎಂದು ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ನಂತರ ಅವರು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಅವರ ತಾಯಿ ಮತ್ತು ಅವರ ಪತ್ನಿಗೆ ತಮ್ಮ ಹೊಸ ಸ್ಥಾನದ ಬಗ್ಗೆ ತಿಳಿಸಿದರು ಎನ್ನಲಾಗಿದೆ.
ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿಯೇ ಅತ್ಯಂತ ಮಹತ್ವದ ಸಚಿವಾಲಯವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನನಗೆ ನೀಡಿರುವುದು ಸಂತಸ ತಂದಿದೆ. ಇದರಿಂದ ಪ್ರಧಾನಿ ಮೋದಿ ಅವರಿಗೆ ಯುವಕರ ಮೇಲೆ ನಂಬಿಕೆ ಇರುವುದು ಅರ್ಥವಾಗುತ್ತದೆ ಎಂದು ಹೇಳಿದರು.
Ram Mohan Naidu took charge of Civil Aviation Ministry today. He wrote ‘Om Shree Ram’ on a page 21 times before taking charge as advised by mother. 🔥🔥
Another heartburn moment for Leftists 😂pic.twitter.com/nHkhEmhtlp
— BALA (@erbmjha)June 13, 2024

ಉತ್ತಮ ನಾಯಕನಾಗುವುದು ಹೇಗೆ ಎಂಬುದನ್ನು ಚಂದ್ರಬಾಬು ನಾಯ್ಡು ಅವರಿಂದ ಕಲಿತಿದ್ದೇನೆ. ನೂರು ದಿನಗಳ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಲಾಗುವುದು. ತಂತ್ರಜ್ಞಾನದ ಬಳಕೆಯಿಂದ ನಾಗರಿಕ ವಿಮಾನಯಾನವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಾಗುವುದು.ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ವೇಗ ನೀಡಲಾಗುವುದು ಎಂದು ತಿಳಿಸಿದರು. (ಏಜೆನ್ಸೀಸ್​​)
NEET-UG ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ ಅರ್ಜಿ; ಉತ್ತರ ಕೇಳಿ ಎನ್​ಟಿಎಗೆ ಸುಪ್ರೀಂ ನೋಟಿಸ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
