ನ್ಯೂಜಿಲ್ಯಾಂಡ್:ಆರು ತಿಂಗಳುಗಳಿಂದ ಶೂನ್ಯ ಕೋವಿಡ್​ ಕೇಸ್​ ದಾಖಲಾಗುತ್ತಿದ್ದ ನ್ಯೂಜಿಲ್ಯಾಂಡ್​ನಲ್ಲಿ ಇದೀಗ ದೇಶದ ಅತಿ ದೊಡ್ಡ ನಗರ ಆಕ್ಲೆಂಡ್​​ನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ತಕ್ಷಣವೇ ಮೂರು ದಿನಗಳ ಕಾಲ ಲಾಕ್​ಡೌನ್​ ಹೇರಿ ಪ್ರಧಾನಿ ಜಸಿಂಡಾ ಅರ್ಡೆರ್ನ್ ಆದೇಶ ಹೊರಡಿಸಿದ್ದಾರೆ.
ಪತ್ತೆಯಾಗಿರುವ ಕೇಸ್​ ಡೆಲ್ಟಾ ರೂಪಾಂತರಿ ಎಂದು ಶಂಕಿಸಲಾಗಿದ್ದು, ಇದು ಜನರ ಮೇಲೆ ಪರಿಣಾಮ ಬೀರಲು ನಾವು ಅವಕಾಶ ಮಾಡಿ ಕೊಡುವುದಿಲ್ಲ ಎಂದು ಪ್ರಧಾನಿ ಜಸಿಂಡಾ ಹೇಳಿದ್ದಾರೆ. ಸಮುದ್ರ ತೀರದ ನಗರಗಳಾದ ಆಕ್ಲೆಂಡ್ ಮತ್ತು ಕೊರೊಮಂಡೆಲ್ ನಗರದಲ್ಲಿ 58 ವರ್ಷದ ಸೋಂಕಿತ ಸಂಚರಿಸುವ ಮಾಹಿತಿ ಲಭ್ಯವಾಗಿದೆ. ಆತನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವರನ್ನು ಪತ್ತೆ ಹಚ್ಚಲಾಗುತ್ತಿದೆ.ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಏನಾಗಬಹುದು ಎಂಬುದನ್ನು ನೋಡಿದ್ದೇವೆ ಎಂದು ಮೂರನೇ ಕೊರೊನಾ ಅಲೆಗೆ ಸಾಕ್ಷಿಯಾಗಿರುವ ಆಸ್ಟ್ರೇಲಿಯಾವನ್ನು ಉದಾಹರಣೆ ನೀಡಿ ಅರ್ಡೆರ್ನ್ ಹೇಳಿಕೆ ನೀಡಿದ್ದಾರೆ.
ಮಂಗಳವಾರ ರಾತ್ರಿಯಿಂದ ನ್ಯೂಜಿಲ್ಯಾಂಡ್​ನಲ್ಲಿ ಮೂರು ದಿನಗಳ ಕಾಲ ಲಾಕ್‌ಡೌನ್‌ ಹೇರಲಾಗಿದ್ದು, ವಿಸ್ತರಣೆ ಆಗುವ ಸಾಧ್ಯತೆಯಿದೆ. ಶಾಲೆ, ಆಫೀಸ್, ವ್ಯಾಪಾರ-ವಾಣಿಜ್ಯ ಬಂದ್ ಆಗಲಿದ್ದು, ಅಗತ್ಯ ಸೇವೆಗಳು ಮಾತ್ರ ತೆರೆಯಲಿದೆ. ಐದು ಮಿಲಿಯುನ್​ ಜನಸಂಖ್ಯೆ ಹೊಂದಿರುವ ನ್ಯೂಜಿಲ್ಯಾಂಡ್, ಸೋಂಕಿನ ಆರಂಭದಿಂದಲೇ ಕಠಿಣ ನಿರ್ಬಂಧಗಳನ್ನು ಹೇರಿ ಕೋವಿಡ್​ ನಿಯಂತ್ರಣಕ್ಕೆ ತರುತ್ತಾ ಬಂದಿದೆ.
ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ, ಓರ್ವ ಸಂತ್ರಸ್ತೆ ನಾಪತ್ತೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × four =
Remember me
