ಚೆನ್ನೈ:ಆರಂಭಿಕ ಎರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ಬೀಗುತ್ತಿರುವ ಹಾಲಿ ರನ್ನರ್​ಅಪ್​ ನ್ಯೂಜಿಜಲೆಂಡ್​ ತಂಡ ಏಕದಿನ ವಿಶ್ವಕಪ್​ನಲ್ಲಿ ಶುಕ್ರವಾರ ಬಾಂಗ್ಲಾದೇಶ ತಂಡದ ಸವಾಲು ಎದುರಿಸಲಿದೆ. ಗೆಲುವಿನ ಓಟವನ್ನು ಸತತ 3ನೇ ಪಂದ್ಯಕ್ಕೆ ವಿಸ್ತರಿಸುವ ಹಂಬಲದಲ್ಲಿರುವ ಕಿವೀಸ್​ಗೆ ಈ ಬಾರಿ ನಾಯಕ ಕೇನ್​ ವಿಲಿಯಮ್ಸನ್​ ಬಲವೂ ಲಭಿಸಲಿದೆ.
ಮೊಣಕಾಲು ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿರುವ ವಿಲಿಯಮ್ಸನ್​ ಕಿವೀಸ್​ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಟಾಮ್​ ಲಾಥಮ್​ ನೇತೃತ್ವದಲ್ಲಿ ಆಡಿದ ಮೊದಲ 2 ಪಂದ್ಯಗಳಲ್ಲಿ ಕಂಡ ಸರಾಗ ಜಯದಿಂದ ಕಿವೀಸ್​ ಭರ್ಜರಿ ರನ್​ರೇಟ್​ (+1.958) ಕೂಡ ಸಂಪಾದಿಸಿದೆ. ಅತ್ತ ಬಾಂಗ್ಲಾ ಮೊದಲ ಪಂದ್ಯದಲ್ಲಿ ಆಫ್ಘನ್​ ಎದುರು ಸುಲಭ ಗೆಲುವು ಕಂಡಿದ್ದರೆ, 2ನೇ ಪಂದ್ಯದಲ್ಲಿ ಇಂಗ್ಲೆಂಡ್​ಗೆ ಶರಣಾಗಿತ್ತು. ಇದೀಗ ಕಿವೀಸ್​ ಎದುರು ಸವಾಲೊಡ್ಡುವ ತವಕದಲ್ಲಿದೆ. ಉಭಯ ತಂಡಗಳು ಉತ್ತಮ ಸ್ಪಿನ್ನರ್​ಗಳನ್ನು ಹೊಂದಿವೆ. ಹೀಗಾಗಿ ಚೆಪಾಕ್​ನ ಚಿದಂಬರಂ ಕ್ರೀಡಾಂಗಣದ ಸ್ಪಿನ್​-ಸ್ನೇಹಿ ಪಿಚ್​ನ ಲಾಭವನ್ನು ಸಮರ್ಥವಾಗಿ ಬಳಸಿಕೊಳ್ಳಲು ಉಭಯ ತಂಡಗಳೂ ಪೈಪೋಟಿ ನಡೆಸಲಿವೆ.
ಕೇನ್​ ಫಿಟ್​ ಆಗಿರುವ ನಡುವೆ ಅನುಭವಿ ವೇಗಿ ಟಿಮ್​ ಸೌಥಿ ಸತತ 3ನೇ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಕೇನ್​ ವಾಪಸಾತಿಯಿಂದ ಬೆಂಗಳೂರು ಮೂಲದ ಆಲ್ರೌಂಡರ್​ ರಚಿನ್​ ರವೀಂದ್ರ 3ನೇ ಕ್ರಮಾಂಕವನ್ನು ಬಿಟ್ಟುಕೊಡಬೇಕಾಗುತ್ತದೆ. ಆದರೆ ಕೇನ್​ಗಾಗಿ 11ರ ಬಳಗದಲ್ಲಿ ಯಾರು ಸ್ಥಾನ ತೆರವುಗೊಳಿಸಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅಗ್ರ 3 ಮೂವರು ಬ್ಯಾಟರ್​ಗಳಾದ ವಿಲ್​ ಯಂಗ್​, ಡೆವೊನ್​ ಕಾನ್​ವೇ ಮತ್ತು ಡೆರಿಲ್​ ಮಿಚೆಲ್​ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಕಳೆದ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಪರ ಆಡುವಾಗ ಗಾಯಗೊಂಡಿದ್ದ ಕೇನ್​ ನಂತರದಲ್ಲಿ ಇದೇ ಮೊದಲ ಪಂದ್ಯವಾಗಿರಲಿದೆ.
*ಏಕದಿನ ಮುಖಾಮುಖಿ: 41ನ್ಯೂಜಿಲೆಂಡ್​: 30ಬಾಂಗ್ಲಾದೇಶ: 10ರದ್ದು: 1*ವಿಶ್ವಕಪ್​ ಮುಖಾಮುಖಿ: 5ನ್ಯೂಜಿಲೆಂಡ್​: 5ಬಾಂಗ್ಲಾದೇಶ: 0
ಆರಂಭ: ಮಧ್ಯಾಹ್ನ 2.00ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​
*ಭಾರತದಲ್ಲಿನ ವೈವಿಧ್ಯತೆಯ ಪಿಚ್​ಗಳಿಗೆ ಹೊಂದಿಕೊಳ್ಳುವುದು ಎಲ್ಲ ತಂಡಗಳಿಗೆ ದೊಡ್ಡ ಸವಾಲಾಗಲಿದೆ. ಹೀಗಾಗಿ ಟೂರ್ನಿ ಆರಂಭದಲ್ಲಿರುವ ಚಿತ್ರಣ, ಅರ್ಧಹಾದಿ ಸಾಗಿದ ಬಳಿಕ ಬದಲಾಗಬಹುದು. ನಾವು ಕೂಡ ಪಿಚ್​ಗೆ ತಕ್ಕಂತೆ ತಂಡದಲ್ಲಿ ಬದಲಾವಣೆಗಳನ್ನು ತರಲಿದ್ದೇವೆ.| ಕೇನ್​ ವಿಲಿಯಮ್ಸನ್​, ನ್ಯೂಜಿಲೆಂಡ್​ ನಾಯಕ
ವಿಶ್ವಕಪ್​ನಲ್ಲಿ ಮೊದಲ ವಾರವೇ ದಾಖಲೆಗಳ ಧಮಾಕಾ; ಶತಕಗಳ ಸುರಿಮಳೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 5 =
Remember me
