ವೆಲ್ಲಿಂಗ್ಟನ್​:ನ್ಯೂಜಿಲೆಂಡ್​ನ ನೂತನ ಪ್ರಧಾನಿಯಾಗಿ 44 ವರ್ಷದ ಹಿರಿಯ ರಾಜಕಾರಣಿ ಕ್ರಿಸ್​ ಹಿಪ್ಕಿನ್ಸ್​ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ನ್ಯೂಜಿಲೆಂಡ್ ಗವರ್ನರ್ ಜನರಲ್ ಸಿಂಡಿ ಕಿರೊ ಅವರು ಪ್ರಮಾಣವಚನ ಬೋಧಿಸಿದರು. ಇದೇ ವೇಳೆ ದೇಶದ ಆರ್ಥಿಕತೆಯನ್ನ ಭದ್ರಪಡಿಸುವುದಾಗಿ ನೂತನ ಪ್ರಧಾನಿ ಘೋಷಿಸಿದರು.
ಜಸಿಂಡಾ ಅಡೆರ್ನ್​ ಅವರ ದಿಢೀರ್​ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಪೊಲೀಸ್​ ಮತ್ತು ಶಿಕ್ಷಣ ಸಚಿವ ಕ್ರಿಸ್​ ಹಿಪ್ಕಿನ್ಸ್​ ಅವರನ್ನ ಲೇಬರ್​ ಪಕ್ಷದ ಸದಸ್ಯರೆಲ್ಲರೂ ನ್ಯೂಜಿಲೆಂಡ್​ನ 41ನೇ ಪ್ರಧಾನಿಯಾಗಿ ಭಾನುವಾರ ಆಯ್ಕೆ ಮಾಡಿದ್ದರು.
ಕರೊನಾ ಸಂಕಷ್ಟ ಕಾಲ ನಿರ್ವಹಿಸುವ ಜವಾಬ್ದಾರಿ ವಹಿಸಿಕೊಂಡಿದ್ದ ಕ್ರಿಸ್​, ಉತ್ತಮ ಕೆಲಸ ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದರು. ಪ್ರಧಾನಿಯಾಗಿ ತಮ್ಮ ಪಕ್ಷವನ್ನು ಮುನ್ನಡೆಸುವ ಮೂಲಕ ಮುಂದಿನ ಅಕ್ಟೋಬರ್​ನಲ್ಲಿ ಎದುರಾಗಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಪೂರ್ಣ ಜವಾಬ್ದಾರಿ ಕ್ರಿಸ್​ ಮೇಲೆ ಬೀಳಲಿದೆ.
ಸದ್ಯ ಲೇಬರ್​ ಪಕ್ಷವು ಜನಾಭಿಪ್ರಾಯದಲ್ಲಿ ಹಿನ್ನಡೆ ಅನುಭವಿಸಿದೆ. ಅಪರಾಧ ಪ್ರಕರಣಗಳ ಹೆಚ್ಚಳ, ಬಡತನ ಮತ್ತು ಏರುತ್ತಿರುವ ಬೆಲೆಗಳ ನಡುವೆ ವಿರೋಧ ಪಕ್ಷಗಳು ನಿರಂತರವಾಗಿ ಟೀಕಾ ಪ್ರಹಾರ ಮಾಡುತ್ತಿದ್ದು, ಆಡಳಿತರೂಢ ಲೇಬರ್​ ಪಕ್ಷಕ್ಕೆ ಸಂಕಷ್ಟದ ಹಾದಿ ಎದುರಾಗಿದೆ. ಇದೆಲ್ಲವನ್ನೂ ಮೆಟ್ಟಿ ನಿಂತು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಬಹುದೊಡ್ಡ ಸವಾಲು ಕ್ರಿಸ್​ ಮುಂದಿದೆ.(ಏಜೆನ್ಸೀಸ್​)
ಹಳೇ ಸ್ಕೂಟರ್​ನಲ್ಲಿ ದೇಶ ಸುತ್ತಿದ ತಾಯಿ-ಮಗನಿಂದ ಕುಕ್ಕೆಯಲ್ಲಿ ವಿಶೇಷ ಪೂಜೆ

ಮೋದಿ ಕುರಿತು ವಿವಾದಾತ್ಮಕ ಡಾಕ್ಯುಮೆಂಟರಿ ಪ್ರದರ್ಶನ: ಜೆಎನ್​ಯು ವಿವಿಯಲ್ಲಿ ಕಲ್ಲು ತೂರಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 3 =
Remember me
