ಲಖನೌ:ಉತ್ತರ ಪ್ರದೇಶದ ಖುಖುಂಡು ಗ್ರಾಮದಲ್ಲಿ ಶಿಶುವೊಂದು ಜನಿಸಿದ್ದು, ಅದಕ್ಕೆ ಪಾಲಕರು ಇಟ್ಟ ಹೆಸರು ಕೇಳಿದ್ರೆ ಹೀಗೂ ಉಂಟೇ ಎಂದೆನಿಸದೆ ಇರದು.
ಕರೊನಾ ವೈರಸ್​ನಿಂದ ಜನರನ್ನು ರಕ್ಷಣೆ ಮಾಡುವ ಸಲುವಾಗಿ ಇಡೀ ದೇಶವನ್ನು ಲಾಕ್​ಡೌನ್​ ಮಾಡಲಾಗಿದೆ. ನರೇಂದ್ರ ಮೋದಿಯವರ ಈ ನಿರ್ಧಾರಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗೇ ನವಜಾತ ಶಿಶುವಿನ ಪಾಲಕರೂ ಫುಲ್​ ಸಪೋರ್ಟ್​ ನೀಡಿದ್ದಾರೆ. ಕರೊನಾ ವೈರಸ್​ ಲಾಕ್​ಡೌನ್​ಗೂ, ಮಗುವಿನ ಹೆಸರಿಗೂ ಏನು ಸಂಬಂಧ ಎಂದು ಗೊಂದಲ ಆಗ್ತಿದೆಯಾ? ಹಾಗಿದ್ರೆ ಮುಂದೆ ಓದಿ…
ಡಿಯೋರಿಯಾ ಜಿಲ್ಲೆಯ ಖುಖುಂಡು ಗ್ರಾಮದಲ್ಲಿ ಜನಿಸಿದ ಗಂಡುಮಗುವಿಗೆ ಅದರ ತಂದೆ ತಾಯಿ ‘ಲಾಕ್​ಡೌನ್​’ ಎಂದೇ ಹೆಸರಿಟ್ಟಿದ್ದಾರೆ. ಲಾಕ್​​ಡೌನ್​ ಎಂದು ಹೆಸರಿಟ್ಟ ಬಗ್ಗೆ ಮಾತನಾಡಿರುವ ಮಗುವಿನ ತಂದೆ ಪವನ್​, ಕರೊನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ಲಾಕ್​ಡೌನ್​ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ದೇಶದ ಹಿತಾಸಕ್ತಿಗಾಗಿ ಇದು ಒಳ್ಳೆಯ ಕ್ರಮ. ಹಾಗಾಗಿ ನಮ್ಮ ಮಗುವಿಗೂ ಲಾಕ್​ಡೌನ್​ ಎಂದೇ ಹೆಸರಿಟ್ಟಿದ್ದೇವೆ. ಈ ಮೂಲಕ ನಮ್ಮ ಬೆಂಬಲ ಸೂಚಿಸಿದ್ದೇವೆ ಎಂದಿದ್ದಾರೆ.
ನನ್ನ ಮಗನ ಹೆಸರು ಕೇಳಿದಾಕ್ಷಣ ಪ್ರತಿಯೊಬ್ಬರಿಗೂ ಸ್ವಹಿತಾಸಕ್ತಿಗಿಂತ ರಾಷ್ಟ್ರದ ಹಿತಾಸಕ್ತಿಯೇ ಮುಖ್ಯ ಎಂಬುದು ಗೊತ್ತಾಗಬೇಕು ಎಂದಿದ್ದಾರೆ. ಹಾಗೇ ನಾವಂತೂ ಲಾಕ್​ಡೌನ್​ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಮಗುವನ್ನು ನೋಡಲು ಈಗ ಯಾರೂ ಬರಬೇಡಿ ಎಂದು ಸಂಬಂಧಿಕರಿಗೆ ಹೇಳಿದ್ದೇವೆ. ಮಗ ಹುಟ್ಟಿದ್ದಕ್ಕೆ ಯಾವುದೇ ಧಾರ್ಮಿಕ ಕಾರ್ಯಕ್ರಮ, ಸಂಭ್ರಮಾಚರಣೆಯನ್ನು ಈಗ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಕಳೆದವಾರ ಗೋರಖ್​ಪುರದಲ್ಲಿ ಹುಟ್ಟಿದ ಹೆಣ್ಣುಮಗುವಿಗೆ ಕರೊನಾ ಎಂದು ಹೆಸರಿಡಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 4 =
Remember me
