ವಿಜಯವಾಡ:ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಆಕಸ್ಮಿಕವಾಗಿ ಕಾಲುವೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕೊಟಿಪಲ್ಲಿ ಕೋಟಾ ಗ್ರಾಮದಲ್ಲಿ ನಡೆದಿದೆ.
ಘಟನೆಯು ಗುರುವಾರ ರಾತ್ರಿ ನಡೆದಿದ್ದು, ಶುಕ್ರವಾರ ಬೆಳಗ್ಗೆ ಸ್ಥಳೀಯರು ಕಾಲುವೆಯಲ್ಲಿ ಮುಳುಗಿದ್ದ ಕಾರಿನಲ್ಲಿ ಮೃತದೇಹಗಳನ್ನು ಕಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತರನ್ನು ಕೆ. ಸೀತಾರಾಮ ಸತ್ಯ ಪ್ರಸಾದ್​, ಪತ್ನಿ ಕೆ. ವಿಜಯಲಕ್ಷ್ಮೀ ಮತ್ತು ಅವರ ಕಿರಿಯ ಮಗ ಕೆ. ಸತ್ಯ ಸಂತೋಷ್​ ಎಂದು ಗುರುತಿಸಲಾಗಿದೆ.
ಪೊಲೀಸ್​ ಮೂಲಗಳ ಪ್ರಕಾರ ಮೃತರು ಪುದುಚೇರಿಯ ಯನಮ್​ ನಿವಾಸಿಗಳು. ಗುರುವಾರ ಮಗ ಸತ್ಯ ಸಂತೋಷ್​ ನಿಶ್ಚಿತಾರ್ಥಕ್ಕೆ ಪೂರ್ವ ಗೋದಾವರಿಯ ರಾಜಮಂಡ್ರಿಗೆ ತೆರಳಿದ್ದರು. ಸತ್ಯ ಅವರು ಬ್ಯಾಂಕ್​ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ:ಶವಸಂಸ್ಕಾರದಲ್ಲಿ ಶವವೇ ಮಾಡಿತು ವೆಲ್​ಕಮ್​! ನಾವು ಶವಸಂಸ್ಕಾರ ಮಾಡೋದೆ ಇಲ್ಲ ಎಂದ ಚರ್ಚ್​
ನಿಶ್ಚಿತಾರ್ಥ ಸಮಾರಂಭ ಮುಗಿಸಿಕೊಂಡು, ಮೂವರು ರಾಜಮಂಡ್ರಿಯಲ್ಲಿ ಹೊಸ ಕಾರು ಖರೀದಿಸಿದ್ದರು. ಬಳಿಕ ಹೊಸ ಕಾರಿನಲ್ಲಿ ಮನೆಗೆ ಮರಳುವಾಗ ದುರಂತ ಸಂಭವಿಸಿದೆ. ಕಾರಿನ ಸಮೇತ ಮೂವರು ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಶವಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂವರು ಸಹ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಸಾಮಾನ್ಯ ಶಿಕ್ಷಕನಿಗೆ 7 ಕೋಟಿ ಜಾಗತಿಕ ಅವಾರ್ಡ್​- ಪ್ರಶಸ್ತಿಯನ್ನೂ ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ ಟೀಚರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 14 =
Remember me
