
‘ಐಸ್ ಕ್ರೀಮ್ ಹೈ ಯಾ ಸಬ್ಜಿ:’ ಅಮುಲ್ ಹೊಸದಾಗಿ ಪರಿಚಯಿಸಿದ ‘ಹಳದಿ ಐಸ್ ಕ್ರೀಮ್’ ನೆಟ್ಟಿಗರ ವಿಲಕ್ಷಣ ಪ್ರತಿಕ್ರಿಯೆಗೆ ಆಹಾರವಾಗಿದೆ.ಕರೊನಾವೈರಸ್ ಮಹಾಮಾರಿಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದೇ ಮದ್ದು ಎಂದು ವೈದ್ಯ ಲೋಕ ಹೇಳಿದ್ದೇ ತಡ. ಹಲವು ಆಹಾರೋತ್ಪನ್ನ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದು ಹೇಳಿಕೊಂಡು ಪ್ರಚಾರಗಿಟ್ಟಿಸಿಕೊಳ್ಳಲು ಸ್ಪರ್ಧಿಸುತ್ತಿವೆ.
ಇದನ್ನು ಓದಿ:ಹೆಚ್ಚಾಗಲಿದೆ ಕರೆ ದರ, ಡೇಟಾ ಶುಲ್ಕ; ಬಳಕೆ ಹೆಚ್ಚಾದರೂ ನಷ್ಟದಲ್ಲಿವೆಯಂತೆ ಕಂಪನಿಗಳು…!
ಪ್ರಸಿದ್ಧ ಕಂಪನಿಗಳೂ ಇದಕ್ಕೆ ಹೊರತಲ್ಲ. ಶುಂಠಿ, ತುಳಸಿ, ಅರಿಶಿನ ಮುಂತಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳಿಂದ ತಯಾರಿಸಿದ ಹಲವಾರು ಉತ್ಪನ್ನಗಳನ್ನು ಅಮುಲ್ ಕಂಪನಿ ಇತ್ತೀಚೆಗೆ ತಂದಿದೆ. ಈಗ, ಇದು ಪಟ್ಟಿಯಲ್ಲಿ ಮತ್ತೊಂದು ವಸ್ತುವನ್ನು ಸೇರಿಸಿದೆ. ಹಳದಿ ಐಸ್ ಕ್ರೀಮ್’ ಅನ್ನು ಬಿಡುಗಡೆಗೊಳಿಸಿದೆ.ಅಮುಲ್, ಟ್ವಿಟ್ಟರ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿದೆ. ಹಳದಿ ಐಸ್​​ಕ್ರೀಮ್​ನಲ್ಲಿ ಹಾಲು, ಜೇನುತುಪ್ಪ, ಮೆಣಸು, ಖರ್ಜೂರ, ಬಾದಾಮಿ ಮತ್ತು ಗೋಡಂಬಿ ಸಹ ಹೊಂದಿರುತ್ತದೆ ಎಂದು ಅದು ಹೇಳಿದೆ. ಅದರಿಂದ ಹೊರತಾಗಿ, ಕಂಪನಿಯು ಶುಂಠಿ ಮತ್ತು ತುಳಸಿ ಸ್ವಾದವಿರುವ ಇನ್ನೂ ಎರಡು ಐಸ್ ಕ್ರೀಮ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.
ಇದನ್ನೂ ಓದಿ:ರಾಜ್ಯಸಭಾ ಸಂಸದ, ಮಾಜಿ ಸಮಾಜವಾದಿ ಪಕ್ಷದ ನಾಯಕ ಅಮರ್ ​ಸಿಂಗ್​ ವಿಧಿವಶ
ಪಾರಂಪರಿಕ ಆಹಾರ ಪದಾರ್ಥಗಳಲ್ಲಿ ವಿಲಕ್ಷಣವಾದ ಫ್ಲೇವರ್ ಸಂಯೋಜನೆಯ ಉತ್ಪನ್ನಕ್ಕೆ ಅಂತರ್ಜಾಲದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಕಂಪನಿಗಳು ಜನಸಾಮಾನ್ಯರನ್ನು ಆಕರ್ಷಿಸುವಂತಹ ‘ಚ್ಯವಾನ್‌ಪ್ರಾಶ್ ಐಸ್ ಕ್ರೀಮ್’ ನಂತಹ ವಸ್ತುಗಳನ್ನು ತರಲು ಸಹ ನಿರ್ಧರಿಸಿವೆ.ಹಾಲು ಮತ್ತು ಅರಿಶಿನದ ಸಂಯೋಜನೆ ರುಚಿಕರವೆನಿಸಿದರೂ, ಇದೇ ಸಂಯೋಜನೆಯ ಐಸ್ ಕ್ರೀಮ್ ಮಾರುಕಟ್ಟೆಗೆ ತಂದರೆ ಜನರ ಪ್ರತಿಕ್ರಿಯೆ ಸಕಾರಾತ್ಮಕವಾಗಿಯೇ ಇರುತ್ತದೆ ಎಂಬುದನ್ನು ನಂಬುವಂತಿಲ್ಲ.ಏಕೆಂದರೆ ಕೆಲ ನೆಟ್ಟಿಗರಲ್ಲಿ ಇತ್ತೀಚೆಗೆ ಮಾರುಕಟ್ಟೆಗೆ ಬಂದ ಈ ಫ್ಲೇವರ್ ಐಸ್​ಕ್ರೀಮ್ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಾಷೆ ಮಾಡುವ ಮೂಲಕ ತಮ್ಮ ಅಸಮಾಧಾನವನ್ನೂ ವ್ಯಕ್ತಪಡಿಸಿದವರೂ ಇದ್ದಾರೆ.
ಇದನ್ನೂ ಓದಿ:ದೇಶದಲ್ಲೇ ತಯಾರಾಗಲಿವೆ 11 ಲಕ್ಷ ಕೋಟಿ ರೂ. ಮೌಲ್ಯದ ಸ್ಮಾರ್ಟ್​ಫೋನ್​ಗಳು; ಸ್ವಾವಲಂಬಿ ಭಾರತಕ್ಕೆ ಬಂತು ಬಲ
ಹಳದಿ ಹಾಲು ಒಕೆ. ಆದರೆ ಹಳದಿ ಐಸ್​ಕ್ರೀಮ್ ಯಾಕೆ? ಎಂದೂ ಕೇಳಿದ್ದಾರೆ. ಇನ್ನೊಬ್ಬರು,“ ಲಾಕ್‌ಡೌನ್ ನಿಜವಾಗಿಯೂ ಜನರನ್ನು ಸೃಜನಶೀಲರನ್ನಾಗಿ ಮಾಡುತ್ತದೆ ”ಎಂದು ಹೇಳಿದ್ದಾರೆ. ಹಳದಿ, ಮೆಣಸು ಸಂಯೋಜನೆಯೇ ಇದೇನು ಐಸ್​ ಕ್ರೀಮೋ ಅಥವಾ ಸಬ್ಜಿಯೋ ಎಂದು ಕೇಳಿದ್ದಾರೆ.ಕೆಲವರು ಹೊಸ ಫ್ಲೇವರನ್ನು ಟ್ರೈ ಮಾಡಲು ಸಿದ್ಧರಿರುವುದರಿಂದ ಭರವಸೆಯನ್ನು ಕಳೆದುಕೊಳ್ಳುವಂತಿಲ್ಲ.. “ನಾನು ಹಳದಿಯನ್ನು ಪ್ರಯತ್ನಿಸುತ್ತೇನೆ. ಅಮುಲ್ ನನ್ನನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ, ಎಂದಿದ್ದಾರೆ.
ಬಾಲಿವುಡ್​ ಬಂಡಾಯಗಾರ್ತಿ ಕಂಗನಾ ರಣಾವತ್​​ ಮನೆಯ ಬಳಿ ಗುಂಡಿನ ದಾಳಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + seven =
Remember me
