ನವದೆಹಲಿ:ಮದುವೆ ಎರಡು ಕುಟುಂಬಗಳನ್ನು ಒಟ್ಟುಗೂಡಿಸುವ ಸಮಾರಂಭವಾಗಿದೆ. ಆದರೆ ಈ ವಿಡಿಯೋದಲ್ಲಿ ನೀವು ನೋಡುತ್ತಿರುವುದು ಸಾಹಸಮಯದಿಂದ ಕೂಡಿದ ವಿಭಿನ್ನವಾದ ವಿವಾಹವಾಗಿದೆ. ಈ ಮದುವೆಯಲ್ಲಿ ವಧು-ವರರು ಇಬ್ಬರು ಅತಿಥಿಗಳೊಂದಿಗೆ ಅಲ್ಲಿಂದ ಸ್ಕೈಡೈವ್ ಮಾಡುತ್ತಾರೆ. ಇದೇನು ವಿಚಿತ್ರ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ಯಾ? ಬನ್ನಿ ನಾವು ನಿಮಗೆ ಈ ಸ್ಟೋರಿ ಹೇಳುತ್ತೇವೆ…
ಇದನ್ನೂ ಓದಿ:ಭೀಕರ ಅಪಘಾತ; ವಾಹನ ಗುದ್ದಿದ ರಭಸಕ್ಕೆ ರಸ್ತೆಗೆ ಹಾರಿ ಬಿತ್ತು ಸ್ಕೂಟಿ ಸವಾರನ ಕಣ್ಣು ಗುಡ್ಡೆ…
ಇಂದಿನ ಯುವ ಪೀಳಿಗೆ ಮದುವೆಯಲ್ಲಿ ವಿಭಿನ್ನವಾಗಿರ ಬೇಕು ಎನ್ನುವ ಉದ್ದೇಶದಿಂದ ನಾನಾ ತಂತ್ರಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ, ದಂಪತಿ ತಮ್ಮ ಮದುವೆಯನ್ನು ವಿಭಿನ್ನವಾಗಿ ಮಾಡಲು ನಿರ್ಧರಿಸಿದ್ದಾರೆ. ಎತ್ತರದ ಪರ್ವತದಿಂದ ಸ್ಕೈಡೈವಿಂಗ್ ಮಾಡುವ ಮೂಲಕ ದಂಪತಿ ತಮ್ಮ ಮದುವೆಯನ್ನು ಸ್ಮರಣೀಯ, ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಇದನ್ನೂ ಓದಿ:ತಮ್ಮನ ಸಾವಿನಿಂದ ಮನನೊಂದ ಯುವತಿ ನೀರಿನ ಟ್ಯಾಂಕ್​ಗೆ ಹಾರಿ ಪ್ರಾಣ ಬಿಟ್ಟಳು
ಈ ನವ ಜೋಡಿಯ ಹೆಸರು ಪ್ರಿಸ್ಸಿಲ್ಲಾ ಆಂಟ್ ಮತ್ತು ಫಿಲಿಪ್ಪೋ ಲೆಕರ್ಸ್. ಇತ್ತೀಚೆಗಷ್ಟೇ ಇವರ ಮದುವೆಯ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಮದುವೆಯ ಅತಿಥಿಗಳು ಎತ್ತರದ ಬೆಟ್ಟದ ಮೇಲೆ ನಿಂತಿದ್ದಾರೆ. ವಧು-ವರರು ಇಬ್ಬರು ಅತಿಥಿಗಳೊಂದಿಗೆ ಅಲ್ಲಿಂದ ಸ್ಕೈಡೈವ್ ಮಾಡುತ್ತಾರೆ.
ಇದನ್ನೂ ಓದಿ:ಕಿಟ್ಟಿ ಪಾರ್ಟಿ ಹೆಸರಿನಲ್ಲಿ ಜೂಜು; ರಮ್ಮಿ ಆಡುತ್ತಿದ್ದ 13 ಮಂದಿ ಮಮ್ಮಿಗಳು ಅರೆಸ್ಟ್​​
A post shared by La libreta morada | Mariana (@lalibretamorada)
ಈ ವಿಡಿಯೋಗೆ ನೆಟಿಜನ್‌ಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅವರ ಧೈರ್ಯ ಮತ್ತು ಸಾಹಸಕ್ಕಾಗಿ ದಂಪತಿಗೆ ಅಭಿನಂದನೆಗಳು. ಅತಿಥಿಗಳಿಗೂ ಅವಿಸ್ಮರಣೀಯ ಸಂಭ್ರಮವಾಗಲಿದೆ ಎನ್ನುತ್ತಾರೆ.
ಇದನ್ನೂ ಓದಿ:ಅಂದು 3 ಕಾಲಿನ ಕರು ಜನನ, ಇಂದು ಗುಡೇಕೋಟೆಯಲ್ಲಿ ಎರಡು ಕಾಲಿನ ಕರುವಿಗೆ ಜನ್ಮ ಕೊಟ್ಟ ಹಸು
ನನ್ನ ಮದುವೆಯನ್ನು ಹೀಗೇ ಮಾಡಬೇಕೆಂದಿದ್ದೇನೆ ಆದರೆ ಏನು ಮಾಡುವುದು ಧೈರ್ಯ ನನಗಿಲ್ಲ. ನವವಿವಾಹಿತರಿಗೆ ಅಭಿನಂದನೆಗಳು, ವಿಡಿಯೋ ನೋಡಿ ಭಯವಾಯಿತು ಎಂದು ಕಾಮೆಂಟ್​​ ಮಾಡಿದ್ದಾರೆ.
ವಿಡಿಯೋ ಗೇಮ್ ಆಡುತ್ತಿರುವ ಶ್ವಾನ; ಕಂಪ್ಯೂಟರ್ ಆಫ್ ಆದಾಗ ನಾಯಿ ಮಾಡಿದ್ದೇನು?

Sign in to your account
Please enter an answer in digits:2 × 1 =
Remember me
