ರಾಜ್‌ಕೋಟ್:ಗುಜರಾತ್‌ನ ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದ ಮನಕಲಕುವ ಅಗ್ನಿ ದುರಂತದಲ್ಲಿ ಮೃತಪಟ್ಟ 28 ಮಂದಿಯಲ್ಲಿ ಇಬ್ಬರು ನವವಿವಾಹಿತ ದಂಪತಿಯು ಸೇರಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ವಧುವಿನ ಸಹೋದರಿಯೂ ಕೂಡ ಈ ದುರಂತದಲ್ಲಿ ಮೃತಪಟ್ಟಿದ್ದಾರೆ.
ಮೃತಪಟ್ಟ ದಂಪತಿಯನ್ನು ಅಕ್ಷಯ್ ಧೋಲಾರಿಯಾ ಮತ್ತು ಪತ್ನಿ ಖ್ಯಾತಿ ಎಂದು ಗುರುತಿಸಲಾಗಿದೆ. ಖ್ಯಾತಿ ಸಹೋದರಿ ಹರಿತಾ ಕೊಡ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಗಷ್ಟೇ ಅಕ್ಷಯ್​ ಮತ್ತು ಖ್ಯಾತಿ ವಿವಾಹ ಸಂಭ್ರಮ ಜರುಗಿತ್ತು. ಮದುವೆ ಬಳಿಕ ಮೋಜು ಮಸ್ತಿಯಲ್ಲಿ ತೊಡಗಿದ್ದ ನವದಂಪತಿ ಟಿಆರ್‌ಪಿ ಗೇಮಿಂಗ್ ಝೋನ್​ಗೆ ಭೇಟಿ ನೀಡಿತ್ತು. ಆದರೆ, ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡಿದೆ.
ಕೆನಡಾದಲ್ಲಿ ಪಾಲಕರೊಂದಿಗೆ ವಾಸಿಸುತ್ತಿದ್ದ 24 ವರ್ಷದ ಅಕ್ಷಯ್, 20 ವರ್ಷದ ಖ್ಯಾತಿಯನ್ನು ಮದುವೆಯಾಗಲು ರಾಜ್‌ಕೋಟ್‌ಗೆ ಬಂದಿದ್ದರು. ದುರಂತ ಸಂಭವಿಸುವ ಒಂದು ವಾರಕ್ಕೂ ಮೊದಲು ಅಂದರೆ, ಕಳೆದ ಶನಿವಾರ ನ್ಯಾಯಾಲಯದ ಮೂಲಕ ರಿಜಿಸ್ಟರ್​ ಮದುವೆ ಆಗಿದ್ದರು. ಈ ವರ್ಷದ ಕೊನೆಯಲ್ಲಿ ಅದ್ಧೂರಿ ಮದುವೆ ಆಚರಣೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ, ವಿಧಿಯಾಟವೇ ಬೇರೆ ಇತ್ತು. ಇದೀಗ ಅಗ್ನಿ ದುರಂತದಲ್ಲಿ ನವದಂಪತಿ ಸುಟ್ಟು ಕರಕಲಾಗಿದ್ದಾರೆ.
ಇಬ್ಬರ ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದವು. ಉಂಗುರದ ಸಹಾಯದಿಂದ ಅಕ್ಷಯ್ ಅವರ ದೇಹವನ್ನು ಗುರುತಿಸಲಾಗಿದ್ದು, ಖ್ಯಾತಿ ಮತ್ತು ಹರಿತಾ ಅವರ ದೇಹಗಳನ್ನು ಡಿಎನ್ಎ ಪರೀಕ್ಷೆ ಮೂಲಕ ಪತ್ತೆಹಚ್ಚಲಾಯಿತು.
ವಾರಾಂತ್ಯದಲ್ಲಿ ಕೇವಲ 99 ರೂಪಾಯಿ ಪ್ರವೇಶ ಶುಲ್ಕದ ವಿಶೇಷ ಆಫರ್ ಇದ್ದಿದ್ದರಿಂದ ಗೇಮಿಂಗ್ ಝೋನ್​ಗೆ ಭಾರಿ ಸಂಖ್ಯೆಯಲ್ಲಿ ಜನರು ಬಂದಿದ್ದರು. ದುರದೃಷ್ಟವಶಾತ್ ಅಗ್ನಿ ಅನಾಹುತಕ್ಕೆ ಅವರೆಲ್ಲರು ಸಾಕ್ಷಿಯಾಗಬೇಕಾಯಿತು. ಬೇಸಿಗೆ ರಜೆಯಾಗಿದ್ದರಿಂದಲೂ ಅಪಾರ ಪ್ರಮಾಣದಲ್ಲಿ ಜನರು ಬಂದಿದ್ದರು. ಗೇಮಿಂಗ್ ಝೋನ್​ಗೆ ಕೇವಲ ಒಂದು ನಿರ್ಗಮನ ಬಾಗಿಲಿತ್ತು. ಮಾತ್ರವಲ್ಲದೆ ಅಗ್ನಿ ಅವಘಡ ಸ್ಥಳದಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ ಇರಲಿಲ್ಲ. ಅಗ್ನಿ ಶಾಮಕ ಪಡೆಯಿಂದ ನಿರಪೇಕ್ಷಣಾ ಸರ್ಟಿಫಿಕೆಟ್ (ಎನ್​ಒಸಿ) ಇಲ್ಲದೆಯೇ ಕೇಂದ್ರವನ್ನು ನಡೆಸಲಾಗುತ್ತಿತ್ತು ಎಂದು ಕೂಡ ತಿಳಿದು ಬಂದಿದೆ. ನಿಯಮಾವಳಿಗಳ ಉಲ್ಲಂಘನೆ ಹಲವು ಅಮೂಲ್ಯ ಪ್ರಾಣಹರಣಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ.
ದುರಂತದ ಹಿನ್ನೆಲೆಯಲ್ಲಿ ಟಿಆರ್​ಪಿ ಪಾಲುದಾರ ನಿತಿನ್ ಜೈನ್ ಮತ್ತು ಮ್ಯಾನೇಜರ್ ಯುವರಾಜ್ ಸಿಂಗ್ ಸೋಳಂಕಿಯನ್ನು ವಿಚಾರಣೆಗಾಗಿ ಪೊಲೀಸರು ಶನಿವಾರವೇ ವಶಕ್ಕೆ ಪಡೆದಿದ್ದಾರೆ.
ಶಾರ್ಟ್ ಸರ್ಕ್ಯೂಟ್ ಕಾರಣ?ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಆದರೆ, ತನಿಖೆಯ ನಂತರವಷ್ಟೇ ನಿಖರ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೆಂಕಿಯನ್ನು ಆರಿಸುವ ಕಾರ್ಯಾಚರಣೆ ಮುಂದುವರಿದಿದೆ. ತಾತ್ಕಾಲಿಕ ಕೇಂದ್ರ ಕುಸಿದು ಬಿದ್ದಿದ್ದರಿಂದ ಹಾಗೂ ಗಾಳಿಯ ವೇಗ ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಅಗ್ನಿಶಾಮಕ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರದ ಕಾರ್ಯ ನಿರ್ವಹಣೆಗಾಗಿ ಅಪಾರ ಪ್ರಮಾಣದ ಇಂಧನವನ್ನು ಸಂಗ್ರಹಿಸಲಾಗಿದ್ದು ಅದು ಕೂಡ ಬೆಂಕಿಯ ಜ್ವಾಲೆ ಶೀಘ್ರವಾಗಿ ಹರಡಿ ದುರಂತದ ತೀವ್ರತೆ ಹೆಚ್ಚಲು ಕಾರಣವಾಯಿತು ಎನ್ನಲಾಗಿದೆ. ಜನರೇಟರ್​ಗಾಗಿ 1,500ರಿಂದ 2,000 ಲೀಟರ್ ಡೀಸೆಲ್ ಮತ್ತು ಗೋ-ಕಾರ್ಟಿಂಗ್ ನಡೆಸಲು 1,000ದಿಂದ 1,500 ಲೀಟರ್ ಪೆಟ್ರೋಲ್ ಸಂಗ್ರಹಿಸಿಡಲಾಗಿತ್ತು. ಟಿಆರ್​ಪಿ ಗೇಮ್ ಝೋನ್​ನಲ್ಲಿ ಸಂಭವಿಸಿದ ಭೀಕರ ಅಗ್ನಿಕಾಂಡದ ತೀವ್ರತೆ ಎಷ್ಟಿತ್ತೆಂದರೆ ಅಲ್ಲಿಂದ ಮೇಲೆದ್ದ ಹೊಗೆ ಕೆಲವು ಕಿಲೋ ಮೀಟರ್​ಗಳಷ್ಟು ದೂರದಲ್ಲೂ ಕಾಣಿಸುತ್ತಿತ್ತು.
ಹೈಕೋರ್ಟ್ ತರಾಟೆರಾಜ್​ಕೋಟ್ ಅಗ್ನಿ ದುರಂತವನ್ನು ಭಾನುವಾರ ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿರುವ ಗುಜರಾತ್ ಹೈ ಕೋರ್ಟ್​ನ ವಿಶೇಷ ಪೀಠವೊಂದು, ಮೇಲ್ನೋಟಕ್ಕೆ ಇದೊಂದು ‘ಮಾನವಕೃತ ಮಹಾದುರಂತ’ ಆಗಿದೆ ಎಂದು ವರ್ಣಿಸಿದೆ. ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿಯನ್ನು ಪಡೆಯದೇ ಗೇಮಿಂಗ್ ಝೋನ್ ಮತ್ತು ಮನೋರಂಜನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಪೀಠದಲ್ಲಿರುವ ನ್ಯಾಯಮೂರ್ತಿಗಳಾದ ಬೀರೇನ್ ವೈಷ್ಣವ್ ಮತ್ತು ದೇವನ್ ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಅಹಮದಾಬಾದ್, ವಡೋದರಾ, ಸೂರತ್ ಮತ್ತು ರಾಜ್​ಕೋಟ್ ಮಹಾನಗರ ಪಾಲಿಕೆಗಳ ವಕೀಲರುಗಳಿಗೆ ಪೀಠ ನಿರ್ದೇಶಿಸಿದೆ.(ಏಜೆನ್ಸೀಸ್​)
ನಟ ಸಿದ್ಧಾರ್ಥ್​ನಿಂದಿಡಿದು ಶಂತನುವರೆಗೆ ಶ್ರುತಿ ಹಾಸನ್​ ಬಾಳಲ್ಲಿ ಬಂದು ಹೋದವರೆಷ್ಟು?

ನಮ್ಮ ಗೆಲುವಿಗೆ ಕಾರಣವಾದ SRH ತಂಡಕ್ಕೆ​ ಧನ್ಯವಾದಗಳು: ಶ್ರೇಯಸ್​ ಅಯ್ಯರ್ ಅಚ್ಚರಿಯ ಹೇಳಿಕೆ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 20 =
Remember me
