ತಿರುವನಂತಪುರಂ:ಜೀವನದಲ್ಲಿ ಸಾಕಷ್ಟು ಆಸೆ-ಆಕಾಂಕ್ಷೆಗಳನ್ನಿಟ್ಟುಕೊಂಡು ವೈವಾಹಿಕ ಜೀವನ ಪ್ರವೇಶಿಸಿದ್ದ ನವಜೋಡಿ ಮದುವೆಯಾದ ಕೇವಲ ಹತ್ತು ದಿನದಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ಶನಿವಾರ ಬೆಳಗ್ಗೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.
ಪಶ್ಚಿಮ ಕನ್ನಮಂಗಳಂದ ಸಲಾಹುದೀನ್ (25)​ ಹಾಗೂ ಚೆಲೆಂಬ್ರದ ಫಾತಿಮಾ ಜಮುನಾ (19) ಮೃತ ನವದಂಪತಿ. ಇಬ್ಬರು ಮಲಪ್ಪುರಂನಲ್ಲೇ ವಾಸವಿದ್ದರು. ಶನಿವಾರ ಬೆಳಗ್ಗೆ ದಂಪತಿ ಬೈಕ್​ನಲ್ಲಿ ಪ್ರಯಾಣಿಸುವಾಗ ಚೆಲೆಂಬ್ರ ಪಂಚಾಯಿತಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:ತಾಯಿಯನ್ನೇ ರೇಪ್​ ಮಾಡಿ ಕೊಲೆಗೈದ ಮಗ ಪೊಲೀಸರ ಬಳಿ ಹೇಳಿದ್ದು ಶಾಕಿಂಗ್ ವಿಚಾರ!​
ನವದಂಪತಿ ರಾಯಲ್​ ಎನ್​ಫೀಲ್ಡ್​ ಬೈಕನ್ನೇರಿ ಸಂಬಂಧಿಕರ ಮನೆಗೆ ಭೇಟಿ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಚೆಲೆಂಬ್ರ ಪಂಚಾಯಿತಿ ಬಳಿ ಬರುತ್ತಿದ್ದಂತೆ ಮತ್ತೊಂದು ವಾಹನವನ್ನು ಓವರ್​ಟೇಕ್​ ಮಾಡಲು ಸಲಾಹುದೀನ್​ ಯತ್ನಿಸಿದ್ದಾರೆ. ಆದರೆ, ಬೈಕ್​ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಅಪ್ಪಳಿಸಿದೆ. ಈ ವೇಳೆ ಎದುರುಗಡೆ ಬರುತ್ತಿದ್ದ ಲಾರಿಯ ಕೆಳಗೆ ಇಬ್ಬರು ಸಿಲುಕಿ, ಗಂಭೀರ ಗಾಯಗೊಂಡಿದ್ದರು.
ತೀವ್ರ ರಕ್ತಸ್ರಾವವಾಗಿ ಸಲಾಹುದೀನ್​ ಸ್ಥಳದಲ್ಲೇ ಮೃತಪಟ್ಟರೆ, ಫಾತಿಮಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಅಸುನೀಗಿದರು. ಇಬ್ಬರ ಶವವನ್ನ ಕೋಯಿಕ್ಕೋಡ್ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತೆನ್ಹಿಪಾಲಂ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಗಂಡನಿಂದ ಪಿಟ್ಸ್ ಬಂದಿರೋ ನಾಟಕ..!
ಪೊಲೀಸ್​ ಮೂಲಗಳ ಪ್ರಕಾರ ಕೋಯಿಕ್ಕೋಡ್​ನ ಫೆರೊಕೆ ಪೆತ್ತಾದಲ್ಲಿರುವ ಫಾತಿಮಾ ಅವರ ಸಂಬಂಧಿಕರ ಮನೆಗೆ ಭೇಟಿ ನೀಡಿ ದಂಪತಿ ಹಿಂದಿರುಗುವಾಗ ದುರ್ಘಟನೆ ಸಂಭವಿಸಿದೆ.(ಏಜೆನ್ಸೀಸ್​)
ಮಾಜಿ ಪ್ರಿಯಕರನ ಹೆಸರಲ್ಲಿ 1.25 ಕೋಟಿ ಪೀಕಿದ ಕಾಲೇಜು ಗೆಳತಿ ಸಿಕ್ಕಿಬಿದ್ದಿದೇ ರೋಚಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 8 =
Remember me
