ಭುವನೇಶ್ವರ್​:ನವ ವಿವಾಹಿತ ದಂಪತಿ ಬೆಡ್​ರೂಮ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಒಡಿಶಾದ ಕಟಕ್​ ಜಿಲ್ಲೆಯ ಬಂಕಿ ಬ್ಲಾಕ್​ ವ್ಯಾಪ್ತಿಯಲ್ಲಿ ಬರುವ ಭೇದರಾಮಚಂದ್ರಾಪುರ ಗ್ರಾಮದಲ್ಲಿ ಗುರುವಾರ (ಆ.31) ನಡೆದಿದೆ.
ಮೃತ ದಂಪತಿಯನ್ನು ಧರಣಿಧರ್​ ಸಾಹು ಮತ್ತು ನಿರುಪಮಾ ಸಾಹು ಎಂದು ಗುರುತಿಸಲಾಗಿದೆ. ಇಬ್ಬರು 7 ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಧರಣಿಧರ್​, ಜೀವನೋಪಾಯಕ್ಕಾಗಿ ಭುವನೇಶ್ವರದ ಸ್ವೀಟ್​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದರು. ಅನೇಕ ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಅದರಂತೆಯೇ ಬುಧವಾರ ಊರಿಗೆ ಬಂದಿದ್ದ. ಆದರೆ, ಗುರುವಾರ ಬೆಳಗ್ಗೆ ಕುಟುಂಬಸ್ಥರು ಎದ್ದು ನೋಡಿದಾಗ ಬೆಡ್​ರೂಮ್​ನ ಸೀಲಿಂಗ್​ ಫ್ಯಾನ್​ಗೆ ಧರಣಿಧರ್​ ಮತ್ತು ನಿರುಪಮಾ ನೇಣು ಬಿಗಿದುಕೊಂಡಿದ್ದಾರೆ.
ಇದನ್ನೂ ಓದಿ:ಖಂಡಿತವಾಗಿ ನಿಮಗಿಂತ ದೊಡ್ಡದು! ಅಶ್ಲೀಲ ಪ್ರಶ್ನೆ ಕೇಳಿದ ನೆಟ್ಟಿಗನಿಗೆ ಖಡಕ್​ ಉತ್ತರ ಕೊಟ್ಟ ನಟಿ ಶಾಲೂ
ಇದಾದ ಬಳಿಕ ಕುಟುಂಬಸ್ಥರು ಇಬ್ಬರ ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ಮಾಡಿ ಮುಗಿಸಲು ಪ್ರಯತ್ನಿಸಿದರು. ಆದರೆ, ಈ ವಿಚಾರ ಸ್ಥಳೀಯ ಪೊಲೀಸರಿಗೆ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂತ್ಯಕ್ರಿಯೆಯನ್ನು ತಡೆದಿದ್ದಾರೆ ಮತ್ತು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ಪಡೆದುಕೊಂಡರು.
ಸಾವಿಗೆ ನಿಖರವಾದ ಕಾರಣ ಏನೆಂಬುದು ಇನ್ನು ತಿಳಿದಿಲ್ಲ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಕಾರಣ ತಿಳಿಯಬಹುದು. ಪ್ರಾಥಮಿಕ ತನಿಖೆಯ ಪ್ರಕಾರ ಕೌಟುಂಬಿಕ ಸಮಸ್ಯೆಗಳಿಂದಾಗಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ರಾಜಧಾನಿಯಲ್ಲಿ ಮಳೆರಾಯನ ಅಬ್ಬರ: ಹಲವು ಏರಿಯಾ ಜಲಾವೃತ, ಸೆ.7ರವರೆಗೆ ಮಳೆ ಮನ್ಸೂಚನೆ

ಬಂಧಿತ IRS ಅಧಿಕಾರಿ ಜತೆ ನವ್ಯಾ ಡೇಟಿಂಗ್​? ದುಬಾರಿ ಗಿಫ್ಟ್​ ರಹಸ್ಯ ಹಿಂದೆ ಬಿದ್ದ ಇಡಿ, ನಟಿಯ ಕುಟುಂಬಸ್ಥರು ಹೇಳಿದ್ದಿಷ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
