ಕೊಚ್ಚಿ:ನವ ವಿವಾಹಿತರು ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳುವುದು ಸದ್ಯದ ಟ್ರೆಂಡ್. ಹೊಸ ಹೊಸ ಕಾನ್ಸೆಪ್ಟ್​ ಮೂಲಕ ವಿಭಿನ್ನ ಮಾದರಿಯ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ನಮ್ಮ ಫೋಟೋಶೂಟ್ ವಿಭಿನ್ನವಾಗಿರಬೇಕೆಂದು ನವ ಜೋಡಿಗಳು ಸಾಹಸಕ್ಕೂ ರೆಡಿಯಿರುತ್ತಾರೆ. ಇವರ ಸಾಹಸ ಕೆಲವು ಬಾರಿ, ಹಲವು ಅವಾಂತರಗಳಿಗೆ ದಾರಿ ಮಾಡಿಕೊಡುತ್ತದೆ. ಈ ಹಿಂದೆ ವೆಡ್ಡಿಂಗ್​ ಫೋಟೋಶೂಟ್ ವೇಳೆ ಜೀವಕ್ಕೇ ಹಾನಿ ಮಾಡಿಕೊಂಡಿರುವ ಸಂಗತಿಗಳನ್ನು ಕೇಳಿದ್ದೆವು.
ಇದೀಗ ಕೇರಳದ ಪ್ರಸಿದ್ಧ ಗುರುವಾಯೂರ್ ದೇವಸ್ಥಾನದಲ್ಲಿ ನವವಿವಾಹಿತ ದಂಪತಿಗಳು ಫೋಟೋ ಸೆಶನ್‌ಗೆ ಮುಂದಾಗಿದ್ದಾರೆ. ಫೋಸ್​​ ನೀಡುತ್ತಿರುವಾಗ ಹಿಂದೆ ಇದ್ದಂತಹ ಆನೆ ವಿಚಲಿತಗೊಂಡಿದೆ. ಇದರಿಂದ ಅಲ್ಲಿದ್ದ ಜನರು ಕಡಿಮೆ ಅಂತರದಲ್ಲಿ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಕೊನೆಗೆ ನವಜೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವರದಿಯ ಪ್ರಕಾರ, ಈ ಘಟನೆ ನವೆಂಬರ್ 10 ರಂದು ಗುರುವಾಯೂರು ದೇವಸ್ಥಾನದ ಹೊರಾಂಗಣದಲ್ಲಿ ಸಂಭವಿಸಿದೆ. ಆನೆ ವಿಚಲಿತಗೊಂಡ ವೇಳೆ, ಅಲ್ಲಿದ್ದ ಜನರು ಬೆಚ್ಚಿ ಬಿದ್ದಿರುವುದನ್ನು ಗಮನಿಸಬಹುದು.
A post shared by Wedding Mojito (@weddingmojito)

ಫೋಟೋಗ್ರಾಫರ್ ನವ ದಂಪತಿಗಳ ಫೋಟೋ ಕ್ಲಿಕ್ಕಿಸಲು ಪ್ರಾರಂಭಿಸುತ್ತಿದ್ದಂತೆ, ದಂಪತಿಗಳ ಹಿಂಭಾಗದಲ್ಲಿದ್ದ ಆನೆ ಉದ್ರೇಕಗೊಂಡಿದೆ. ನಂತರ ಅಲ್ಲಿದ್ದ ಜನರ ಮೇಲೆ ದಾಳಿ ಮಾಡಲು ಮುಂದಾಗುತ್ತದೆ. ಈ ವೇಳೆ ವ್ಯಕ್ತಿಯೊಬ್ಬನನ್ನು ಸೊಂಡಿಲಿನಿಂದ ಎತ್ತಿಕೊಳ್ಳಲು ಮುಂದಾಗುತ್ತದೆ. ಕೂದಲೆಳೆ ಅಂತರದಲ್ಲಿ ಕೆಳಗೆ ಬಿದ್ದ ವ್ಯಕ್ತಿ ತಪ್ಪಿಸಿಕೊಳ್ಳುತ್ತಾನೆ. ಇಷ್ಟಕ್ಕೆ ಸುಮ್ಮನಾಗದ ಆನೆ, ಆ ವ್ಯಕ್ತಿಯ ಪಂಚೆಯನ್ನು ಎಳೆಯುತ್ತದೆ.
ಈ ಘಟನೆಯನ್ನು ನವ ಜೋಡಿಗಳು ನೆನಪಿಸಿಕೊಂಡಿದ್ದು, ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಜನರೆಲ್ಲರೂ ಕಿರುಚಲು ಆರಂಭಿಸಿದರು. ಈ ವೇಳೆ ಹಿಂತಿರುಗಿ ನೋಡಿದಾಗ ಆನೆ ಕೆರಳಿತ್ತು. ಕೂಡಲೇ ಪತ್ನಿಯ ಕೈ ಹಿಡಿದು ಓಡಿದೆವು ಎಂದು ಹೇಳಿದ್ದಾರೆ.
ಹಿಂದೂ ಯುವಕರನ್ನು ಮದುವೆಯಾದ ಮುಸ್ಲಿಂ ಯುವತಿಯರು; ನವ ಜೋಡಿಗೆ ರಕ್ಷಣೆಯ ಭರವಸೆ ನೀಡಿದ ಪೊಲೀಸರು!

VIDEO: ಮದ್ಯ ಮಾರಾಟ ಮಾಡುತ್ತಾ ಬಂದ ಆಟೋ ರಿಕ್ಷಾ; ಈ ಆಲ್ಕೋಹಾಲ್ ಕುಡಿದರೆ ಹೆಂಡತಿಯೊಂದಿಗೆ ಭಯವಿಲ್ಲದೆ ಮಾತನಾಡಬಹುದಂತೆ!

VIDEO: ಟಿಕೆಟ್ ಇಲ್ಲದೆ ಪ್ರಯಾಣಿಸಿದ ಇನ್ಸ್​​ಪೆಕ್ಟರ್​​; ಪ್ರಶ್ನಿಸಿದ ಜನರಿಗೆ ಕಳ್ಳರನ್ನು ಹಿಡಿದುಕೊಡಲು ನಿಮ್ಮಿಂದ ಸಾಧ್ಯವಾ ಎಂದ ಅಧಿಕಾರಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 9 =
Remember me
