ಛತ್ತೀಸ್​ಗಢ:ಮದುವೆಯಲ್ಲಿ ವಧು-ವರರಿಗೆ ಉಡುಗೊರೆ ನೀಡಿ ಶುಭ ಹಾರೈಸುವುದು ಸಹಜ. ಆದರೆ ಇಲ್ಲೊಬ್ಬ ವರನಿಗೆ ಹಾಗೆ ಕೊಟ್ಟಿದ್ದ ಉಡುಗೊರೆಯೇ ಪ್ರಾಣಕ್ಕೆ ಮುಳುವಾಗಿದೆ. ಅರ್ಥಾತ್, ಮದುವೆಗೆ ಉಡುಗೊರೆಯಾಗಿ ಕೊಟ್ಟಿದ್ದ ಹೋಮ್​ ಥಿಯೇಟರ್​ ನವವಿವಾಹಿತ ಮಾತ್ರವಲ್ಲದೆ ಆತನ ಅಣ್ಣನ ಪ್ರಾಣವನ್ನೂ ತೆಗೆದಿದೆ. ಜತೆಗೆ ನಾಲ್ವರನ್ನು ಗಾಯಗೊಳಿಸಿದೆ.
ಇದನ್ನೂ ಓದಿ:4 ವರ್ಷ ಕಳೆದರೂ ಕಳವಾದ ಚಿನ್ನದ ಸರ ಪತ್ತೆ ಮಾಡಲಾಗದೆ ಹೊಸ ಸರ ಕೊಡಿಸಿದ ಪೊಲೀಸರು!; ಆಗಿದ್ದೇನು?
ಛತ್ತೀಸ್​ಗಢದ ಕಬೀರ್​ಧಾಮ್​ ಜಿಲ್ಲೆಯ ಚಾಮರಿ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಹೇಮೇಂದ್ರ ಮೇರಾವಿ (22) ಮತ್ತು ಆತನ ಅಣ್ಣ ರಾಜ್​ಕುಮಾರ್ (30) ಸಾವಿಗೀಡಾದವರು. ಮಾತ್ರವಲ್ಲದೆ ಒಂದೂವರೆ ವರ್ಷದ ಮಗು ಸೇರಿದಂತೆ ಇನ್ನು ನಾಲ್ವರು ಈ ಪ್ರಕರಣದಲ್ಲಿ ಗಾಯಗೊಂಡಿದ್ದರು. ಏ. 1ರಂದು ಹೇಮೇಂದ್ರ ಮದುವೆಯಾಗಿದ್ದು, ಅಂದು ಉಡುಗೊರೆಯಾಗಿ ಸ್ವೀಕರಿಸಿದ್ದ ಹೋಮ್​ ಥಿಯೇಟರ್​ನಿಂದಾಗಿ ಈ ದುರಂತ ಸಂಭವಿಸಿದೆ. ಸ್ಫೋಟದಿಂದಾಗಿ ಹೇಮೇಂದ್ರ ಸ್ಥಳದಲ್ಲೇ ಸಾವಿಗೀಡಾದರೆ, ಗಂಭೀರ ಗಾಯಗೊಂಡಿದ್ದ ರಾಜ್​ಕುಮಾರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಪ್ರಾಮಾಣಿಕ ಎಸ್​ಐ ಎಂದು ಗಣರಾಜ್ಯೋತ್ಸವದಂದು ಪ್ರಶಸ್ತಿ ಪಡೆದಿದ್ದಾಕೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ಲು!
ಮದುವೆಗೆ ಬಂದಿದ್ದ ಉಡುಗೊರೆಗಳನ್ನೆಲ್ಲ ತೆರೆಯುತ್ತಿದ್ದ ಹೇಮೇಂದ್ರ ಮತ್ತು ಮನೆಯವರು ಉಡುಗೊರೆಯಾಗಿ ಬಂದಿದ್ದ ಹೋಮ್​ ಥಿಯೇಟರ್​ ಕಂಡು ಖುಷಿಯಾಗಿದ್ದರು. ಅದನ್ನು ಪ್ಲಗ್ ಮಾಡಿ ವೀಕ್ಷಿಸಲು ಆರಂಭಿಸುತ್ತಿದ್ದಂತೆ ಅದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಹೋಮ್ ಥಿಯೇಟರ್ ಇರಿಸಿದ್ದ ಕೋಣೆಯ ಗೋಡೆ ಕುಸಿದಿದ್ದ, ಛಾವಣಿಯೂ ಜಖಂಗೊಂಡಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಫೋಟಕ್ಕೆ ಕಾರಣ ಏನು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. –ಏಜೆನ್ಸೀಸ್
ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

ಅರ್ಚಕರಿಗೆ ಹೃದಯಾಘಾತ, ಅರ್ಧಕ್ಕೇ ನಿಂತ ಜಾತ್ರೆ; ಕಳಶ ಹೊತ್ತು ಸಾಗುತ್ತಿದ್ದವರು ಕುಸಿದು ಬಿದ್ದು ಸಾವು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 3 =
Remember me
