ರಾಯ್​ಪುರ:ನವದಂಪತಿ ನಡುವೆ ನಿಗದಿಯಾಗಿದ್ದ ಆರತಕ್ಷತೆ ಕಾರ್ಯಕ್ರಮಕ್ಕೂ ಮುನ್ನ ವಾಗ್ವಾದ ನಡೆದಿದ್ದು, ಪತಿ ಚಾಕುವಿನಿಂದ ಪತ್ನಿಯನ್ನು ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಬ್ರಿಜ್​​ ನಗರದಲ್ಲಿ ನಡೆದಿದೆ. ಘಟನೆಯಿಂದ ಆರತಕ್ಷತೆಯ ಸಂಭ್ರಮದಲ್ಲಿದ್ದ ಮಂದಿ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.
ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ತಿಕ್ರಪಾರ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು ಚಾಕುವಿನಿಂದ ಇರಿತಕ್ಕೊಳಗಾದ ಗಾಯಗಳೊಂದಿಗೆ ಮೃತದೇಹ ಪತ್ತೆಯಾಗಿದೆ. ದಂಪತಿಗಳ ನಡುವೆ ಗಲಾಟೆ ಆರಂಭವಾಗಿದ್ದು, ಗಂಡ ಚಾಕುವಿನಿಂದ ಪತ್ನಿಗೆ ಇರಿದು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕಂಡಕ್ಟರ್ 1 ರೂ. ಚಿಲ್ಲರೆ ನೀಡಿಲ್ಲ ಅಂತ ಕೋರ್ಟ್ ಮೊರೆ ಹೋಗಿದ್ದ ವ್ಯಕ್ತಿಗೆ ಸಿಕ್ಕಿತು 2000 ರೂ. ಪರಿಹಾರ!
ಅಸ್ಲಾಂ(24) ಹಾಗೂ ಕಹ್ಕಶಾ ಬಾನೊ(22) ಮೃತಪಟ್ಟ ನವದಂಪತಿ. ಇವರಿಬ್ಬರ ಮದುವೆ ಕಳೆದ ಭಾನುವಾರ(ಫೆ.19) ನಡೆದಿದ್ದು, ಮಂಗಳವಾರ(ಫೆ.21) ರಾತ್ರಿ ವಿವಾಹ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಯಾರೂ ಊಹಿಸಿರದ ಘಟನೆ ನಡೆದಿದೆ. ನವ ದಂಪತಿಗಳಿದ್ದ ಕೋಣೆಯೊಳಗಿನಿಂದ ವಧುವಿನ ಕಿರುಚಾಟ ಕೇಳಿಸಿ, ಗಾಬರಿಯಲ್ಲಿ ವರನ ತಾಯಿ ಬಂದು ನೋಡಿದಾಗ ಮೃತದೇಹ ಕಂಡು ಬಂದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಬಾಯ್​​ಫ್ರೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ 19ರ ಯುವತಿ; ಇದಕ್ಕಾಗಿ ಮಾಡಿದ್ದು ಮಾತ್ರ ಹೇಯ ಕೃತ್ಯ!
ಕೋಣೆಯ ಒಳಗಿನಿಂದ ಬೀಗ ಹಾಕಲ್ಪಟ್ಟಿದ್ದು, ಕಿಟಕಿಯಿಂದ ಇಣುಕಿ ನೋಡಿದಾಗ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲನ್ನು ಒಡೆದಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೃತ್ಯಕ್ಕೆ ಬಳಸಲಾಗಿರುವ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆಗೆ ಮುಂದಾಗಿದ್ದಾರೆ.(ಏಜೆನ್ಸೀಸ್)
ಇದನ್ನೂ ಓದಿ:ದೇವಾಲಯಕ್ಕೆ ಮಾಂಸದ ಹಾರ ತಂದುಕೊಟ್ಟ ಕಿಡಿಗೇಡಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 7 =
Remember me
