ಪಲಕ್ಕಾಡ್​:ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಪಲಕ್ಕಾಡ್​​ನಲ್ಲಿ ನಡೆದಿದೆ.
ನಿನ್ನೆ (ಜು.10) ಬೆಳಗ್ಗೆ​ ಪಲಕ್ಕಾಡ್​ನ ಪುದುಸ್ಸೆರಿಯ ಕುರುಡಿಕಾಡ್​ ಎಂಬ ಪ್ರದೇಶದಲ್ಲಿ ಲಾರಿ ಮತ್ತು ಬೈಕ್​ ನಡುವೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಅನಿಶಾ(20) ಮೃತ ದುರ್ದೈವಿ. ಈಕೆ ಪುಥುಕೋಡ್​ನ ಕಣ್ಣನ್ನೂರ್​ ಮೂಲದವಳು. ಕೊಯಮತ್ತೂರು ಮೂಲದ ಆಕೆಯ ಪತಿ ಶಕೀರ್​ (32) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಪರ್ಯಾಯ ಮಾರ್ಗದ ಜಾಣ್ಮೆ: ನಗದು ವರ್ಗಾವಣೆ ಮೂಲಕ ಅನ್ನಭಾಗ್ಯ ಯೋಜನೆ ಜಾರಿ
ಅನಿಶಾ ಮತ್ತು ಶಕೀರ್​ ಕಳೆದ ಜೂನ್​ 4ರಂದು ಮದುವೆಯಾದರು. ಕೇವಲ ಒಂದು ತಿಂಗಳಲ್ಲಿ ಅನಿಶಾ ದಾರುಣ ಸಾವಿಗೀಡಾಗಿದ್ದಾಳೆ. ನೆಮ್ಮಾರ ಕುನಿಸ್ಸೆರಿಯ ಸಂಬಂಧಿಕರ ಮನೆಯಲ್ಲಿ ಹಬ್ಬ ಮುಗಿಸಿಕೊಂಡು ಅನಿಶಾ, ಕೊಯಮತ್ತೂರಿನ ಗಂಡನ ಮನೆಗೆ ಬರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅನಿಶಾ ಮತ್ತು ಶಕೀರ್​ ಇದ್ದ ಬೈಕ್​ ಪಲಕ್ಕಾಡ್​ನಿಂದ ಕೊಯಮತ್ತೂರಿಗೆ ತೆರಳಿತ್ತು. ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಕಂಟೈನರ್, ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅನಿಶಾ ಸ್ಥಳದಲ್ಲೇ ಮೃತಪಟ್ಟಳು. ಬೈಕ್​ ಓಡಿಸುತ್ತಿದ್ದ ಶಕೀರ್​ಗೆ ಗಂಭೀರ ಗಾಯವಾಗಿದೆ. ಕಂಟೈನರ್​ ಓವರ್​ಟೇಕ್​ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯನ್ನು ಕಳೆದುಕೊಂಡ ಶಕೀರ್​ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಐಐಟಿಗಳ ಪ್ರವೇಶಕ್ಕೆ ಒಂದೇ ಪರೀಕ್ಷೆ: ಜೆಇಇ ಅಡ್ವಾನ್ಸ್ಡ್​ ಕೊಕ್? ಐಐಟಿ ನಿರ್ವಹಣಾ ಮಂಡಳಿ ಸಭೆಯಲ್ಲಿ ಚರ್ಚೆ

ನಮ್ಮ ಮದ್ವೆ ಆಗಿ 20 ದಿನಗಳಾಗಿವೆ. ಕಳೆದ ವಾರ ಒಬ್ಳು ಬಂದು ತನಗೂ ನಮ್ಮೆಜಮಾನ್ರಿಗೂ 8 ವರ್ಷಗಳ ಹಿಂದೆಯೇ ಮದ್ವೆ ಆಗಿದ್ದ ದಾಖಲೆ ತೋರಿಸಿ ಹೋಗಿದ್ದಾಳೆ, ಈಗೇನು ಮಾಡ್ಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 20 =
Remember me
