ಗುರುಗ್ರಾಮ್​:ಮದುವೆಯಾದ ಎರಡೇ ದಿನಕ್ಕೆ ನವವಧುವೊಬ್ಬಳು 1.5 ಲಕ್ಷ ರೂ. ನಗದು ಮತ್ತು ಆಭರಣದೊಂದಿಗೆ ಅತ್ತೆ ಮನೆಯಿಂದ ಎಸ್ಕೇಪ್​ ಆಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ಸೋಮವಾರ (ಅ.16) ವರದಿ ಮಾಡಿದ್ದಾರೆ.
ಅಶೋಕ್ ಕುಮಾರ್​​ ಎಂಬುವರು ತಮ್ಮ ಮಗನಿಗೆ ಸೂಕ್ತವಾದ ವಧುವನ್ನು ಹುಡುಕುತ್ತಿದ್ದರು. ಈ ವೇಳೆ ಪರಿಚಿತ ಮನೀಶ್​ ಎಂಬುವರಿಂದ ಮಂಜು ಎಂಬಾಕೆಯ ಪರಿಚಯವಾಗಿದೆ. ಬಳಿಕ ಮಂಜು, ನಿಮ್ಮ ಮಗನಿಗೆ ಸೂಕ್ತವಾದ ಹುಡುಗಿಯನ್ನು ನಾನು ಹುಡುಕಿಕೊಡುತ್ತೇನೆ, ನನಗೆ ಒಂದು ಕುಟುಂಬ ಗೊತ್ತಿದೆ. ನಿಮ್ಮ ಮಗನಿಗೆ ಆ ಕುಟುಂಬದ ಹೆಣ್ಣು ಸರಿಯಾಗಿ ಹೊಂದಾಣಿಕೆಯಾಗುತ್ತಾಳೆ ಎಂದು ಅಶೋಕ್​ ಅವರನ್ನು ನಂಬಿಸುತ್ತಾಳೆ. ಆಕೆಯನ್ನು ಅಶೋಕ್​ ನಂಬಿದಾಗ ವಧುವಿನ ಕುಟುಂಬಸ್ಥರನ್ನೂ ಮಂಜು ಪರಿಚಯ ಮಾಡಿಕೊಡುತ್ತಾಳೆ.
ಪರಿಚಯ ಮಾಡಿಸಿಕೊಟ್ಟ ಬಳಿಕ ವಧುವಿನ ಕುಟುಂಬದವರು ತುಂಬಾ ಬಡವರು ಎಂದು ಮಂಜು ಹೇಳುತ್ತಾಳೆ. ಅವರ ಕಷ್ಟವನ್ನು ಅರಿತ ಅಶೋಕ್​, ವರದಕ್ಷಿಣೆ ಪಡೆಯಲ್ಲ ಎಂದು ಭರವಸೆ ನೀಡುತ್ತಾರೆ. ಅಲ್ಲದೆ, ಮದುವೆ ತಯಾರಿಗೆ ಬಟ್ಟೆ ಖರೀದಿಗೆಂದು ವಧುವಿನ ಮನೆಯವರಿಗೆ 1 ಲಕ್ಷ ರೂಪಾಯಿ ನೀಡುತ್ತಾರೆ. ಇತ್ತೀಚೆಗಷ್ಟೇ ಪ್ರೀತಿ ಹೆಸರಿನ ವಧುವಿನ ಜತೆ ಅಶೋಕ್​ ಮಗನ ಮದುವೆ ಸಹ ಆಗುತ್ತದೆ. ಬಳಿಕ ಪ್ರೀತಿ, ಗಂಡನ ಮನೆಗೆ ಬಂದ ಮಾರನೇ ದಿನವೇ ನಾಪತ್ತೆಯಾಗುತ್ತಾಳೆ.
ಇದನ್ನೂ ಓದಿ:2035ಕ್ಕೆ ಬಾಹ್ಯಾಕಾಶ ನಿಲ್ದಾಣ, 2040ಕ್ಕೆ ಚಂದ್ರನಲ್ಲಿಗೆ ಮೊದಲ ಮಾನವ ಗುರಿ: ಇಸ್ರೋಗೆ ಪ್ರಧಾನಿ ನಿರ್ದೇಶನ
ಪ್ರೀತಿ ಎಲ್ಲಿ ಹೋದಳು ಎಂದು ಅಶೋಕ್​ ಹುಡುಕಾಡುವಾಗ ಆಕೆ 1.5 ಲಕ್ಷ ರೂ. ನಗದು ಮತ್ತು ಆಭರಣಗಳೊಂದಿಗೆ ಎಸ್ಕೇಪ್​ ಆಗಿರುವುದು ಗೊತ್ತಾಗುತ್ತದೆ. ಬಳಿಕ ಈ ವಿಚಾರವನ್ನು ಅಶೋಕ್​, ಮಂಜುಗೆ ತಿಳಿಸಿದಾಗ ಆಕೆಯನ್ನು ಸಂಪರ್ಕ ಮಾಡುವುದಾಗಿ ಭರವಸೆ ನೀಡುತ್ತಾಳೆ. ಆದರೆ, ಪ್ರೀತಿಯ ಸುಳಿವು ಮಾತ್ರ ಸಿಗುವುದೇ ಇಲ್ಲ. ಮತ್ತೆ ಅಶೋಕ್​ ಅವರು ಮಂಜುವನ್ನು ಸಂಪರ್ಕಿಸಿದಾಗ ಆಕೆಯ ಕಡೆಯವರು ಅಶೋಕ್​ಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಮೋಸ ಹೋಗಿರುವುದು ಗೊತ್ತಾದ ಬಳಿಕ ಅಶೋಕ್​ ಅವರು ಭಾನುವಾರ (ಅ.15) ಪ್ರೀತಿ, ಮಂಜು ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಬಿಲಾಸ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್​)
ನನಗೆ ಲಘು ಶಸ್ತ್ರ ಚಿಕಿತ್ಸೆಯಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದೇನೆ…ನೀವ್ಯಾರು ಆಸ್ಪತ್ರೆಗೆ ಬರಬೇಡಿ: ಬೊಮ್ಮಾಯಿ

SSC ಪರೀಕ್ಷೆ |ಸರಿಯುತ್ತರ ಬಿಡುಗಡೆ: ಚೆಕ್‌ ಮಾಡಲು ಲಿಂಕ್ ಇಲ್ಲಿದೆ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 13 =
Remember me
