ಲಖೀಮ್​ಪುರ:ಮಾಂಸದಡುಗೆ ಮಾಡುವ ವಿಚಾರದಲ್ಲಿ ನವದಂಪತಿ ಮಧ್ಯೆ ವಾಗ್ವಾದ ಶುರುವಾಗಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಸಾನಗರ ಪ್ರದೇಶದಲ್ಲಿ ಸೋಮವಾರ ನಡೆದಿದೆ.ಗುರು ದಯಾಳ್ (22) ರೇಷ್ಮಾ (19) ಅವರ ವಿವಾಹ ಜೂನ್ 12 ರಂದು ನಡೆದಿತ್ತು.ಸಸ್ಯಾಹಾರಿಯಾಗಿದ್ದ ರೇಷ್ಮಾ, ಪತಿ ಅಡುಗೆಮನೆಯಲ್ಲಿ ಮಾಂಸ ಬೇಯಿಸುವುದಕ್ಕೆ ಆಕ್ಷೇಪಿಸಿ, ಅಡುಗೆ ಮನೆಯಾಚೆ ಮಾಂಸದಡುಗೆ ಮಾಡಲು ತಿಳಿಸಿದ್ದಾಳೆ. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಆತ ಅಡುಗೆ ಮನೆಯಲ್ಲೇ ಮಾಂಸದಡುಗೆ ಮಾಡಲು ತಾಯಿಗೆ ತಿಳಿಸುತ್ತಾನೆ.
ಇದನ್ನೂ ಓದಿ:ಮತ್ತೊಂದು ಆತಂಕಕಾರಿ ಘಟನೆ; ವಿದ್ಯುತ್ ತಂತಿ ಸ್ಪರ್ಶದಿಂದ ಆನೆ ಮರಿ ಸಾವು
ಇದೇ ವಿಷಯವಾಗಿ ದಂಪತಿಯ ಮಧ್ಯೆ ವಾಗ್ವಾದ ತಾರಕಕ್ಕೇರಿ ರಾತ್ರಿ ಇಬ್ಬರೂ ವಿಷಕಾರಿ ಪದಾರ್ಥ ಸೇವಿಸಿದ್ದಾರೆಂದು ತಿಳಿದುಬಂದಿದೆ.ಗುರು ದಯಾಳ್ ಅವರ ತಂದೆ ಶಿವನಾಥ್ ವಿಷ ಸೇವಿಸಿದ ಆ ನವದಂಪತಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ:ಕೋವಿಡ್-19: ಒಂದೇ ದಿನದಲ್ಲಿ 2 ಲಕ್ಷಕ್ಕೂ ಹೆಚ್ಚು ಮಾದರಿಗಳ ಪರೀಕ್ಷೆ; ಭಾರತದ ಸಾಧನೆ
ಅಡುಗೆಮನೆಯಲ್ಲಿ ಮಾಂಸದಡುಗೆ ಮಾಡಿದ ನಂತರ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕಿತ್ಸೆಯ ವೇಳೆ ಪತ್ನಿ ಸಾವನ್ನಪ್ಪಿದ್ದು, ಪತಿಯ ಸ್ಥಿತಿ ಚಿಂತಾಜನಕವಾಗಿದೆ. ಈ ಪ್ರಕರಣದ ಕುರಿತು ಇನ್ನೂ ಎಫ್‌ಐಆರ್ ದಾಖಲಿಸಲಾಗಿಲ್ಲ ಎಂದು ಇಸಾನಗರ ಪೊಲೀಸ್ ಠಾಣಾಧಿಕಾರಿ ಸುನೀಲ್ ಸಿಂಗ್ ತಿಳಿಸಿದ್ದಾರೆ.
ಗುಡ್ ನ್ಯೂಸ್…! ಒಂದು ಕೋಟಿ ಜನರಿಗೆ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಲು ಮುಂದಾಗಿದೆ ಈ ರಾಜ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 1 =
Remember me
