ನವದೆಹಲಿ:ಹೊಸ ಸಂಸತ್ ಭವನ ಇಂದು ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದು, ಐತಿಹಾಸಕ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು ಸಾಕ್ಷಿಯಾಗಲಿದ್ದಾರೆ. ಬೆಳಗ್ಗೆ ಏಳು ಗಂಟೆಯಿಂದ ಧಾರ್ವಿುಕ ವಿಧಿವಿಧಾನಗಳು ಸೇರಿ ಅಂದಾಜು ಏಳು ತಾಸು ನಿರಂತರ ಕಾರ್ಯಕ್ರಮಗಳು ನಡೆಯಲಿವೆ. ಸಮಾರಂಭವು ಹವನ ಮತ್ತು ಪೂಜೆಯೊಂದಿಗೆ ಆರಂಭವಾಗಿ ಪ್ರಧಾನಿ ಮೋದಿ ಭಾಷಣದೊಂದಿಗೆ ಸಂಪನ್ನಗೊಳ್ಳಲಿದೆ. ಈ ಐತಿಹಾಸಿಕ ಕಾರ್ಯಕ್ರಮದ ಕ್ಷಣ ಕ್ಷಣದ ಮಾಹಿತಿಗಾಗಿ ಈ ಕೆಳಗಿನ ದಿಗ್ವಿಜಯ ನ್ಯೂಸ್​ ನೇರಪ್ರಸಾರವನ್ನು ವೀಕ್ಷಿಸಿ.
https://www.youtube.com/watch?v=kiZEOVPpr4o
ನೂತನ ಕಟ್ಟಡದ ವೈಶಿಷ್ಟ್ಯಗಳು* 2020 ಡಿಸೆಂಬರ್ 10ಕ್ಕೆ ಪ್ರಧಾನಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ.* 13 ಎಕರೆಯಲ್ಲಿ ಅಂದಾಜು 1200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ.* ಲೋಕಸಭೆ ಛಾವಣಿ ನವಿಲಿನಾಕಾರದಲ್ಲಿ, ರಾಜ್ಯಸಭೆ ಕಮಲದಾಕಾರದಲ್ಲಿ ನಿರ್ಮಾಣ* ನೂತನ ಕಟ್ಟಡ 150 ವರ್ಷ ಬಾಳಿಕೆ ನಿರೀಕ್ಷೆ* ಹೊಸ ಲೋಕಸಭೆಯಲ್ಲಿ 888 ಜನ, ರಾಜ್ಯಸಭೆಯಲ್ಲಿ 384 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ.* ಹಳೆಯ ಭವನದಲ್ಲಿ ಸೆಂಟ್ರಲ್ ಹಾಲ್ ಇದ್ದರೆ ನೂತನ ಕಟ್ಟಡದಲ್ಲಿ ಸೆಂಟ್ರಲ್ ಹಾಲ್ ಇಲ್ಲ. ಜಂಟಿ ಅಧಿವೇಶನಕ್ಕಾಗಿ ಲೋಕಸಭೆಯಲ್ಲೇ 1,272 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ.* ನೂತನ ಭವನವು 4 ಅಂತಸ್ತಿನ ಕಟ್ಟಡವಾಗಿದ್ದು, 64,500 ಚದರ ಮೀಟರ್ ವಿಸ್ತೀರ್ಣ ಹೊಂದಿದೆ.* ಜ್ಞಾನ ದ್ವಾರ, ಶಕ್ತಿ ದ್ವಾರ ಹಾಗೂ ಕರ್ಮ ದ್ವಾರ ಎಂಬ ಮೂರು ಪ್ರಮುಖ ದ್ವಾರಗಳ ನಿರ್ವಣ. ಸಂಸದರು, ವಿಐಪಿ ಸಂದರ್ಶಕರು ಹಾಗೂ ಅಧಿಕಾರಿಗಳಿಗಾಗಿ ಪ್ರತ್ಯೇಕ ಪ್ರವೇಶ ದ್ವಾರ.* ಭವನದ ಮೇಲೆ ರಾಷ್ಟ್ರೀಯ ಲಾಂಛನದ ಪ್ರತಿರೂಪ ಇರಿಸಲಾಗಿದೆ. 9,500 ಕೆ.ಜಿ ಕಂಚಿನ ಪ್ರತಿಮೆ 6.5 ಮೀಟರ್ ಎತ್ತರವಿದೆ.
Sign in to your account
Please enter an answer in digits:seven − 5 =
Remember me
