ನವದೆಹಲಿ:ಇದೀಗ ಎಲ್ಲೆಲ್ಲೂ ಸ್ವದೇಶಿ ಅಭಿಯಾನ ಶುರುವಾಗಿದೆ. ಚೀನಾ ಮೂಲದ ಟಿಕ್​ಟಾಕ್​ನಿಂದ ಆಗುತ್ತಿರುವ ಅನಾಹುತ ಹಾಗೂ ಈ ಆ್ಯಪ್​ ಯುವಕರರನ್ನು ತಪ್ಪುದಾರಿಗೆ ಎಳೆಯುತ್ತಿರುವುದನ್ನು ಗಮನಿಸಿ ಅದನ್ನು ಬ್ಯಾನ್​ ಮಾಡುವ ಅಭಿಯಾನವೂ ಶುರುವಾಗಿದೆ.
ಇದೇ ಕಾರಣಕ್ಕೆ ಭಾರತದಲ್ಲಿ ಅನೇಕ ಮಂದಿ ಆ್ಯಪ್ ಅನ್ನು ಅನ್​ ಇನ್​ಸ್ಟಾಲ್​ ಮಾಡುವ ಮೂಲಕ ಚೀನಾ ಮೂಲದ ಆ್ಯಪ್​ ಅನ್ನು ಧಿಕ್ಕರಿಸುತ್ತಿದ್ದಾರೆ. ತನ್ನ ದೇಶದಲ್ಲಿ ಟಿಕ್​ಟಾಕ್​ ಬಳಸದೇ ಭಾರತ ಸೇರಿದಂತೆ ಅನೇಕ ದೇಶಗಳ ಜನರನ್ನು ಹಾಳು ಮಾಡುತ್ತಿರುವ ಚೀನಾದ ದುರ್ಬುದ್ಧಿಗೆ ಭಾರತದಲ್ಲಿ ಇದೀಗ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಹಿಂದೂ, ಋಷಿ-ಮುನಿಗಳು ಅಶ್ಲೀಲ ಪ್ರಿಯರು ಎಂದ ನಟಿ! ಇಸ್ಕಾನ್​ನಿಂದ ದೂರು ದಾಖಲು
ಸ್ವದೇಶಿ ಆ್ಯಪ್​ ಆಗಿರುವ “ಮಿತ್ರೋ” ಇದೀಗ ಭಾರತದಲ್ಲಿ ಹವಾ ಸೃಷ್ಟಿಸಿದೆ. ಇದಾಗಲೇ 50 ಲಕ್ಷಕ್ಕೂ ಅಧಿಕ ಬಳಕೆದಾರರು ಇದನ್ನು ಇನ್​ಸ್ಟಾಲ್​ ಮಾಡಿಕೊಂಡಿದ್ದಾರೆ.ಆದರೆ ಅಮೆರಿಕ ಮೂಲಕ ಗೂಗಲ್​ ಸಂಸ್ಥೆ ಭಾರತದ ಟ್ರೆಂಡ್​ಗೆ ಬೆದರಿ ಬಿಟ್ಟಿದೆ! ಭಾರತ ಒಂದರಿಂದಲೇ ಲಕ್ಷಾಂತರ ಕೋಟಿ ರೂಪಾಯಿ ಹಣವನ್ನು ಟಿಕ್​ಟಾಕ್​ ಜಾಹೀರಾತಿನ ಮೂಲಕ ಪಡೆಯುತ್ತಿರುವ ಚೀನಾಕ್ಕೆ ಧಕ್ಕೆ ಉಂಟಾಗುವ ಭಯದಿಂದ ಗೂಗಲ್​ ಸಂಸ್ಥೆ ಕಿತಾಪತಿ ಮಾಡುತ್ತಿದೆ.
ಅದೇನೆಂದರೆ ಟಿಕ್​ಟಾಕ್​ ವಿರುದ್ಧ ಅಭಿಯಾನ ಶುರುವಾಗಿರುವ ಬೆನ್ನಲ್ಲೇ ಅದರ ವಿರುದ್ಧ ಲಕ್ಷಾಂತರ ಕಮೆಂಟ್​ಗಳನ್ನು ಜನರು ಮಾಡಿದ್ದಾರೆ. ಮದ್ರಾಸ್ ಹೈಕೋರ್ಟ್​ ಕೂಡ ಈ ಹಿಂದೆ ಈ ಆ್ಯಪ್​ ಬ್ಯಾನ್​ಗೆ ಆದೇಶ ಹೊರಡಿಸಿದ್ದನ್ನು ಕೂಡ ಉಲ್ಲೇಖಿಸಿರುವ ಅನೇಕ ಬಳಕೆದಾರರು, ಟಿಕ್​ಟಾಕ್​ನಿಂದ ಜನರು ಹೇಗೆ ಹಾದಿ ತಪ್ಪುತ್ತಿದ್ದಾರೆ ಎಂಬ ಬಗ್ಗೆ ಕಮೆಂಟ್​ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ:ಅಮ್ಮನಿಗೆ ಅಂದು ಮೋದಿ ಬರೆದ ಪತ್ರಗಳು ಇದೀಗ ಪುಸ್ತಕ ರೂಪದಲ್ಲಿ…
ಆದರೆ ಈ ಯಾವುದೇ ಕಮೆಂಟ್​ಗಳು ಹೊಸದಾಗಿ ಟಿಕ್​ಟಾಕ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳುವವರಿಗೆ ಕಾಣಿಸಬಾರದು ಎನ್ನುವ ಕಾರಣದಿಂದ ಎಲ್ಲಾ ನಕಾರಾತ್ಮಕ ಕಮೆಂಟ್​ಗಳನ್ನು ಗೂಗಲ್​ ತೆಗೆದುಬಿಟ್ಟಿದೆ. ಅದೂ ಎಷ್ಟು ಅಂತೀರಾ. ಒಂದಲ್ಲಾ… ಎರಡಲ್ಲಾ… ಬರೋಬ್ಬರಿ 80 ಲಕ್ಷಕ್ಕೂ ಅಧಿಕ ನೆಗೆಟಿವ್ ರಿವ್ಯೂಗಳನ್ನು ಗೂಗಲ್​ ಅಳಿಸಿ ಹಾಕಿದೆ. 2.0ಕ್ಕೆ ಇಳಿದಿದ್ದ ಟಿಕ್​ಟಾಕ್​ ರೇಟಿಂಗ್​ ಅನ್ನು ಪುನಃ 4.4ಕ್ಕೆ ಏರಿಸಲು ಗೂಗಲ್​ ಯಶಸ್ವಿ ಕೂಡ ಆಗಿಬಿಟ್ಟಿದೆ!
ಹೊಸದಾಗಿ ಟಿಕ್​ಟಾಕ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಲು ಬಯಸುವವರಿಗೆ ಅದರಿಂದ ಆಗುತ್ತಿರುವ ಯಾವುದೇ ಅನಾಹುತಗಳ ಬಗ್ಗೆ ಈಗ ಕಮೆಂಟ್​ಗಳೇ ಇಲ್ಲ. ಏನಿದ್ದರೂ ಅದರ ಪರವಾಗಿ ಇರುವ ಕಮೆಂಟ್​ಗಳು ಮಾತ್ರ ಕಾಣಿಸುವ ಹಿನ್ನೆಲೆಯಲ್ಲಿ, ಹೆಚ್ಚು ಹೆಚ್ಚು ಜನರು ಇದನ್ನು ಪುನಃ ಡೌನ್​ಲೋಡ್​ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಗೂಗಲ್​ಗೂ ಆದಾಯ ಬರುತ್ತಿದೆ.(ಏಜೆನ್ಸೀಸ್​)
ಇದೇನಪ್ಪಾ ಲಾಕ್​ಡೌನು… ಎಂದು ಶಪಿಸ್ತಾ ಇರೋ ಮದುಮಕ್ಕಳೇ ಇದನ್ನೊಮ್ಮೆ ಓದಿಬಿಡಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:8 + four =
Remember me
