ನವದೆಹಲಿ:ಅರುಣಾಚಲ ಪ್ರದೇಶ ಮತ್ತು ಕಾಶ್ಮೀರವು ಭಾರತದ ಭಾಗವಲ್ಲ ಎಂದು ಬಿಂಬಿಸುವುದೇ ಸುದ್ದಿ ವೆಬ್​ಸೈಟ್ ‘ನ್ಯೂಸ್​ಕ್ಲಿಕ್’​ ನ ಜಾಗತಿಕ ಕಾರ್ಯಸೂಚಿ ಆಗಿತ್ತು ಎಂಬುದಕ್ಕೆ ಸಾಕ್ಷ್ಯಾಧಾರಗಳು ಲಭ್ಯವಾದ ಬಳಿಕವೇ ನ್ಯೂಸ್​ಕ್ಲಿಕ್​ ಸಂಸ್ಥಾಪಕ ಬೀರ್ ಪುರಕಾಯಸ್ಥರನ್ನು ಬಂಧಿಸಿದ್ದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನು “ವಿವಾದಿತ ಪ್ರದೇಶಗಳು” ಎಂದು ತೋರಿಸುವ ಭಾರತದ ನಕ್ಷೆಯನ್ನು ಹೇಗೆ ರಚಿಸುವುದು ಎಂಬುದರ ಕುರಿತು ಪ್ರಬೀರ್ ಪುರಕಾಯಸ್ಥ ಮತ್ತು ಅಮೆರಿಕನ್ ಟೆಕ್ ಮೊಗಲ್ ನೆವಿಲ್ಲೆ ರಾಯ್ ಸಿಂಘಮ್ ನಡುವೆ ಇಮೇಲ್ ಮೂಲಕ ಮಾತುಕತೆ ನಡೆದಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.
ಮಂಗಳವಾರ ನ್ಯೂಸ್​ಕ್ಲಿಕ್​ ಸಂಸ್ಥಾಪಕ ಪ್ರಬೀರ್​ ಪುರಕಾಯಸ್ಥ ಮತ್ತು ಎಚ್​ಆರ್​ ಹೆಡ್​​ ಅಮಿತ್​ ಚಕ್ರವರ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನ್ಯೂಸ್​ಕ್ಲಿಕ್​​ ಕಚೇರಿ ಮತ್ತು ಅದಕ್ಕೆ ಸಂಬಂಧಿಸಿದ ಪತ್ರಕರ್ತರು ಹಾಗೂ ಉದ್ಯೋಗಿಗಳ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ ಬಳಿಕ ಸಂಸ್ಥಾಪಕ ಪ್ರಬೀರ್​ ಮತ್ತು ಎಚ್​ಆರ್​ ಹೆಡ್ ಚಕ್ರವರ್ತಿಯನ್ನು​ ಬಂಧಿಸಲಾಯಿತು.
ನ್ಯೂಸ್​ಕ್ಲಿಕ್​ ಷೇರುದಾರರಾಗಿರುವ ಗೌತಮ್​ ನಾವ್ಲಖ, ನಿಷೇಧಿತ ನಕ್ಸಲ್​ ಸಂಘಟನೆ ಜತೆ ಕೆಲಸ ಮಾಡಿದ್ದ ಮತ್ತು ಐಎಸ್‌ಐ ಏಜೆಂಟ್ ಗುಲಾಂ ನಬಿ ಫೈ ಜೊತೆ ದೇಶವಿರೋಧಿ ನಂಟು ಹೊಂದಿದ್ದ. ಪ್ರಬೀರ್ ಪುರಕಾಯಸ್ಥ ಪಡೆದ ವಿದೇಶಿ ಹಣವನ್ನು ಕಾರ್ಯಕರ್ತ ತೀಸ್ತಾ ಸೆಟಲ್ವಾಡ್ ಸೇರಿದಂತೆ ಗೌತಮ್ ನವ್ಲಾಖಾ ಮತ್ತು ಇತರರಿಗೆ ರವಾನಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ವಿಶ್ವಕಪ್​ ಆರಂಭಕ್ಕೂ ಮುನ್ನವೇ ರಾಜೀವ್​ ಗಾಂಧಿ ಸ್ಟೇಡಿಯಂನಲ್ಲಿ ಕೊಳಕು ಸೀಟುಗಳ ದರ್ಶನ: ವಿಡಿಯೋ ವೈರಲ್​
ಇದಿಷ್ಟೇ ಅಲ್ಲದೆ, ಪ್ರಬೀರ್ ಪುರಕಾಯಸ್ಥ ಅವರು 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಹಾಳುಮಾಡಲು ಪಿತೂರಿಯಲ್ಲಿ ತೊಡಗಿದ್ದರು ಮತ್ತು ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ಅಪಖ್ಯಾತಿಗೊಳಿಸಲು ನ್ಯೂಸ್‌ಕ್ಲಿಕ್ “ಸುಳ್ಳು ನಿರೂಪಣೆ” ಯನ್ನು ಸಹ ಪ್ರಚಾರ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುಳ್ಳು ನಿರೂಪಣೆಗಳನ್ನು ಕಾನೂನುಬಾಹಿರವಾಗಿ ರವಾನೆಯಾದ ವಿದೇಶಿ ನಿಧಿಯನ್ನು ಬಳಸಿಕೊಂಡು ನ್ಯೂಸ್‌ಕ್ಲಿಕ್ ಒಡೆತನದಲ್ಲಿ ನಿರ್ವಹಿಸುತ್ತಿದ್ದ ಪೀಪಲ್ಸ್ ಡಿಸ್ಪ್ಯಾಚ್ ಪೋರ್ಟಲ್ ಮೂಲಕ ಹರಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯವು ನ್ಯೂಸ್‌ಕ್ಲಿಕ್ ಉದ್ಯೋಗಿಗಳಿಂದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಸಾಧನಗಳಿಂದ ಹೊರತೆಗೆಯಲಾದ 4.3 ಲಕ್ಷ ಇಮೇಲ್‌ಗಳ ಕುರಿತು ವಿಚಾರಣೆ ನಡೆಸಬೇಕಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದು, ಪ್ರಬೀರ್ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು 15 ದಿನಗಳ ಕಾಲ ಕಸ್ಟಡಿಗೆ ಕೋರಿದ್ದಾರೆ. ಸಮಾಜದ ವಿವಿಧ ವರ್ಗಗಳ ನಡುವೆ ಅಸಮಾಧಾನ ಮೂಡಿಸಲು ಸಂಚು ರೂಪಿಸಿರುವ ಇಮೇಲ್‌ನ ವಿಷಯಗಳ ಕುರಿತು ಆರೋಪಿಗಳಿಬ್ಬರನ್ನೂ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ ನ್ಯೂಸ್‌ಕ್ಲಿಕ್ ಕಚೇರಿಯಲ್ಲಿ ದಾಳಿಗಳು ಇನ್ನೂ ಪೂರ್ಣಗೊಂಡಿಲ್ಲ ಮತ್ತು ಪ್ರಬೀರ್ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿಯ ವಿಚಾರಣೆಯ ನಂತರ ಕಚೇರಿ ಪರಿಶೀಲನೆಯು ಮುಂದುವರಿಯುತ್ತದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಚೀನಾ ಪರ ಪ್ರಚಾರಕ್ಕೆ ಹಣ ಪಡೆದ ಆರೋಪ: ನ್ಯೂಸ್​ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − seven =
Remember me
