ನವದೆಹಲಿ:ಚೀನಾ ಪರ ಪ್ರಚಾರಕ್ಕೆ ಹಣ ಪಡೆದ ಆರೋಪದ ಬೆನ್ನಲ್ಲೇ ಸುದ್ದಿ ವೆಬ್​ಸೈಟ್ ‘ನ್ಯೂಸ್​ಕ್ಲಿಕ್’​ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥರನ್ನು ದೆಹಲಿ ಪೊಲೀಸರು ಬಂಧನ ಮಾಡಿದ್ದಾರೆ. ಭಯೋತ್ಪಾದನಾ ವಿರೋಧಿ ಕಾನೂನೂ, ಕಾನೂನು ಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.
ನ್ಯೂಸ್​ ಪೋರ್ಟಲ್​ನ ಎಚ್​ಆರ್​ ಹೆಡ್​​ ಅಮಿತ್​ ಚಕ್ರವರ್ತಿ ಎಂಬುವರನ್ನು ಸಹ ಬಂಧನ ಮಾಡಲಾಗಿದೆ.
ಇದಕ್ಕೂ ಮುನ್ನ ಮಂಗಳವಾರ ನ್ಯೂಸ್​ಕ್ಲಿಕ್​ ವೆಬ್​ಸೈಟ್​ಗೆ ಸಂಬಂಧಿಸಿದ ಹಲವು ಪತ್ರಕರ್ತರ ಮನೆ, ಕಚೇರಿ ಮೇಲೆ ದೆಹಲಿ ಪೊಲೀಸರು ದಾಳಿ ಮಾಡಿ ಕೆಲವರನ್ನು ಬಂಧಿಸಲಾಯಿತು. ಕಾನೂನುಬಾಹಿರ ಚಟುವಟಿಕೆ ತಡೆ ಕಾನೂನು (ಯುಎಪಿಎ) ಅನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸುದ್ದಿ ಪೋರ್ಟಲ್ ಚೀನಾ-ಪರ ಪ್ರಚಾರ ನಡೆಸಲು ಹಣವನ್ನು ಪಡೆದಿದೆ ಎಂದು ನ್ಯೂಯಾರ್ಕ್ ಟೈಮ್ಸ್​ ಆರೋಪಿಸಿದ ಬೆನ್ನಲ್ಲೇ ಆಗಸ್ಟ್ 17ರಂದು ದೆಹಲಿ ಪೊಲೀಸರು ಭಯೋತ್ಪಾದನೆ-ತಡೆ ಕಾನೂನಿನಡಿ ಪ್ರಕರಣವನ್ನು ದಾಖಲಿಸಿದ್ದರು. ಪತ್ರಕರ್ತರ ಮೇಲಿನ ದಾಳಿ ಮಾಧ್ಯಮ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ:ಕಟ್ಟುನಿಟ್ಟಾದ ಡಯಟ್ ಮುಳುವಾಯಿತು ; ನಟಿ ಶ್ರೀದೇವಿ ಅಕಾಲಿಕ ಮರಣದ ಬಗ್ಗೆ ಮೌನ ಮುರಿದ ಪತಿ ಬೋನಿ ಕಪೂರ್
ತಮ್ಮ ಲ್ಯಾಪ್​ಟಾಪ್ ಮತ್ತು ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಕೆಲವು ಪತ್ರಕರ್ತರು ಟ್ವೀಟ್ ಮಾಡಿದ್ದಾರೆ. ದೆಹಲಿ ರಾಷ್ಟ್ರ ರಾಜಧಾನಿ ವಲಯದಾದ್ಯಂತ (ಎನ್​ಸಿಆರ್) ಸುಮಾರು 30 ಸ್ಥಳಗಳಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕದ ಅಧಿಕಾರಿಗಳು ದಾಳಿ ನಡೆಸಿದರು. ಕೆಲವು ಪತ್ರಕರ್ತರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ನ್ಯೂಸ್​ ಕ್ಲಿಕ್​ ಕಚೇರಿಗಳು ಮತ್ತು ಪತ್ರಕರ್ತರ ಮನೆಗಳ ಮೇಲೆ ನಡೆದ ದಾಳಿ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಆಕ್ರಮಣ ಎಂದು ಮಾಧ್ಯಮ ಸಂಘಟನೆಗಳು ಹಾಗೂ ಹಲವು ರಾಜಕೀಯ ಪಕ್ಷಗಳು ಖಂಡಿಸಿವೆ.
ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ‘ನಾನು ಸಮರ್ಥನೆ ಮಾಡಿಕೊಳ್ಳುವ ಅಗತ್ಯವೇನೂ ಇಲ್ಲ. ಯಾರೇ ತಪ್ಪು ಮಾಡಿದರೂ ಸೂಕ್ತ ಮಾರ್ಗಸೂಚಿಗಳನ್ವಯ ಕ್ರಮಕೈಗೊಳ್ಳಲು ತನಿಖಾ ಸಂಸ್ಥೆಗಳು ಸ್ವತಂತ್ರವಾಗಿವೆ ಎಂದಿದ್ದಾರೆ. ನ್ಯೂಸ್​ಕ್ಲಿಕ್​ ಹಣದ ಮೂಲವು ‘ಭಾರತ-ವಿರೋಧಿ ಅಜೆಂಡಾ’ವನ್ನು ಬಯಲುಗೊಳಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್​ ತನಿಖಾ ವರದಿಯನ್ನು ಉಲ್ಲೇಖಿಸಿ ಠಾಕೂರ್ ಇತ್ತೀಚೆಗೆ ಹೇಳಿದ್ದರು.
ನ್ಯೂಯಾರ್ಕ್ ಟೈಮ್ಸ್​ ವರದಿ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ನ್ಯೂಸ್ ಪೋರ್ಟಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ನ್ಯೂಸ್​ಕ್ಲಿಕ್​ಗೆ ಸೇರಿದ ಕೆಲವು ಆಸ್ತಿಗಳನ್ನು ಅದು ಮುಟ್ಟುಗೋಲು ಹಾಕಿಕೊಂಡಿದೆ.
ಪತ್ರಕರ್ತರ ಮೇಲಿನ ಪೊಲೀಸ್ ದಾಳಿಯನ್ನು ಭಾರತೀಯ ಪ್ರೆಸ್ ಕ್ಲಬ್ (ಪಿಸಿಐ) ಖಂಡಿಸಿದೆ. ನ್ಯೂಸ್​ಕ್ಲಿಕ್​ಗೆ ಸಂಬಂಧಿಸಿದ ಪತ್ರಕರ್ತರು ಮತ್ತು ಲೇಖಕರ ಮನೆಗಳ ಮೇಲೆ ನಡೆದ ದಾಳಿಗಳ ಬಗ್ಗೆ ಪ್ರೆಸ್ ಕ್ಲಬ್ ತೀವ್ರ ಕಳವಳ ವ್ಯಕ್ತಪಡಿಸಿದೆ. ‘ಡಿಫೆಂಡ್ ಮೀಡಿಯಾಫ್ರೀಡಂ’ ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಅದು ದಾಳಿಯನ್ನು ಕಟುವಾಗಿ ಖಂಡಿಸಿದೆ. ಪತ್ರಕರ್ತರಿಗೆ ಸೌಹಾರ್ದತೆ ಸೂಚಿಸಿರುವ ಪಿಸಿಐ, ಈ ವಿಚಾರದಲ್ಲಿ ವಿವರಣೆ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಇದನ್ನೂ ಓದಿ:ಸಬ್ಸಿಡಿ ರಸಗೊಬ್ಬರ ಸ್ಮಗ್ಲಿಂಗ್!: ನಿಷೇಧವಿದ್ದರೂ ಕೃಷಿಯೇತರ ಕಾರ್ಯಕ್ಕೆ ಬಳಕೆ; ಕಂಪನಿಗಳಿಂದಲೇ ಅಕ್ರಮ
ನ್ಯೂಸ್​ಕ್ಲಿಕ್​ ಪತ್ರಕರ್ತರ ಮೇಲೆ ನಡೆದಿರುವ ದಾಳಿಯನ್ನು ಪ್ರತಿಪಕ್ಷಗಳ ಇಂಡಿಯಾ ಕೂಟ ಬಲವಾಗಿ ಖಂಡಿಸಿದೆ. ಅಧಿಕಾರದಲ್ಲಿರುವವರಿಗೆ ಸತ್ಯವನ್ನು ಹೇಳುವ ಜನರ ವಿರುದ್ಧ ಮಾತ್ರವೇ ಸರ್ಕಾರ ‘ಬಲವಂತದ’ ಕ್ರಮ ಕೈಗೊಳ್ಳುತ್ತಿದೆ ಎಂದು ಅದು ಹೇಳಿಕೆಯೊಂದರಲ್ಲಿ ಟೀಕಿಸಿದೆ. ದ್ವೇಷ ಮತ್ತು ವಿಭಜನಕಾರಿ ವಿಚಾರಗಳನ್ನು ಹರಡುವವರ ವಿರುದ್ಧ ಅದು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದಿದೆ. ಮಾಧ್ಯಮವನ್ನು ತನ್ನ ಹಿತಾಸಕ್ತಿ ಕಾಪಾಡುವ ಮುಖವಾಣಿಯನ್ನಾಗಿ ಪರಿವರ್ತಿಸಲು ಸರ್ಕಾರ ಯತ್ನಿಸುತ್ತಿದೆ ಎಂದೂ ಇಂಡಿಯಾ ಆರೋಪಿಸಿದೆ.
ಪಾರುಲ್, ಅನ್ನುರಾಣಿ ಸ್ವರ್ಣ ಸಂಭ್ರಮ: ಏಷ್ಯಾಡ್‌ನಲ್ಲಿ 10ನೇ ದಿನ ಭಾರತಕ್ಕೆ 9 ಪದಕ

ಏಷ್ಯನ್ ಗೇಮ್ಸ್ ಪ್ರಿ ಕ್ವಾರ್ಟರ್‌ಫೈನಲ್‌ಗೇರಿದ ಸಿಂಧು, ಪ್ರಣಯ್

ಸಬ್ಸಿಡಿ ರಸಗೊಬ್ಬರ ಸ್ಮಗ್ಲಿಂಗ್!: ನಿಷೇಧವಿದ್ದರೂ ಕೃಷಿಯೇತರ ಕಾರ್ಯಕ್ಕೆ ಬಳಕೆ; ಕಂಪನಿಗಳಿಂದಲೇ ಅಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − two =
Remember me
