ಜಲಂಧರ್​ (ಪಂಜಾಬ್​): ಟ್ರಾಫಿಕ್​ ನಿಯಮ ಉಲ್ಲಂಘಿಸಿ ಎರ್ರಾಬಿರ್ರಿ ವಾಹನ ಓಡಿಸುವ ಸಂದರ್ಭದಲ್ಲಿ, ಅಂಥವರನ್ನು ತಡೆಯಲು ಬಂದ ಪೊಲೀಸ್​ ಅಧಿಕಾರಿಗಳ ಮೇಲೆ ವಾಹನ ಹತ್ತಿಸಿರುವ ಘಟನೆಗಳು ಅಲ್ಲಲ್ಲಿ ಕೇಳುತ್ತಲೇ ಇರುತ್ತೇವೆ. ಇಂಥ ಸಮಯದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸರು ಅದೆಷ್ಟೋ ಮಂದಿ!
ಲಾಕ್​ಡೌನ್ ಸಮಯದಲ್ಲಿಯೂ, ಇಂಥದ್ದೊಂದು ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್​ ಪೊಲೀಸ್​ ಅಧಿಕಾರಿಗೆ ಪ್ರಾಣಕ್ಕೆ ಅಪಾಯವೇನೂ ಆಗಲಿಲ್ಲ. ಆದರೆ ಪೊಲೀಸ್​ ಅಧಿಕಾರಿ ಆಯತಪ್ಪಿ ಕಾರಿನ ಬಾನೆಟ್​ ಮೇಲೆ ಬಿದ್ದುದರಿಂದ, ಈ ಆಸಾಮಿ ಹಾಗೆಯೇ ಕಾರುನ್ನು ಚಲಾಯಿಸಿಕೊಂಡು ಹೋಗಿದ್ದಾನೆ!
ಇದನ್ನೂ ಓದಿ:ಶವ ಸುಡಲಾರೆವು, ಹೂಳುವೆವು: ಅವಕಾಶ ಕೋರಿ ಸುಪ್ರೀಂಗೆ ಮುಸ್ಲಿಂ ಸಂಘ
ಇದು ನಡೆದದ್ದು ಪಂಜಾಬ್​ನ ಜಲಂಧರ್​ನಲ್ಲಿ. ಇಂಥ ಕುಕೃತ್ಯ ಎಸಗಿದವರು 20 ವರ್ಷದ ಅನ್ಮೋಲ್‌ ಮೆಹ್ಮಿ. ಈತ ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಕಾರನ್ನು ತಪಾಸಣೆ ನಿಟ್ಟಿನಲ್ಲಿ ಕಾರನ್ನು ನಿಲ್ಲಿಸುವಂತೆ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಮುಲ್ಕ್​ ರಾಜ್​ ಸೂಚಿಸಿದ್ದಾರೆ. ಆದರೆ ನಿಯಮ ಉಲ್ಲಂಘಿಸಿ ಹೋಗುತ್ತಿದ್ದುದರಿಂದಲೋ ಏನೋ ಅನ್ಮೋಲ್​ ಕಾರು ನಿಲ್ಲಿಸದೆ ಓಡಿಸುತ್ತಲೇ ಇದ್ದ.
ಆಗ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಕಾರಿನ ಮುಂದಕ್ಕೆ ಬರುತ್ತಿದ್ದಂತೆಯೇ ವಾಹನ ಮುಂದೆ ಹೋಗಿದ್ದರಿಂದ ಅವರು ಜಿಗಿದು ಬಿಟ್ಟರು. ಆಯ ತಪ್ಪಿ ಬಾನೆಟ್‌ ಮೇಲೆ ಬಿದ್ದರು. ಇಷ್ಟಾದರೂ ಸುಮ್ಮನಾಗದ ಯುವಕ, ಸ್ವಲ್ಪ ದೂರದವರೆಗೆ ಚಾಲಕ ಪೊಲೀಸ್‌ ಅಧಿಕಾರಿ ಸಹಿತ ಮುಂದೆ ಸಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಕನನ್ನು ಬಂಧಿಸಲಾಗಿದೆ. ಜತೆಗೆ ಕಾರಿನ ಮಾಲೀಕನಾಗಿರುವ ಯುವಕನ ತಂದೆಯನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)
ಇದನ್ನೂ ಓದಿ:ಕರೊನಾ ತೊಲಗುವವರೆಗೂ ಇಲ್ಲಿ ಛತ್ರಿಯದ್ದೇ ಕಾರುಬಾರು! ಇದರ ಗುಟ್ಟು ಬಲ್ಲಿರಾ?
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:thirteen − 5 =
Remember me
