ವಿಶಾಖಪಟ್ಟಣಂ:ಇಲ್ಲಿನ ಆರ್​.ಆರ್​. ವೆಂಕಟಾಪುರಂನಲ್ಲಿರುವ ದಕ್ಷಿಣ ಕೊರಿಯಾದ ಮೂಲದ ಎಲ್​ಜಿ ಪಾಲಿಮರ್ಸ್​ ಕಾರ್ಖಾನೆಯಲ್ಲಿ ವಿಷಾನಿಲ ದುರಂತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ರಚಿಸಿದ್ದ ನ್ಯಾಯಾಂಗ ತನಿಖಾ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ.
ಆಂಧ್ರಪ್ರದೇಶ ಹೈಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ. ಶೇಷಶಯನ ರೆಡ್ಡಿ ನೇತೃತ್ವದ ಸಮಿತಿ ರಚನೆಯಾದ ಮೂರು ವಾರಗಳ ಬಳಿಕ ವರದಿ ಸಲ್ಲಿಸಿದ್ದು, ವಿಷಾನಿಲ ದುರಂತಕ್ಕೆ ಎಲ್​.ಜಿ. ಪಾಲಿಮರ್ಸ್​ ಆಡಳಿತ ಮಂಡಳಿಯಿಂದಾದ ಐದು ಪ್ರಮುಖ ಲೋಪಗಳನ್ನು ಪಟ್ಟಿ ಮಾಡಿದೆ.
ಇದನ್ನೂ ಓದಿ;ವಿಷಾನಿಲ ದುರಂತ: ಎಫ್​ಐಆರ್​ನಲ್ಲಿ ಯಾರ ಹೆಸರೂ ಇಲ್ಲ…!
ಸ್ಟೈರಿನ್ ಅನಿಲ ಸಂಗ್ರಹಿಸಿದ್ದ ಟ್ಯಾಂಕ್​ನಲ್ಲಿ ಅನಿಲದ ಪ್ರತಿರೋಧಕ ಶಕ್ತಿಯನ್ನು ನಿಯಂತ್ರಿಸುವ ರಾಸಾಯನಿಕ (4-ಟೆರ್ಟ್​ ಬ್ಯುಟಿಲ್​ಕ್ಯಾಟ್​ಕೋಲ್​ ) ಸೂಕ್ತ ಪ್ರಮಾಣದಲ್ಲಿ ಇರಲಿಲ್ಲ. ಕರಗಿದ ಆಮ್ಲಜನಕ ಪ್ರಮಾಣವನ್ನು ಗುರುತಿಸುವ ನಿಗಾ ವ್ಯವಸ್ಥೆ ಹೊಂದಿರಲಿಲ್ಲ, ಟ್ಯಾಂಕ್​ನ ಮೇಲ್ಪದರದಲ್ಲಿರುವ ತಾಪಮಾನವನ್ನು ಅಳೆಯುವ ವ್ಯವಸ್ಥೆ ಕೂಡ ಇರಲಿಲ್ಲ. ಟ್ಯಾಂಕ್​ಅನ್ನು ಶೀತಲವಾಗಿರಿಸುವ ವ್ಯವಸ್ಥೆಯನ್ನು 24 ತಾಸುಗಳಿಂದ ಸರಿಯಾಗಿ ನೋಡಿಕೊಂಡಿರಲಿಲ್ಲ. ಒಟ್ಟಾರೆ ಮಾನವ ಲೋಪ ಹಾಗೂ ನಿರ್ಲಕ್ಷ್ಯದಿಂದಾಗಿಯೇ ಈ ವಿಷಾನಿಲ ದುರಂತ ಸಂಭವಿಸಿದೆ ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ.
ಇದಕ್ಕೂ ಮುನ್ನ, ವಿಷಾನಿಲ ದುರಂತದಿಂದ ಸಂಭವಿಸಿರುವ ಹಾನಿಗೆ 50 ಕೋಟಿ ರೂ.ಗಳನ್ನು ಠೇವಣಿಯಾಗಿಬೇಕೆಂಬ ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್​ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ;ವಿಶಾಖಪಟ್ಟಣದ 13,000 ಟನ್ ವಿಷಾನಿಲ ಎಲ್ಲಿಗೆ ರವಾನೆಯಾಯ್ತು ಗೊತ್ತಾ?
ಕಳೆದ ಮೇ 8ರಂದು ಎಲ್.​ಜಿ. ಪಾಲಿಮರ್ಸ್​ ಕಾರ್ಖಾನೆಯಲ್ಲಿ ಸಂಭವಿಸಿದ್ದ ವಿಷಾನಿಲ ದುರಂತದಲ್ಲಿ 11 ಜನರು ಮೃತಪಟ್ಟು, ಸಾವಿರಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಅಂದಾಜು 2,000 ಮೆಟ್ರಿಕ್​ ಟನ್​ ಅನಿಲ ಸೋರಿಕೆಯಾಗಿತ್ತು. ಇದಲ್ಲದೇ, ಸುತ್ತಲಿನ 5 ಹಳ್ಳಿಗಳ ಜನರನ್ನು ಸ್ಥಳಾಂತರ ಮಾಡಲಾಗಿತ್ತು.
ವಿಷಾನಿಲ ದುರಂತ; ಮೃತರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ಘೋಷಣೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nineteen + 6 =
Remember me
