ಮುಂಬೈ:ಮುಕೇಶ್ ಅಂಬಾನಿ ನಿವಾಸದ ಬಳಿ ಕಾರ್ ಒಂದರಲ್ಲಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್​​ಐಎ ಇಂದು ಅಸಿಸ್ಟಂಟ್ ಪೊಲೀಸ್ ಇನ್ಸಪೆಕ್ಟರ್ ಸಚಿನ್ ವಾಜೆ ಅವರನ್ನು ಬಂಧಿಸಿದೆ.
ಫೆ 28 ರಂದು ಮುಕೇಶ್ ಅಂಬಾನಿ ಅವರ ಅಂಟಿಲಿಯಾ ನಿವಾಸದೆದುರು ಸ್ಕಾರ್ಪಿಯೋ ಒಂದರಲ್ಲಿ ಸ್ಪೋಟಕ ಮತ್ತು ಬೆದರಿಕೆಗಳು ಪತ್ತೆಯಾಗಿದ್ದವು. ಘಟನೆಯಲ್ಲಿ ಕಾಣಿಸಿಕೊಂಡ ಸ್ಕಾರ್ಪಿಯೋ ಕಾರ್​ ನನ್ನದೆಂದು ಮನ್​ಸುಖ್ ಹಿರೇನ್ ಎನ್ನುವ ದೂರು ದಾಖಲಿಸಿ ಒಂದು ದಿನದ ಒಳಗೆ ಮೃತಪಟ್ಟಿದ್ದ.
ಇದನ್ನೂ ಓದಿ:ಯಾದಗಿರಿ ಜಿಲ್ಲೆ ಮೂಲದ ವಿದ್ಯಾರ್ಥಿ ಮೈಸೂರಿನಲ್ಲಿ ನೇಣಿಗೆ ಶರಣು
ಮನಸುಖ್ ಹಿರೇನ್ ನಿಗೂಢ ಸಾವಿನ ದಿನ ಸಚಿನ್ ವಾಜೆ ಅವನ ಜೊತೆಗಿದ್ದರು ಎಂದು ತಿಳಿದು ಬಂದಿದ್ದರಿಂದ ಹಾಗೂ ಹಿರೇನ್ ಪತ್ನಿ ವಾಜೆ ಮೇಲೆ ಆರೋಪ ಮಾಡಿದ್ದರಿಂದ ಎನ್​ಐಎ ವಾಜೆ ಅವರನ್ನು ಶನಿವಾರ ಸತತ 12 ಗಂಟೆ ವಿಚಾರಣೆ ನಡೆಸಿ ಇಂದು ಬೆಳಿಗ್ಗೆ ಬಂಧಿಸಿದೆ.
ಬಂಧನಕ್ಕೊಳಗಾಗಿರುವ ಪೊಲೀಸ್ ಅಧಿಕಾರಿ ವಾಜೆ ಮಧ್ಯಂತರ ಜಾಮೀನು ನೀಡುವಂತೆ ಹಾಗೂ ಮಾರ್ಚ್​ 19 ರಂದು ನಡೆಯುವ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅವರ ಅರ್ಜಿಯನ್ನು ವಜಾ ಮಾಡಿದೆ. ವಿರೋಧ ಪಕ್ಷವಾದ ಬಿಜೆಪಿ ವಾಜೆ ಬಂಧನಕ್ಕೆ ಒತ್ತಾಯಿಸಿತ್ತು.
ಮದುವೆಯಾದ ರಾತ್ರಿ ಸಿಂಹದ ಮರಿ ಬಾಡಿಗೆಗೆ ಪಡೆದರು- ನಿದ್ದೆ ಮಾತ್ರೆ ನೀಡಿದರು? ವಿಡಿಯೋ ನೋಡಿ ನೆಟ್ಟಿಗರು ಗರಂ

ಜಮ್ಮು-ಕಾಶ್ಮೀರದ ಶಾಲೆಗಳಿಗೆ ತ್ರಿವರ್ಣ ಫಲಕಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − two =
Remember me
