ಬೆಂಗಳೂರು:ಐಸಿಸ್ ಸೇರಿ ಕೆಲವು ನಿಷೇಧಿತ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಬೆಂಗಳೂರು ನಿವಾಸಿ ಮುಹಮ್ಮದ್​ ತಾಖಿರ್ (33) ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಅಧಿಕಾರಿಗಳು ಬಂಧಿದ್ದಾರೆ.
ರಾಜಧಾನಿಯಲ್ಲಿ ನೆಲೆಸಿರುವ ಮುಹಮ್ಮದ್​ ತಾಖಿರ್​ನನ್ನು ಎನ್​ಐಎ ಅಧಿಕಾರಿಗಳು ನಿನ್ನೆ ಬಂಧಿಸಿದ್ದಾರೆ. ಇದೇ ವರ್ಷದ ಏಪ್ರಿಲ್​ನಲ್ಲಿ ಈತನ ಇನ್ನಿಬ್ಬರು ಸಹಚರರಾದ ಅಹಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್​ ನಾಸಿರ್ ಅವರನ್ನು ಬಂಧಿಸಿದ್ದ ಎನ್​ಐಎ, ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ಈ ಕೇಸ್ ಹಿನ್ನೆಲೆಯಲ್ಲಿ ಮುಹಮ್ಮದ್ ತಾಖಿರ್​ ಸಂಬಂಧ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ:ದೇವಸ್ಥಾನದ ಆವರಣದಲ್ಲಿದ್ದ ಗೋವಿಗೆ ಹಗ್ಗ ಕಟ್ಟಿ ಎಳೆದು ತುಂಬಿಕೊಂಡ ಹೋದ ಕಳ್ಳರು; ಘಟನೆ ಖಂಡಿಸಿ ನಾಳೆ ಪ್ರತಿಭಟನೆ
ನಿಷೇಧಿತ ಸಂಘಟನೆಗಳಾದ ಐಎಸ್​ಐಎಸ್​, ಐಎಸ್​ಐಎಲ್ ಹಾಗೂ ಡಾಯಿಷ್​ ಮುಂತಾದವುಗಳ ಜತೆ ತಾಖಿರ್ ನಿರಂತರ ಸಂಬಂಧ ಹೊಂದಿದ್ದ. ನಿಷೇಧಿತ ಸಂಘಟನೆಗಳಿಗೆ ಫಂಡಿಂಗ್ ಮಾಡುತ್ತಿದ್ದ ಈತ ಮುಸ್ಲಿಂ ಯುವಕರನ್ನು ಸೆಳೆದು ಖುರಾನ್ ಸರ್ಕಲ್ ಎಂಬ ಗ್ರೂಪ್​ಗೆ ಸೇರಿಸಿಕೊಂಡು ಅವರನ್ನು ಐಸಿಸ್​ಗೆ ಸೇರಲು ಸಿರಿಯಾಗೆ ಕಳಿಸುತ್ತಿದ್ದ.
ಇದನ್ನೂ ಓದಿ:ಕುಡಿದು ಕಾರು ಚಲಾಯಿಸಿದ್ದ, ತಡೆದಿದ್ದಕ್ಕೆ ‘ನಾನ್ಯಾರು ಗೊತ್ತಾ?’ ಎಂದು ಪೊಲೀಸ್​ಗೇ ಕಾರು ಗುದ್ದಿಸಿ ಕೊನೆಗೂ ಸಿಕ್ಕಿಬಿದ್ದ..
2013ರಲ್ಲಿ ಕಾನೂನುಬಾಹಿರವಾಗಿ ಸಿರಿಯಾಗೆ ಭೇಟಿ ನೀಡಿದ್ದ ಈತ ನಿಷೇಧಿತ ಸಂಘಟನೆಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಿ, ಭಾರತೀಯ ಮುಸ್ಲಿಮರ ಸಹಕಾರ ಒದಗಿಸುವ ಭರವಸೆಯನ್ನೂ ನೀಡಿದ್ದ ಎಂದು ಎನ್​ಐಎ ತಿಳಿಸಿದೆ.
‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

ಸಿಡಿಲ ಹೊಡೆತಕ್ಕೆ ತಲೆ ಸೀಳಿ ಹೋದರೂ ಬದುಕುಳಿದ ರೈತ; ಮತ್ತೊಂದೆಡೆ ಸಿಡಿಲಿನಿಂದಾಗಿ ಇಬ್ಬರು ಹಾಗೂ 13 ಕುರಿಗಳ ಸಾವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 12 =
Remember me
