ಪುಣೆ: ಇಸ್ಲಾಮಿಕ್ ಸ್ಟೇಟ್​ ಖೊರಸಾನ್​ ಪ್ರೊವಿಯೆನ್ಸ್​ ಗುಂಪಿನ ಆತ್ಮಾಹುತಿ ಬಾಂಬರ್​ ಮಹಿಳೆ ಸೇರಿ ಇಬ್ಬರನ್ನು ನ್ಯಾಷನಲ್ ಇನ್​ವೆಸ್ಟಿಗೇಷನ್ ಏಜೆನ್ಸಿ(ಎನ್​ಐಎ) ಸ್ಥಳೀಯ ಪೊಲೀಸರ ನೆರವಿನೊಂದಿಗೆ ಭಾನುವಾರ ಬಂಧಿಸಿದೆ. ಫಿದಾಯೇ ಎಂದು 2018ರಲ್ಲಿ ಗುರುತಿಸಲ್ಪಟ್ಟ ಮಹಿಳೆ ಈಕೆಯಾಗಿದ್ದು, ಮಹಾರಾಷ್ಟ್ರದಲ್ಲಿ ಉಗ್ರ ಚಟುವಟಿಕೆ ಸಂಬಂಧ ಕೇಸ್​ನಲ್ಲಿ ಇವರನ್ನು ಎನ್​ಐಎ ವಶಕ್ಕೆ ತೆಗೆದುಕೊಂಡಿದೆ.
ಬಂಧಿತ ಮಹಿಳೆಯನ್ನು ಸಾದಿಯಾ ಅನ್ವರ್ ಶೇಖ್​ ಎಂದು ಗುರುತಿಸಲಾಗಿದೆ. ಈಕೆಯ ಜತೆಗೆ ನಬೀಲ್ ಸಿದ್ಧಿಖಿ ಖತ್ರಿ ಎಂಬಾತನನ್ನೂ ಎನ್​ಐಎ ಬಂಧಿಸಿದೆ. ಇವರು ಪುಣೆಯ ಯೆರವಾಡ, ಕೊಂಧ್ವಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದರು.
ಇದನ್ನೂ ಓದಿ:ಹಳ್ಳ ಹಿಡಿದ ಕೆಐಎಡಿಬಿ ಅವ್ಯವಹಾರ ತನಿಖೆ
ಪೊಲೀಸ್ ಮಾಹಿತಿ ಪ್ರಕಾರ, 2018ರಲ್ಲೇ ಸಾದಿಯಾ ಅನ್ವರ್ ಶೇಖ್ ಬಗ್ಗೆ ಅಲರ್ಟ್​ ಘೋಷಣೆಯಾಗಿತ್ತು. ಅದರಲ್ಲಿ ಆಕೆ ಒಂದು ಉಗ್ರ ಸಂಘಟನೆಯ ಫಿದಾಯೇ (ಆತ್ಮಾಹುತಿ ಬಾಂಬರ್​) ಎಂಬ ಬಗ್ಗೆಯೂ ಮಾಹಿತಿ ಇತ್ತು. 2015ರಿಂದಲೇ ಆಕೆಯ ಚಲನವಲನಗಳ ಬಗ್ಗೆ ನಿಗಾವಹಿಸಲಾಗಿದ್ದು, ಆಕೆಯ ಕುಟುಂಬ ಸದಸ್ಯರು ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ:ಒಂದೇ ದಿನ 45 ಸಾವು!
ಬಂಧಿತ ಇಬ್ಬರು ಪುಣೆ ಆಸುಪಾಸಿನಲ್ಲಿ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ದೆಹಲಿಯಿಂದ ಲಭಿಸಿತ್ತು. ದೆಹಲಿಯಲ್ಲಿ ಇತ್ತೀಚೆಗೆ ಬಂಧಿಸಲ್ಪಟ್ಟ ಉಗ್ರರಿಬ್ಬರು ಇವರಿಬ್ಬರ ಬಗ್ಗೆ ಮಾಹಿತಿ ದೆಹಲಿ ಪೊಲೀಸರಿಗೆ ನೀಡಿದ್ದರು. ಹಾಗೆ ಈ ಕಾರ್ಯಾಚರಣೆ ನಡೆದಿತ್ತು. (ಏಜೆನ್ಸೀಸ್)
ಸಮುದಾಯಕ್ಕೆ ಹರಡಿತಾ ಸೋಂಕು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eighteen =
Remember me
