ನವದೆಹಲಿ: ಗುಜರಾತ್​ನ ಮುಂದ್ರಾ ಡಾಕ್​ಯಾರ್ಡ್​ನಲ್ಲಿ ಸೂಪರ್​ವೈಸರ್ ಆಗಿದ್ದ ಐಎಸ್​ಐ ಏಜೆಂಟ್ ಒಬ್ಬ ನ್ಯಾಷನಲ್ ಇನ್​ವೆಸ್ಟಿಗೇಶನ್ ಏಜೆನ್ಸಿ(ಎನ್​ಐಎ) ಬಲೆಗೆ ಬಿದ್ದಿದ್ದಾನೆ. ಆತ ಪಾಕಿಸ್ತಾನದ ಐಎಸ್​ಐ ಪರವಾಗಿ ಭಾರತದಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಸಾಕ್ಷ್ಯಾಧಾರಗಳು ದೊರಕಿದ ಕಾರಣ ಆತನನ್ನು ಎನ್​ಐಎ ಬಂಧಿಸಿದೆ.
ಬಂಧಿತ ಐಎಸ್​ಐ ಏಜೆಂಟ್​ನನ್ನು ರಜಾಕ್ ಭಾಯ್​ ಕುಂಭಾರ್ ಎಂದು ಗುರುತಿಸಲಾಗಿದೆ. ಈತ ಗುಜರಾತ್​ನ ಪಶ್ಚಿಮ ಕಛ್​ ನಿವಾಸಿ. ಭಾನುವಾರ ಈತನನ್ನು ಬಂಧಿಸಲಾಗಿದೆ. ಎನ್​ಐಎ ಉತ್ತರ ಪ್ರದೇಶದ ಡಿಫೆನ್ಸ್​/ಐಎಸ್​ಐ ಕೇಸ್​ ನ ತನಿಖೆ ನಡೆಸುತ್ತಿರುವಾಗ ಈತನ ಕುರಿತ ಮಾಹಿತಿ ಲಭ್ಯವಾಗಿತ್ತು. ಅಲ್ಲದೆ, ಸಾಕ್ಷ್ಯಾಧಾರಗಳೂ ಲಭಿಸಿದ್ದವು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕರೊನಾ ಹೆಚ್ಚಳಕ್ಕೆ ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿದ್ದೇ ಕಾರಣ ಎಂದ ದಿನೇಶ್‌ ಗುಂಡೂರಾವ್‌: ಕಮೆಂಟಿಗರು ಕಿಡಿಕಿಡಿ…
ಉತ್ತರ ಪ್ರದೇಶದ ಕೇಸ್​ಗೆ ಸಂಬಂಧಿಸಿ ಜನವರಿ 19ರಂದು ಲಖನೌ ನ ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದು ಚಾಂದೋಲಿ ಜಿಲ್ಲೆಯ ಮೊಘಲ್​ ಸರಾಯ್​ ನ ಮೊಹಮ್ಮದ್ ರಶೀದ್ ಬಂಧನಕ್ಕೆ ಸಂಬಂಧಿಸಿದ್ದಾಗಿದೆ. ಇದಾಗಿ, ಎನ್​ಐಎ ಏಪ್ರಿಲ್ 6ರಂದು ಕೇಸನ್ನು ಮತ್ತೆ ರಿಜಿಸ್ಟರ್ ಮಾಡಿಕೊಂಡಿದ್ದು, ಐಪಿಸಿ ಮತ್ತು ಯುಎಪಿಎ ಕಾಯ್ದೆಯ ಹಲವು ಅಂಶಗಳನ್ನು ಸೇರಿಸಿತ್ತು.
ಇದನ್ನೂ ಓದಿ:ಈ ವಿಷಯ ಕೊನೆಗೂ ಅರ್ಥವಾಗಲಿಲ್ಲ … ಹೀಗಂತ ಜಗ್ಗೇಶ್​ ಹೇಳಿದ್ದ್ಯಾಕೆ?
ವಿಚಾರಣೆ ಸಂದರ್ಭದಲ್ಲಿ ರಶೀದ್​ ಪಾಕಿಸ್ತಾನದ ರಕ್ಷಣಾ ಇಲಾಖೆ ಅಥವಾ ಐಎಸ್​ಐ ಹ್ಯಾಂಡ್ಲರ್ಸ್ ಜತೆಗೆ ಸಂಪರ್ಕದಲ್ಲಿರುವುದು ಬಹಿರಂಗವಾಗಿದೆ. ಅಲ್ಲದೆ ರಶೀದ್ ಎರಡು ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ. ಆತ ಭಾರತದ ಸೂಕ್ಷ್ಮ ಚಿತ್ರಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ್ದ. ರಕ್ಷಣಾ ಪಡೆಗಳ ನಡೆಯ ಕುರಿತ ಮಾಹಿತಿಯನ್ನೂ ಅಲ್ಲಿಗೆ ಕಳುಹಿಸಿದ್ದ ಎಂದು ಎನ್​ಐಎ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸಿಡಿಪಿ ಬಿಡುಗಡೆ ಮಾಡಿದ ಶಿವಣ್ಣ; ಥ್ಯಾಂಕ್ಸ್​ ಹೇಳಿದ ಕಿಚ್ಚ …
ಇದೇ ವಿಚಾರಣೆ ವೇಳೆ, ಕುಂಭಾರ್ ಕುರಿತ ವಿವರವನ್ನೂ ರಶೀದ್ ಬಾಯ್ಬಿಟ್ಟಿದ್ದ. ಕುಂಭಾರ್ ಐಎಸ್​ಐ ಏಜೆಂಟ್ ಆಗಿದ್ದು ರಿಜ್ವಾನ್ ಎಂಬಾತನ ಖಾತೆಗೆ 5,000 ರೂಪಾಯಿ ಪೇಟಿಎಂ ಮೂಲಕ ರವಾನಿಸಿದ್ದ ಎಂಬುದನ್ನೂ ಹೇಳಿದ್ದ. ಮಾಹಿತಿ ನೀಡಿದ್ದಕ್ಕಾಗಿ ಐಎಸ್​ಐ ಹ್ಯಾಂಡ್ಲರ್ಸ್ ನಿರ್ದೇಶನದಂತೆ ಕುಂಭಾರ್​ ಈ ಹಣವನ್ನು ರಶೀದ್​ಗೆ ಪಾವತಿಸಿದ್ದ. ಈ ಸಂಬಂಧ ಎನ್​ಐಎ ಅಧಿಕಾರಿಗಳು ಕಳೆದ ಗುರುವಾರವೇ ಕುಂಭಾರ್ ಮನೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸೂಕ್ಷ್ಮ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದರು. (ಏಜೆನ್ಸೀಸ್)
ನ್ಯಾಯಾಂಗ ನಿಂದನೆ ಕೇಸ್ – ಪ್ರಶಾಂತ್ ಭೂಷಣ್​ಗೆ 1 ರೂಪಾಯಿ ದಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − two =
Remember me
