ದೆಹಲಿ:ನಿಜಾಮಾಬಾದ್ ಭಯೋತ್ಪಾದನೆ ಸಂಚಿನ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮಾಸ್ಟರ್ ಮೈಂಡ್​ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ತೆಗೆದುಕೊಂಡಿದೆ.ಶಸ್ತ್ರ ತರಬೇತುದಾರನಾಗಿದ್ದ ಮೊಹಮದ್ ಯೂನಸ್​ನನ್ನು ಎನ್​ಐಎ ಅಧಿಕಾರಿಗಳು ತೆಲಂಗಾಣದಲ್ಲಿ ಬಂಧಿಸಿದ್ದಾರೆ. ತೆಲಂಗಾಣ ಹಾಗೂ ಆಂಧ್ರದಲ್ಲಿ ಕೆಲವು ಯುವಕರಿಗೆ ಶಸ್ತಾಸ್ತ್ರಗಳ ತರಬೇತಿಯನ್ನು ಕೊಡುತ್ತಿದ್ದ ಈತ ಬಳ್ಳಾರಿ ಜಿಲ್ಲೆಯಲ್ಲಿ ವಾಸವಾಗಿದ್ದ.ಇದನ್ನೂ ಓದಿ:ಭಾರತೀಯರು ಮಾತ್ರ ಬಳಸುವ ಇಂಗ್ಲಿಷ್​​ನ 10 ಪದಗಳು ಯಾವವು ಗೊತ್ತಾ?2022ರಲ್ಲಿ ಬಳ್ಳಾರಿಯ ಯೂನಸ್ ಮನೆ ಮೇಲೆ ಎನ್​ಐಎ ದಾಳಿ ಮಾಡಿತ್ತು. ಈ ವೇಳೆ ಪರಾರಿಯಾಗಿದ್ದ‌ ಯೂನಸ್, ಇಡೀ ಕುಟುಂಬವನ್ನು ತೆಲಂಗಾಣಕ್ಕೆ ಶಿಫ್ಟ್ ಮಾಡಿಸಿದ್ದ. ಅಲ್ಲದೇ, ತೆಲಂಗಾಣದಲ್ಲಿ ಹೆಸರು ಬದಲಿಸಿಕೊಂಡು ವಾಸವಾಗಿದ್ದನು.ಬಶೀರ್ ಎಂದು ಹೆಸರು ಬದಲಾಯಿಸಿ ಫ್ಲಂಬರ್ ಕೆಲಸ ಮಾಡುತ್ತಿದ್ದ ಯೂನಸ್​ ತೆಲಂಗಾಣ ಹಾಗೂ ಆಂಧ್ರ ಟ್ರೈನರ್​ಗಳಿಗೆ ಕೋ ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದ ಈತ ನಿಜಾಮಾಬಾದ್ ಪಿಎಫ್ಐ ಕೇಸ್​ನಲ್ಲಿ ಪ್ರಮುಖ ಆರೋಪಿಯಾಗಿದ್ದನು.ಈ ಕೇಸ್​ನ್ನು ತೆಲಂಗಾಣ ಪೊಲೀಸರು ಕೇಸ್ ದಾಖಲಿಸಿ ಎನ್​ಐಎ ವರ್ಗಾವಣೆ ಮಾಡಿದ್ದರು. ಸದ್ಯ ಮೊಹಮದ್ ಯೂನಸ್​ನನ್ನು ಬಂಧಿಸಿ ವಿಚಾರಣೆ ಮಾಡುತ್ತಿರುವ ಎನ್​ಐಎ ಯೂನಸ್ ಜೊತೆಯಿದ್ದ ಇಲಿಯಾಸ್​ಗಾಗಿ ಹುಡುಕಾಡುತ್ತಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + eighteen =
Remember me
