ತಿರುಚಿ:ಹೊಸ ವರ್ಷದ ಸಮಯದಲ್ಲಿ ಡ್ರಗ್ಸ್​ ಮಾರಾಟ ಹೆಚ್ಚಾಗುತ್ತದೆ. ಇದನ್ನು ತಡೆಗಟ್ಟಲು ಎನ್​ಐಎ ಭಾರೀ ಕಾರ್ಯಾಚರೆಗಳನ್ನು ನಡೆಸಿದೆ. ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆ ಎನ್ಐಎ ಮುಂಜಾಗ್ರತಾ ಕ್ರಮವಾಗಿ ಭರ್ಜರಿ ಬೇಟೆ ಆಡಿದ್ದು ಇವರ ಇಬ್ಬಿಬ್ಬರು ಕಿಂಗ್​ಪಿನ್​ಗಳು ಸೆರೆಯಾಗಿದ್ದಾರೆ.
ಶ್ರೀಲಂಕಾ ಡ್ರಗ್ ಮಾಫಿಯಾದ ಇಬ್ಬರು ಕಿಂಗ್ ಪಿನ್ ಗಳು ಸೇರಿ ಒಂಭತ್ತು ಜನ ಶ್ರೀಲಂಕಾ ಪ್ರಜೆಗಳನ್ನು ಎನ್​ಐಎ ಬಂಧಿಸಿದೆ. ತಿರುಚಿಯ ಶ್ರೀಲಂಕಾ ಕ್ಯಾಂಪ್​ನಲ್ಲಿ ಬಂಧಿಸಲಾಗಿದ್ದು ಗುಣಶೇಖರನ್ ಅಲಿಯಾಸ್ ಗುಣ,ಪುಷ್ಪರಾಜನ್ ಅಲಿಯಾಸ್ ಪೋಕುಟ್ಟಿ ಶ್ರೀಲಂಕಾ ಡ್ರಗ್ ಮಾಫಿಯಾದ ಬಂಧಿತ ಕಿಂಗ್​ಪಿನ್​ಗಳು.
ಬಂಧಿತರಲ್ಲಿ ಇಬ್ಬರ ಮೇಲೆ ಪಾಕಿಸ್ತಾನ ಮೂಲದ ಹಾಜಿ ಸಲೀಂ ಜೊತೆ ಸೇರಿ ಡ್ರಗ್ ಮಾಫಿಯಾ ನಡೆಸುತ್ತಿರುವ ಆರೋಪ ಕೂಡ ಇದೆ. ಭಾರತ ಮತ್ತು ಶ್ರೀಲಂಕಾದಲ್ಲಿ ಡ್ರಗ್ ಮಾಫಿಯಾ ನಡೆಸುತ್ತಿರುವ ಆರೋಪದ ಜೊತೆಗೆ ಇವರ ಮೇಲೆ ಪಾಕಿಸ್ತಾನದ ಹಾಜಿ ಸಲೀಂಗೆ ಡ್ರಗ್ಸ್ ಹಾಗೂ ವೆಪನ್ ಸಪ್ಲೈಯರ್ ಆಗಿರುವ ಆರೋಪವೂ ಕೇಳಿಬಂದಿದೆ.
ಸೋರ್ಸ್​ಗಳ ಖಚಿತ ಮಾಹಿತಿ ಅಧರಿಸಿ ದಾಳಿ ಮಾಡಿದ್ದ ಎನ್ಐಎ ಅಧಿಕಾರಿಗಳು ಭಾರಿ ಪ್ರಮಾಣದ ಡ್ರಗ್ಸ್​ ಜನರ ಕೈ ಸೇರುವುದನ್ನು ತಪ್ಪಿಸಿದ್ದಾರೆ. ಜುಲೈನಲ್ಲಿ ಈ ಕಿಂಗ್​ಪಿನ್​ಗಳ ವಿರುದ್ಧ ಎನ್ಐಎ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿತ್ತು. ಅದರಂತೆ ಈಗ ಬಂಧನವೂ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − four =
Remember me
