ನವದೆಹಲಿ: ಕೊಚ್ಚಿಯಲ್ಲಿ ನಿರ್ಮಿಸಲ್ಪಡುತ್ತಿರುವ ಸ್ವದೇಶಿ ಸಮರ ವಿಮಾನ ವಾಹಕ ನೌಕೆಯ ಹಾರ್ಡ್​ವೇರ್ ಕಳವುಗೈದ ಪ್ರಕರಣದಲ್ಲಿ ಇಬ್ಬರ ವಿರುದ್ಧ ನ್ಯಾಷನಲ್ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ಚಾರ್ಜ್​ಶೀಟ್ ಸಲ್ಲಿಸಿದೆ. ಬಿಹಾರದ ಮುಂಗೇರ್​ ಜಿಲ್ಲೆಯ ಸುಮಿತ್ ಕುಮಾರ್ ಸಿಂಗ್ ಮತ್ತು ರಾಜಸ್ಥಾನದ ಹನುಮಗಢ ಜಿಲ್ಲೆಯ ದಯಾರಾಮ್​ ಆರೋಪಿಗಳು.
ಇವರ ವಿರುದ್ಧ ರಾಂಡಂ ಆ್ಯಕ್ಸಸ್ ಮೆಮೊರಿ(ಆರ್​​ಎಎಂ) ಮತ್ತು ಸಾಲಿಡ್ ಸ್ಟೇಟ್ ಹಾರ್ಡ್​ ಡ್ರೈವ್​ ಕಳವುಗೈದ ಆರೋಪವಿದೆ. ಭಾರತೀಯ ದಂಡ ಸಂಹಿತೆ ಮತ್ತು ಇನ್​ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್​ನ ವಿವಿಧ ಸೆಕ್ಷನ್​ಗಳ ಪ್ರಕಾರ ಆರೋಪ ಪಟ್ಟಿ ದಾಖಲಿಸಲಾಗಿದೆ. 2019ರ ಜುಲೈ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಕೊಚ್ಚಿನ ಶಿಪ್​ಯಾರ್ಡ್​ನ ಆವರಣದಲ್ಲಿ ಈ ಕಳವು ನಡೆದಿದೆ. ಈ ಸಂಬಂಧ ಸೆಪ್ಟೆಂಬರ್ 16ರಂದು ಕೊಚ್ಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಾಗಿ ಎನ್​ಐಎ ಅದೇ ವರ್ಷ ಸೆಪ್ಟೆಂಬರ್ 26ರಂದು ಮತ್ತೆ ಪುನಃ ಕೇಸ್ ದಾಖಲಿಸಿಕೊಂಡು ತನಿಖೆ ಶುರುಮಾಡಿತ್ತು.
ಇದನ್ನೂ ಓದಿ:ಚೀನಾಕ್ಕೆ ಜರ್ಮನಿ ಕಡಕ್ ವಾರ್ನಿಂಗ್!
ವಿವಿಧ ರಾಜ್ಯಗಳಲ್ಲಿ ಒಂಬತ್ತು ತಿಂಗಳ ಕಾಲ ಈ ಬಗ್ಗೆ ವಿಸ್ತೃತ ತನಿಖೆ ನಡೆಸಿದ ಎನ್​ಐಎ, ವಿಶೇಷವಾಗಿ ಬಿಹಾರ ಮತ್ತು ರಾಜಸ್ಥಾನಗಳಲ್ಲಿ ಹೆಚ್ಚಿನ ತನಿಖೆ ನಡೆಸಿತ್ತು. ಈ ಇಬ್ಬರು ಅನುಮತಿ ಇಲ್ಲದೆ ನೌಕೆಯನ್ನೇರಿ ಈ ಸೂಕ್ಷ್ಮ ಸಂಕೀರ್ಣ ಭಾಗಗಳನ್ನು ಕಳವುಗೈದಿದ್ದರು. ಈ ವರ್ಷ ಜೂನ್ 10ರಂದು ಇಬ್ಬರನ್ನೂ ಎನ್​ಐಎ ಬಂಧಿಸಿತ್ತು. (ಏಜೆನ್ಸೀಸ್)
ಆಶ್ರಮಕ್ಕಾಗಿ ಮಾಂಗಲ್ಯ ಒತ್ತೆ! : ಅನಾಥರಿಗೆ ಸಂಸ್ಕಾರ ಆಶ್ರಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
