ದೆಹಲಿ:ಪಾಕಿಸ್ತಾನ ಮೂಲದ ಶಂಕಿತರು ನಡೆಸುತ್ತಿರುವ ‘ಘಜ್ವಾ-ಎ-ಹಿಂದ್’ ಎಂಬ ಮಾದರಿ ಸಂಘಟನೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಮೂರು ರಾಜ್ಯಗಳಲ್ಲಿ ದಾಳಿ ನಡೆಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5 ಕಡೆಗಳಲ್ಲಿ ಎನ್​​​ಐಎ ದಾಳಿ ನಡೆಸಿದ್ದು, ಬಿಹಾರದ ಪಾಟ್ನಾ ಮತ್ತು ದರ್ಬಂಗಾದಲ್ಲಿ, ಗುಜರಾತ್​​​ನ ಸೂರತ್​​ನಲ್ಲಿ ಮತ್ತು ಉತ್ತರ ಪ್ರದೇಶದ ಬರೇಲಿಯಲ್ಲಿ ಎನ್​ಐಎ ದಾಳಿ ನಡೆಸಿದೆ. ಈ ಸಮಯದಲ್ಲಿ ಮೊಬೈಲ್ ಫೋನ್‌ಗಳು, ಮೆಮೊರಿ ಕಾರ್ಡ್‌ಗಳು, ಸಿಮ್ ಕಾರ್ಡ್‌ಗಳು ಮತ್ತೀತರ ಡಿಜಿಟಲ್ ಸಾಧನ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.ಇದನ್ನೂ ಓದಿ:ನುಡಿದಂತೆ ನಡೆದ ಸಿಎಂ ಅಂದ್ರೆ ಅದು ಸಿದ್ದರಾಮಯ್ಯ: ಶಾಸಕ ಎಸ್.ಟಿ. ಸೋಮಶೇಖರ್
ಕಳೆದ ವರ್ಷ ಜುಲೈ 14 ರಂದು ಬಿಹಾರ ಪೊಲೀಸರು ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದ ಮಾರ್ಗೂಬ್ ಅಹ್ಮದ್ ದಾನಿಶ್ ಅಲಿಯಾಸ್ ತಾಹಿರ್​​ನನ್ನು ಬಂಧಿಸಿದ ನಂತರ ಈ ಕುರಿತು ಪ್ರಕರಣವನ್ನು ದಾಖಲಿಸಿದ್ದರು. ನಂತರ ಎನ್‌ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡು ಐಪಿಸಿ ಮತ್ತು ಯುಎ (ಪಿ) ಆಕ್ಟ್, 1967 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಜನೇವರಿ 6ರಂದು ಆರೋಪಪಟ್ಟಿ ಸಲ್ಲಿಸಿತ್ತು.
ಆರೋಪಿಯು, ಪಾಕ್ ಮೂಲದ ಅನುಮಾನಾಸ್ಪದ ವ್ಯಕ್ತಿಗಳು ನಡೆಸುತ್ತಿದ್ದ ಘಜ್ವಾ-ಎ-ಹಿಂದ್ ಘಟಕದ ಸದಸ್ಯ ಎಂದು ತಿಳಿದುಬಂದಿದ್ದು, ಇದರ ಸ್ಥಾಪನೆಗಾಗಿ ಇತರ ಯುವಕರನ್ನು ಸೇರ್ಪಡೆಗೊಳಿಸುವ ಉದ್ದೇಶವನ್ನು ಹೊಂದಿದ್ದನು.ಇದನ್ನೂ ಓದಿ:ಬೆಂಗಳೂರಲ್ಲಿ ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್: ಭಾರತದ ಅಗ್ರ ಬೈಕರ್‌ಗಳು ಸೇರಿ120 ಮಂದಿ ಭಾಗಿಅಲ್ಲದೆ, ಝೈನ್ ಎಂಬ ಪಾಕಿಸ್ತಾನಿ ಪ್ರಜೆ ರಚಿಸಿದ ‘ಘಜ್ವಾ-ಎ-ಹಿಂದ್’ ಎಂಬ ವಾಟ್ಸಾಪ್ ಗ್ರೂಪ್‌ನ ಅಡ್ಮಿನ್ ಮಾರ್ಗೂಬ್ ಎಂದು ತನಿಖೆಯಿಂದ ತಿಳಿದುಬಂದಿದ್ದು, ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ದೇಶದಲ್ಲಿ ಸ್ಲೀಪರ್ ಸೆಲ್‌ಗಳನ್ನು ಸ್ಥಾಪಿಸುವ ಉದ್ದೇಶದಿಂದ ಈ ದುಷ್ಕರ್ಮಿಗಳು ಅನೇಕ ಭಾರತೀಯರು, ಪಾಕಿಸ್ತಾನಿಗಳು, ಬಾಂಗ್ಲಾದೇಶಿಗಳು ಮತ್ತು ಯೆಮೆನ್ ಪ್ರಜೆಗಳನ್ನು ಈ ಗುಂಪಿಗೆ ಸೇರಿಸಿದ್ದರು.
ಆರೋಪಿಗಳು ‘ಘಜ್ವಾ-ಎ-ಹಿಂದ್’ ಎಂಬ ಗ್ರೂಪ್​ಗಳನ್ನು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಬಿಪಿ ಮೆಸೆಂಜರ್‌ನಲ್ಲಿ ರಚಿಸಿದ್ದರು. ಜತೆಗೆ ‘ಬಿ.ಡಿ.ಘಜ್ವಾ ಇ ಹಿಂದ್ ಬಿ.ಡಿ.’ ಹೆಸರಿನಲ್ಲಿ ಮತ್ತೊಂದು ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ ಅದಕ್ಕೆ ಬಾಂಗ್ಲಾದೇಶಿ ಪ್ರಜೆಗಳನ್ನು ಸೇರಿಸಿದ್ದರು.ಪ್ರಕರಣದಲ್ಲಿ ಭಾಗಿಯಾಗಿರುವ ವಿವಿಧ ಶಂಕಿತರು ಪಾಕಿಸ್ತಾನ ಮೂಲದ ಹಲವರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಘಜ್ವಾ-ಎ-ಹಿಂದ್​​ನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕುರಿತಾದ ಎನ್‌ಐಎ ತನಿಖೆ ಪ್ರಗತಿಯಲ್ಲಿದೆ.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 1 =
Remember me
