ನವದೆಹಲಿ:ಚಿನ್ನ ಕಳ್ಳಸಾಗಣೆ ಕೇಸ್​ಗೆ ಸಂಬಂಧಿಸಿ ನ್ಯಾಷನಲ್ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ಅಧಿಕಾರಿಗಳು ಕೇರಳದ ಐದು ಕಡೆಗಳಲ್ಲಿ ಶುಕ್ರವಾರ ಶೋಧ ಕಾರ್ಯ ನಡೆಸಿತು. ಪ್ರಕರಣದಲ್ಲಿ ಆರೋಪಿಗಳಾಗಿರುವ ಐವರ ಮನೆಗಳಲ್ಲಿ ಈ ಶೋಧ ಕಾರ್ಯ ನಡೆಯಿತು ಎಂದು ಎನ್​ಐಎ ವಕ್ತಾರ ತಿಳಿಸಿದ್ದಾರೆ.
ಮೊಹಮ್ಮದ್​ ಅಸ್ಲಾಂ, ಅಬ್ದುಲ್ ಲತೀಫ್​, ನಜರುದ್ದೀನ್ ಶಾ, ರಮ್​ಝಾನ್​ ಪಿ, ಮುಹಮ್ಮದ್​ ಮನ್ಸೂರ್ ಎಂಬ ಐವರು ಆರೋಪಿಗಳ ಕುರಿತು ಸಂಗ್ರಹಿಸಿ ಮಾಹಿತಿ ಆಧರಿಸಿ ಸಾಕ್ಷ್ಯ ಸಂಗ್ರಹಿಸುವ ಸಲುವಾಗಿ ಎನ್​ಐಎ ಅಧಿಕಾರಿಗಳು ಅವರ ಮನೆಗಳಲ್ಲಿ ಶೋಧಕಾರ್ಯ ನಡೆಸಿದ್ದರು. ಶೋಧ ಕಾರ್ಯದ ವೇಳೆ ಮನೆಯಿಂದ ಅನೇಕ ಇಲೆಕ್ಟ್ರಾನಿಕ್ ವಸ್ತುಗಳನ್ನು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅಪಘಾತ ಬಗ್ಗೆ ಇದುವರೆಗೂ ನಟ ಶಶಿಕುಮಾರ್ ಹೇಳಿದ್ದು ಸುಳ್ಳಾ? ಅಸಲಿ ಕಾರಣ ತಿಳಿದ್ರೆ ಶಾಕ್​ ಆಗ್ತೀರಾ!​
ಯುಎಇ ಕಾನ್ಸುಲೇಟ್ ಜನರಲ್ ಮೂಲಕ ರಾಜತಾಂತ್ರಿಕ ಗೂಡ್ಸ್ ಹೆಸರಿನಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 21 ಆರೋಪಿಗಳನ್ನು ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಜುಲೈ 5ರಂದು 14.82 ಕೋಟಿ ರೂಪಾಯಿ ಮೌಲ್ಯದ 30 ಕಿಲೋ ಚಿನ್ನ ಪತ್ತೆಯಾದ ಪ್ರಕರಣ ಇದು. (ಏಜೆನ್ಸೀಸ್)
ಎರಡು ತಿಂಗಳ ಬಳಿಕ ಹೆಚ್ಚಾಯಿತು ಪೆಟ್ರೋಲ್, ಡೀಸೆಲ್ ಬೆಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 20 =
Remember me
