ನವದೆಹಲಿ:ಇಸ್ಲಾಮಿಕ್​ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆನ್ನಲಾದ ವ್ಯಕ್ತಿಗಳ ಗುಂಪೊಂದರ ಮೇಲೆ ನಿಗಾ ಇಟ್ಟಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಸೋಮವಾರ ದಿಢೀರನೇ ದೆಹಲಿ, ಕೇರಳ ಮತ್ತು ಕರ್ನಾಟಕ ಸೇರಿದಂತೆ ದೇಶದ 10 ಕಡೆಗಳಲ್ಲಿ ದಾಳಿ ಮಾಡಿದೆ.
ಕೇವಲ 48 ಗಂಟೆಗಳ ಹಿಂದೆ ಎನ್​ಐಎ ದಾಖಲಿಸಿಕೊಂಡ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿಢೀರ್​ ದಾಳಿ ನಡೆದಿದೆ. ಸುಮಾರು 6 ರಿಂದ 7 ಮಂದಿ ಗುಂಪನ್ನು ತನಿಖಾ ಸಂಸ್ಥೆ ಕೆಲವು ದಿನಗಳಿಂದ ಮೇಲ್ವಿಚಾರಣೆ ನಡೆಸುತ್ತಿತ್ತು. ಈ ಸಂಬಂಧ ಎನ್​ಐಎ ಕೇಸ್​ ದಾಖಲಿಸಿಕೊಂಡಿತ್ತು.
ಇದನ್ನೂ ಓದಿರಿ:ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!
ಮೂಲಗಳ ಪ್ರಕಾರ ಸದ್ಯದ ದಾಳಿಯಲ್ಲಿ ಐವರು ಆರೋಪಿಗಳನ್ನ ಎನ್​ಐಎ ಬಂಧಿಸಿದೆ. ಪ್ರಭಾವಶಾಲಿ ಮುಸ್ಲಿಂ ಯುವಕರನ್ನು ಸಾಮಾಜಿಕ ಜಾಲತಾಣ ಮೂಲಕ ನೇರವಾಗಿ ಟಾರ್ಗೆಟ್​ ಮಾಡುತ್ತಿರುವ ಪಾಕಿಸ್ತಾನ, ಅವರನ್ನು ಆನ್​ಲೈನ್​ ಮೂಲಕವೇ ನೇಮಕ ಮಾಡಿಕೊಂಡು ತರಬೇತಿ ನೀಡಿ ಸ್ಥಳೀಯ ದಾಳಿಗಳನ್ನು ನಡೆಸಲು ಪಾಕ್​ ಪ್ಲಾನ್​ ಮಾಡುತ್ತಿರುವುದು ಬೆಳಕಿಗೆ ಬಂದಿದೆ.(ಏಜೆನ್ಸೀಸ್​)
ಜಯಲಲಿತಾ ಸಾವಿಗೆ ಯಾರು ಹೊಣೆ? ಸ್ಫೋಟಕ ಹೇಳಿಕೆ ನೀಡಿದ ಸಿಎಂ ಪಳನಿಸ್ವಾಮಿ!

ಗೂಗಲ್ ಉದ್ಯೋಗಿ ಸಿ.ಡಿ. ವಿಜಯಕುಮಾರ್ ಈಗ ಕೃಷಿಕ!

ಬಿಗ್​ಬಾಸ್​ ಸೀಸನ್-8ರಿಂದ ನಿರ್ಮಲಾ ಚನ್ನಪ್ಪ ಔಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + seventeen =
Remember me
