ಶ್ರೀನಗರ:ಟೆರರ್​ ಫಂಡಿಂಗ್​ ಕೇಸ್​ಗೆ ಸಂಬಂಧಿಸಿ ನ್ಯಾಷನಲ್ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ಗುರುವಾರವೂ ದಾಳಿ ಮುಂದುವರಿಸಿದ್ದು, ಕಾಶ್ಮೀರ ಕಣಿವೆ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯ ಒಂಭತ್ತು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದೆ. ಆರು ಎನ್​ಜಿಒ ಮತ್ತು ಟ್ರಸ್ಟ್​ಗಳಿಗೆ ಸಂಬಂಧಿಸಿದ ಕಚೇರಿಗಳ ಮೇಲೆ ಈ ದಾಳಿ ನಡೆದಿದ್ದು, ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಫಲಾಹ್​ -ಏ-ಆಮ್​ ಟ್ರಸ್ಟ್, ಚಾರಿಟಿ ಅಲಯನ್ಸ್ ದೆಹಲಿ, ಹ್ಯೂಮನ್ ವೆಲ್​ಫೇರ್​ ಫೌಂಡೇಷನ್​, ಜೆಕೆ ಯತೀಮ್​ ಫೌಂಡೇಷನ್​, ಸಾಲ್​ವೇಷನ್ ಮೂವ್​ಮೆಂಟ್​ ಮತ್ತು ಜೆಕೆ ವಾಯ್ಸ್ ಆಫ್ ವಿಕ್ಟಿಮ್ಸ್ ಎಂಬ ಎನ್​ಜಿಒ/ಟ್ರಸ್ಟ್​ಗಳ ಕಚೇರಿ ಮೇಲೆ ದಾಳಿ ನಡೆದಿರುವಂಥದ್ದು. ಟ್ರಸ್ಟ್​ ಮತ್ತು ಎನ್​ಜಿಒ ಕೆಲಸಗಳಿಗೆ ಬಂದ ದೇಣಿಗೆ, ಅನುದಾನದ ಹಣವನ್ನು ಪ್ರತ್ಯೇಕತಾವಾದಿ ಮತ್ತು ದೇಶ ವಿರೋಧಿ ಕೆಲಸಗಳಿಗೆ ವ್ಯಯಿಸುತ್ತಿರುವುದು ಮೇಲ್ನೋಟಕ್ಕೆ ಸಾಬೀತಾದ ಕಾರಣ ಈ ದಾಳಿಯನ್ನು ನಡೆಸಲಾಗಿದೆ ಎಂದು ಎನ್​ಐಎ ಹೇಳಿದೆ.
ಇದನ್ನೂ ಓದಿ:ಇಸ್ಲಾಮಾಬಾದ್​ನ 10 ಲಕ್ಷ ಜನಸಂಖ್ಯೆಯಲ್ಲಿ ಹಿಂದುಗಳು 3,000- ಅವರ ದೇಗುಲ ನಿರ್ಮಾಣಕ್ಕೆ ನೂರು ಅಡ್ಡಿ!
ಈ ಸಂಬಂಧ ಅಕ್ಟೋಬರ್ 8ರಂದು ಪ್ರಕರಣ ದಾಖಲಾಗಿದ್ದು, ಟೆರರ್ ಫಂಡಿಂಗ್ ವಿಚಾರವಾಗಿ ಎನ್​ಐಎ ವಿಸ್ತೃತ ತನಿಖೆ ಶುರುಮಾಡಿದೆ. ಇದರ ಭಾಗವಾಗಿ ದಾಳಿ ನಡೆದಿದ್ದು, ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)
ರೇಪ್ ಮತ್ತು ಇತರೆ ಕ್ರೈಂ ಹೆಚ್ಚಾಗಲಿವೆ – ಪಿಡಿಪಿ ನಾಯಕ ಸುರಿಂದರ್ ಚೌಧರಿ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − two =
Remember me
