ನವದೆಹಲಿ:ಇಂದು (ಜು.23) ಲೋಕಸಭೆಯಲ್ಲಿ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇಂದಿರಾಗಾಂಧಿ ನಂತರ ಬಜೆಟ್​ ಮಂಡಿಸುತ್ತಿರುವ ದೇಶದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಈ ಬಾರಿಯ ಬಜೆಟ್​ನಲ್ಲಿ ಹಲವು ವರ್ಗಕ್ಕೆ ಮಹತ್ವದ ಬಜೆಟ್ ಘೋಷಿಸಿರುವ ವಿತ್ತ ಸಚಿವೆ, ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಬಂಪರ್​ ಕೊಡುಗೆ ನೀಡುವುದರ ಜತೆಗೆ ಉದ್ಯೋಗ ವಲಯಕ್ಕೆ ಸಿಹಿ ಹಂಚಿದ್ದಾರೆ. ನಿರ್ಮಲಾ ಸೀತಾರಾಮನ್ ಅವರ ಬಜೆಟ್​ ಕೊಂಡಾಡುತ್ತಿರುವವರ ಮಧ್ಯೆ ಇದೀಗ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ತೀವ್ರ ವಿರೋಧ ವ್ಯಕ್ತಪಡಿಸಿರುವುದು ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ:ಕೃಷಿ ವಲಯಕ್ಕೆ ಬಂಪರ್​ ಕೊಡುಗೆ ನೀಡಿದ ಮೋದಿ ಸರ್ಕಾರ; ಮೀಸಲಿಟ್ಟ ಅನುದಾನ ಎಷ್ಟು ಗೊತ್ತಾ?
11ನೇ ಕೇಂದ್ರ ಬಜೆಟ್ ಮಂಡನೆಗೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಬಜೆಟ್‌ನಲ್ಲಿ ಕೆಲವು ಅಂಶಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2024ರ ಲೋಕಸಭಾ ಚುನಾವಣೆಗೆಂದು ಕಾಂಗ್ರೆಸ್​ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯನ್ನು ಚೆನ್ನಾಗಿ ನೋಡಿಕೊಂಡು ಕಾಪಿ ಹೊಡೆದಿದ್ದೀರಾ. ಉದ್ಯೋಗ ಸೃಷ್ಟಿಯ ಭಾಗವನ್ನು ನೇರವಾಗಿ ಕಾಂಗ್ರೆಸ್‌ ಪ್ರಕಟಿಸಿದ್ದ ಮ್ಯಾನಿಫೆಸ್ಟೋಯಿಂದ ಬಳಸಿಕೊಂಡಿದ್ದೀರಾ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ನೇರ ಆರೋಪ ಎಸಗಿದ್ದಾರೆ.
“ಚುನಾವಣಾ ಫಲಿತಾಂಶದ ಬೆನ್ನಲೇ ವಿತ್ತ ಸಚಿವೆ 2024ರ ಚುನಾವಣೆಯ ಸಲುವಾಗಿ ಕಾಂಗ್ರೆಸ್ ರಿಲೀಸ್ ಮಾಡಿದ್ದ ಪ್ರಣಾಳಿಕೆಯನ್ನು ಚೆನ್ನಾಗಿ ಓದಿಕೊಂಡು ಬಜೆಟ್ ಘೋಷಣೆಗೆ ಬಂದಿರುವುದು ನನಗೆ ನಿಜಕ್ಕೂ ಖುಷಿತಂದಿದೆ. ಕಾಂಗ್ರೆಸ್ ಪ್ರಣಾಳಿಕೆಯ 30ನೇ ಪುಟದಲ್ಲಿ ವಿವರಿಸಿರುವ ಉದ್ಯೋಗ-ಸಂಯೋಜಿತ ಪ್ರೋತ್ಸಾಹವನ್ನು (ELI) ಅವರು ವಾಸ್ತವಿಕವಾಗಿ ಇಲ್ಲಿ ಅಳವಡಿಸಿಕೊಂಡಿದ್ದಾರೆ ಎಂಬುದು ನಾವು ಸಂತೋಷಪಡುವ ಸಂಗತಿಯೇ” ಎಂದು ಲೇವಡಿ ಮಾಡಿದ್ದಾರೆ.
ಕ್ಯಾಪ್ಟನ್ ಆಗಿ ಹಾರ್ದಿಕ್​ ಯಶಸ್ಸಿನ ಹಿಂದೆ ಇವರ ಪಾತ್ರ ಹೆಚ್ಚಿತ್ತು! ಶಾಕಿಂಗ್ ಸಂಗತಿ ತೆರದಿಟ್ಟ ಅಜಿತ್ ಅಗರ್ಕರ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 + 4 =
Remember me
