ದೆಹಲಿ:ನೈಜರ್‌ನಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಆದಷ್ಟು ಬೇಗ ಆ ದೇಶವನ್ನು ತೊರೆಯುವಂತೆ ಕೇಂದ್ರವು ಭಾರತೀಯರಿಗೆ ಸಲಹೆ ನೀಡಿದೆ. ಆದರೆ ನೈಜರ್​ನನ್ಲಿ ನಡೆದಿರುವ ಸೇನಾ ದಂಗೆಯೇ ಇದಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ:ಡ್ಯಾನ್ಸ್​​​ ಮಾಡುತ್ತಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ವಿದ್ಯಾರ್ಥಿನಿ..!
ನೈಜರ್‌ನಲ್ಲಿ ಏನಾಗುತ್ತಿದೆ?ಪಶ್ಚಿಮ ಆಫ್ರಿಕಾದಲ್ಲಿ ಇಸ್ಲಾಮಿಕ್ ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೈಜರ್ ಅಧ್ಯಕ್ಷ ಮೊಹಮದ್ ಬಜೌಮ್ ಅವರ ಅವರ ಮನೆಯನ್ನು ಸುತ್ತುವರೆದು ಬಂಧಿಸಿಲಾಗಿತ್ತು. ದೇಶದ ರಕ್ಷಣೆಗಾಗಿ ರಾಷ್ಟ್ರೀಯ ಮಂಡಳಿ ಎಂದು ತಮ್ಮನ್ನು ಕರೆದುಕೊಳ್ಳುವ ದಂಗೆಕೋರ ಸೈನಿಕರು, ಸರ್ಕಾರಿ ಟಿವಿ ಚಾನೆಲ್​ ಮೂಲಕ ರಾಷ್ಟ್ರದಲ್ಲಿ ಹದಗೆಡುತ್ತಿರುವ ಭದ್ರತೆ ಮತ್ತು ಕಳಪೆ ಆರ್ಥಿಕ ಮತ್ತು ಸಾಮಾಜಿಕ ಆಡಳಿತದಿಂದ ಬೇಸತ್ತು ತಾವು ದೇಶವನ್ನು ವಶಪಡಿಸಿಕೊಂಡಿದ್ದೇವೆ ಎಂದು ಘೋಷಿಸಿದರು.ಅನಂತರ ಜನರಲ್ ಅಬ್ದುರ್​​ ರೆಹಮಾನೆ ಟಿಚಿಯಾನಿ ಜುಲೈ 26ರಂದು ಅಧಿಕಾರವನ್ನು ವಶಪಡಿಸಿಕೊಂಡು, ಸಂವಿಧಾನವನ್ನು ವಿಸರ್ಜಿಸಿ, ದೇಶದ ಎಲ್ಲಾ ಸಂಸ್ಥೆಗಳನ್ನು ಅಮಾನತುಗೊಳಿಸಿ ಎಲ್ಲಾ ಗಡಿಗಳನ್ನು ಮುಚ್ಚಿದ್ದೇವೆ ಘೋಷಿಸಿದರು. ಇದರಿಂದಾಗಿ ಆ ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇತ್ತ ಪ್ರಬಲ ಸೇನಾ ಜನರಲ್‌ಗಳ ಬೆಂಬಲದೊಂದಿಗೆ ಅಬ್ದುರ್​​ ರೆಹಮಾನೆ ತಾಯ್ನಾಡಿನ ಸುರಕ್ಷತೆಗಾಗಿ ರಾಷ್ಟ್ರದ ಅಧ್ಯಕ್ಷರಾಗಿ ತಮ್ಮನ್ನು ತಾವು ಘೋಷಿಸಿಕೊಂಡರು. ಆಫ್ರಿಕಾದ ನೈಜರ್‌ನಲ್ಲಿ ಎರಡು ವಾರಗಳಿಂದ ಹಿಂಸಾಚಾರ ನಡೆಯುತ್ತಿದೆ. ಇದರಿಂದಾಗಿ ಅಲ್ಲಿನ ಭಾರತೀಯರ ಸುರಕ್ಷತೆಯ ಬಗ್ಗೆ ಆತಂಕ ಮೂಡಿದೆ.
ಇದನ್ನೂ ಓದಿ:ರಾತ್ರಿ ನಾಪತ್ತೆಯಾದ ಯುವತಿ ಮುಂಜಾನೆ ಶವವಾಗಿ ಪತ್ತೆ ಕೇಸ್​: ಎದುರುಮನೆ ಕಾಮುಕನ ಭೀಕರ ಕೃತ್ಯ ಬಯಲು
ಈ ಕ್ರಮವನ್ನು ವಿಶ್ವಸಂಸ್ಥೆ ಸೇರಿದಂತೆ ಯುರೋಪಿಯನ್ ಯೂನಿಯನ್ ಮತ್ತು ಆಫ್ರಿಕನ್ ಯೂನಿಯನ್ ಖಂಡಿಸಿವೆ. ಇದು 1960ರ ಸ್ವಾತಂತ್ರ್ಯದ ನಂತರ ನೈಜರ್ ದೇಶದಲ್ಲಿ ನಡೆದ ನಾಲ್ಕನೇ ಬಂಡಾಯ ಎಂಬುದು ಗಮನಾರ್ಹವಾಗಿದೆ. ಜತೆಗೆ ನೆರೆಯ ದೇಶಗಳಾದ ಮಾಲಿ, ಗಿನಿಯಾ, ಚಾಡ್ ಮತ್ತು ಬುರ್ಕಿನಾ ಫಾಸೊ ನಂತರ, ಮೂರು ವರ್ಷಗಳಲ್ಲಿ ಮತ್ತೊಮ್ಮೆ ದಂಗೆಯನ್ನು ಎದುರಿಸಿದ ಆಫ್ರಿಕನ್ ದೇಶ ನೈಜರ್ ಆಗಿದೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × four =
Remember me
