ಅಹಮದಾಬಾದ್​:ಕರೊನಾ ಕಣ್ಮರೆಯಾಗುತ್ತಿರುವ ಸುಸಂದರ್ಭದಲ್ಲಿಯೂ ಕೆಲ ರಾಜ್ಯಗಳಲ್ಲಿ ಮತ್ತೆ ಮಹಾಮಾರಿ ಕೋವಿಡ್​-19 ಪ್ರಕರಣಗಳು ಏರುತ್ತಿರುವ ಕಾರಣ ನಾಳೆಯಿಂದ ರಾತ್ರಿ ಕರ್ಫ್ಯೂ ಹೇರಲಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶ ಹಾಗೂ ಗುಜರಾತಿನ ಕೆಲ ನಗರಗಳಲ್ಲಿ ಕರೊನಾ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವುದರಿಂದ ರಾತ್ರಿ ಕರ್ಫ್ಯೂ ಹೇರಲಾಗಿದೆ. ಗುಜರಾತಿನ ರಾಜ್​ಕೋಟ್​, ಸೂರತ್​ ಮತ್ತು ವಡೋದರಾದಲ್ಲಿ ನಾಳೆಯಿಂದ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೂತನ ನಿಯಮ ಜಾರಿಯಲ್ಲಿರಲಿದೆ ಎಂದು ಡಿಸಿಎಂ ನಿತಿನ್​ ಪಟೇಲ್​ ತಿಳಿಸಿದ್ದಾರೆ.
ಇದನ್ನೂ ಓದಿ:ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೆ, ಸೆಂಟ್ರಲ್​ ಫೋರ್ಸ್​ ಕರೆಸಿ ಪಾಠ ಕಲಿಸುತ್ತೇವೆ; ಟಿಎಂಸಿಗೆ ಬಿಜೆಪಿ ಎಚ್ಚರಿಕೆ
ಮಧ್ಯಪ್ರದೇಶದ ಇಂದೋರ್​, ಭೋಪಾಲ್​, ಗ್ವಾಲಿಯರ್​, ವಿಧಿಶಾ ಮತ್ತು ರಾಟ್ಲಮ್​ನಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಅಗತ್ಯ ಸೇವೆ ಮತ್ತು ಕಾರ್ಖಾನೆ ಕೆಲಸಗಾರರಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ.
ಅಹಮದಾಬಾದ್​ನಲ್ಲಿ ನ. 23ರಂದು ನಿಷೇಧ ಹೇರಿದ ಬೆನಲ್ಲೇ ಉಳಿದ ಕೆಲ ನಗರಗಳಲ್ಲಿಯೂ ಕರ್ಫ್ಯೂ ಹೇರಲಾಗಿದೆ. ಗುಜರಾತಿನಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಈ ನಿರ್ಧಾರವನ್ನು ಸಿಎಂ ವಿಜಯ್​ ರೂಪಾಣಿ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ:ಮೊದಲ ವಿವಾಹ ವಾರ್ಷಿಕೋತ್ಸವ ಜತೆಗೆ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಯ ಖುಷಿ ಕಿತ್ತುಕೊಂಡ ಘೋರ ವಿಧಿ!
ಅಹಮದಾಬಾದ್​ನಲ್ಲಿ ದಿನವೊಂದಕ್ಕೆ 200ಕ್ಕೂ ಹೆಚ್ಚು ಕೋವಿಡ್​ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಒಂದು ತಿಂಗಳ ಮುಂಚೆ 140ಕ್ಕೂ ಕಡಿಮೆ ಕೇಸ್​ಗಳು ಬರುತ್ತಿದ್ದವು. ಗುರುವಾರ 230 ಪ್ರಕರಣಗಳು ವರದಿಯಾಗಿವೆ. ಕರ್ಫ್ಯೂ ಹೊರತಾಗಿ ಸೋಮವಾರದಿಂದ ಶಾಲಾ-ಕಾಲೇಜುಗಳನ್ನು ತೆರೆಯಲು ಗುಜರಾತ್​ ಸರ್ಕಾರ ನಿರ್ಧಾರ ಮಾಡಿದೆ.(ಏಜೆನ್ಸೀಸ್​)
ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಐಸಿಸಿ ಹೊಸದಾಗಿ ನಿಗದಿಪಡಿಸಿರುವ ಕನಿಷ್ಠ ವಯಸ್ಸೆಷ್ಟು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
