ನವದೆಹಲಿ:ಡೆಡ್ಲಿ ಕರೊನಾ ವೈರಸ್​ ಭೀತಿಗೆ ಭಯಗೊಂಡಿರುವ ಸ್ಪೋರ್ಟ್ಸ್ ಕ್ಷೇತ್ರದ ದೈತ್ಯ ಕಂಪನಿ ನೈಕ್​ ಜಾಗತಿಕವಾಗಿರುವ ತನ್ನ ಮಳಿಗೆಗಳನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಸೋಂಕು ಮತ್ತಷ್ಟು ಹರಡದಂತೆ ತಡೆಯಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ನೈಕ್ ಕಂಪನಿ ಅಧಿಕೃತ ಹೇಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದೆ.
ನಮ್ಮ ತಂಡ ಹಾಗೂ ಗ್ರಾಹಕರ ಹಿತರಕ್ಷಣವೇ ನಮ್ಮ ಮೊದಲ ಆದ್ಯತೆಯಾಗಿದೆ. ಹೀಗಾಗಿ ಯುನೈಟೆಡ್​ ನೇಷನ್​ ಸೇರಿದಂತೆ ವಿಶ್ವದೆಲ್ಲೆಡೆ ಇರುವ ನಮ್ಮ ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದ್ದೇವೆ. ಇದಲ್ಲದೆ, ಮನೆಯಿಂದಲೇ ಕೆಲಸ ಮಾಡುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮತ್ತು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ನಮ್ಮ ತಂಡದ ರಕ್ಷಣೆಯ ದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ ಎದು ಕಂಪನಿ ಹೇಳಿದೆ.
ವರದಿಯ ಪ್ರಕಾರ ಮಾರ್ಚ್​ 27ರವರೆಗೆ ನೈಕ್​ ಕಂಪನಿ ಮುಚ್ಚಲಿದೆ. ಇದಕ್ಕೂ ಮುನ್ನ ಟೆಕ್​ ದೈತ್ಯ ಆ್ಯಪಲ್​ ಕಂಪನಿ ಗ್ರೇಟರ್​ ಚೀನಾ ಹೊರತುಪಡಿಸಿ ವಿಶ್ವಾದ್ಯಂತ ಇರುವ ಸ್ಟೋರ್​ಗಳನ್ನು ಮುಚ್ಚುವುದಾಗಿ ತಿಳಿಸಿದೆ.(ಏಜೆನ್ಸೀಸ್​)
ಕರೊನಾದಿಂದ ವೃದ್ಧ ಮೃತಪಟ್ಟ ಪ್ರಕರಣ: ಆತನ ಟ್ರಾವೆಲ್ ಹಿಸ್ಟರಿಯಲ್ಲಿದೆ ಬೆಚ್ಚಿ ಬೀಳುವ ಅಂಶ

ಒಂದೇ ದಿನದಲ್ಲಿ ಇಟಲಿಯಲ್ಲಿ 368 ಮಂದಿಯನ್ನು ಬಲಿ ಪಡೆದುಕೊಂಡ ಡೆಡ್ಲಿ ಕರೊನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 18 =
Remember me
