ತಮಿಳುನಾಡು:ಲೋಕಸಭೆ ಚುನಾವಣೆ 2024ರ ದಿನಾಂಕ ಪ್ರಕಟವಾಗುತ್ತಿದ್ದಂತೆ ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಮೂಲಕ ದೇಶವ್ಯಾಪಿ ಕಟ್ಟೆಚ್ಚರ ವಹಿಸಿದೆ. ರಾಜ್ಯಗಳ ಮೂಲೆ ಮೂಲೆಯಲ್ಲಿ ಬಿಗಿ ಭದ್ರತೆ, ತಪಾಸಣೆ ನಡೆಯುತ್ತಿದೆ. ಹೀಗಿರುವಾಗ, ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಪ್ರವಾಸಕ್ಕೆಂದು ಬಂದಿದ್ದ ಪಂಜಾಬ್ ಮೂಲದ ಕುಟುಂಬವೊಂದರಿಂದ ಚುನಾವಣಾಧಿಕಾರಿಗಳು 69,400 ರೂ. ನಗದು ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ:ಕರ್ನಾಟಕ: ಎಸ್ಎಸ್ಎಲ್​ಸಿ ಪರೀಕ್ಷೆ ಮೊದಲ ದಿನವೇ ಮೂವರು ವಿದ್ಯಾರ್ಥಿಗಳು ಸಾವು
ಚುನಾವಣಾಧಿಕಾರಿಗಳು ಮಾದರಿ ನೀತಿ ಸಂಹಿತೆ ಅನ್ವಯ ವಾಹನ ತಪಾಸಣೆ ವೇಳೆ ಕುಟುಂಬದವರಿಂದ ನಗದು ವಶಪಡಿಸಿಕೊಂಡಿದ್ದಾರೆ. ವೀಡಿಯೊದಲ್ಲಿ ಮಹಿಳೆ ಮತ್ತು ಆಕೆಯ ಪತಿ ಇಬ್ಬರೂ ತಮಗೆ ಮಾದರಿ ನೀತಿ ಸಂಹಿತೆ ನಿಯಮಗಳ ಬಗ್ಗೆ ಅರಿವಿರಲಿಲ್ಲ ಎಂದು ಅಧಿಕಾರಿಗಳಿಗೆ ವಿವರಿಸಲು ಪ್ರಯತ್ನಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ಕಾರಣದಿಂದ ಈ ನಿಯಮ ಜಾರಿಯಲ್ಲಿದ್ದರಿಂದ ಅಧಿಕಾರಿಗಳು ಹಣ ಹಿಂತಿರುಗಿಸಲು ನಿರಾಕರಿಸಿದರು.
ದಂಪತಿಗಳ ಅಳಲು ಆಲಿಸಿದ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ನಿಯಮಗಳನ್ನು ವಿವರಿಸಿದ್ದಾರೆ. ತದನಂತರ ನೀಲಗಿರಿ ಸಹಾಯಕ ಚುನಾವಣಾಧಿಕಾರಿ ಸೋಮವಾರ ಪ್ರವಾಸಿಗರ ದಾಖಲೆಗಳನ್ನು ಪರಿಶೀಲಿಸಿ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದ ಒಟ್ಟು 69,400 ರೂ. ನಗದನ್ನು ಪ್ರವಾಸಿಗರಿಗೆ ಹಿಂದಿರುಗಿಸಿದ್ದಾರೆ.
ಇದನ್ನೂ ಓದಿ:ಚೀನಾ ಮತ್ತೆ ಅರುಣಾಚಲ ಕ್ಯಾತೆ: ಭಾರತ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದ ವಿದೇಶಾಂಗ ವಕ್ತಾರ
ಚುನಾವಣಾ ಆಯೋಗದ ಪ್ರಕಾರ, ಯಾವುದೇ ವ್ಯಕ್ತಿ 50,000 ರೂ.ಗಿಂತ ಹೆಚ್ಚಿನ ನಗದು ಮತ್ತು 10,000 ರೂ.ಗಿಂತ ಹೆಚ್ಚಿನ ಮೌಲ್ಯದ ವಸ್ತುಗಳು ಮತ್ತು ಉಡುಗೊರೆಗಳನ್ನು ಸಾಗಿಸಿದರೆ ಅದನ್ನು ತಕ್ಷಣವೇ ವಶಪಡಿಸಿಕೊಳ್ಳಲಾಗುವುದು. ಚುನಾವಣಾ ಪ್ರಭಾವಕ್ಕಾಗಿ ನಗದು ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಈ ಕ್ರಮವನ್ನು ಜಾರಿಗೆ ತರಲಾಗಿದೆ. ವ್ಯಕ್ತಿಯು ಮಾನ್ಯವಾದ ದಾಖಲೆಗಳನ್ನು ಹೊಂದಿದ್ದಲ್ಲಿ ಮತ್ತು ವಶಪಡಿಸಿಕೊಂಡ ವಸ್ತುಗಳು ಚುನಾವಣೆಗೆ ಸಂಪರ್ಕ ಹೊಂದಿಲ್ಲ ಎಂಬುದು ಸಾಬೀತಾದರೆ ಮಾತ್ರ ಹಣ ಅಥವಾ ವಸ್ತುವನ್ನು ಹಿಂತಿರುಗಿಸಲಾಗುತ್ತದೆ.
ವಶಪಡಿಸಿಕೊಂಡ ಮೊತ್ತವು 10 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ಹೆಚ್ಚಿನ ತನಿಖೆಗಾಗಿ ನಗದನ್ನು ಆದಾಯ ತೆರಿಗೆ ಇಲಾಖೆಗೆ ಕಳುಹಿಸಲಾಗುತ್ತದೆ. ಈ ಮಧ್ಯೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ದಂಪತಿಗಳ ಪರ ಬ್ಯಾಟ್ ಬೀಸಿದ್ದಾರೆ. ಕಡೆಗೆ ಅಧಿಕಾರಿಗಳು ಒಂದಷ್ಟು ವಿಚಾರಣೆ ಬಳಿಕ ಪ್ರವಾಸಿಗರಿಗೆ ಹಣ ಹಿಂತಿರುಗಿಸಿದ್ದಾರೆ,(ಏಜೆನ್ಸೀಸ್).
ಮನೆಯಲ್ಲಿ ಇರೋದನ್ನೆಲ್ಲಾ ಮಾರಿದೆ! ಜೀವನವೇ ಅರ್ಧ ಕತ್ತರಿಸಿ ಹೋಗಿತ್ತು; ನಟ ರಣದೀಪ್ ಭಾವುಕ

ನನಗೆ ಸಾಕಾಗಿದೆ, 1 ಗಂಟೆಗೆ 5 ಲಕ್ಷ ರೂ. ಕೊಡಿ, ಬನ್ನಿ… ವೈರಲ್ ಆಗ್ತಿದೆ ಈ ನಿರ್ದೇಶಕನ ಹೇಳಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + three =
Remember me
