ಮಾಲೆ:ಮಾಲ್ಡೀವ್ಸ್​ ರಾಜಧಾನಿ ಮಾಲೆಯಲ್ಲಿರುವ ವಿದೇಶಿ ಕಾರ್ಮಿಕರ ಇಕ್ಕಟ್ಟಾದ ವಸತಿಗೃಹಗಳಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 9 ಮಂದಿ ಭಾರತೀಯರು ಸೇರಿದಂತೆ 10 ಮಂದಿ ದುರಂತ ಸಾವಿಗೀಡಾಗಿರುವುದಾಗಿ ಅಗ್ನಿಶಾಮಕದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂದಹಾಗೆ ಮಾಲ್ಡೀವ್ಸ್​ ಪ್ರವಾಸಿಗರ ಸ್ವರ್ಗವಾಗಿದ್ದು, ಅತಿ ಹೆಚ್ಚು ಸೆಲೆಬ್ರಿಟಿಗಳು ಭೇಟಿ ನೀಡುವ ತಾಣ ಇದಾಗಿದೆ. ದ್ವೀಪಸಮೂಹದ ಮಾಲ್ಡೀವ್ಸ್​ ರಾಜಧಾನಿ ಮಾಲೆ, ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ.
ಅಗ್ನಿ ಅವಘಡದಿಂದ ಸಂಪೂರ್ಣ ನಾಶವಾಗಿರುವ ಕಟ್ಟಡದ ಮೇಲಿನ ಮಹಡಿಯಿಂದ 10 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಕಟ್ಟಡದ ನೆಲಮಹಡಿಯಲ್ಲಿರುವ ವಾಹನ ರಿಪೇರಿ ಗ್ಯಾರೇಜ್​ನಲ್ಲಿ ಬೆಂಕಿ ಹೊತ್ತಿಕೊಂಡಿತು ಎಂದು ಹೇಳಲಾಗಿದೆ.
ನಾವು 10 ಶವಗಳನ್ನು ಪತ್ತೆಹಚ್ಚಿದ್ದೇವೆ ಎಂದು ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಬೆಂಕಿಯನ್ನು ನಂದಿಸಲು ಸುಮಾರು ನಾಲ್ಕು ಗಂಟೆಗಳ ಸಮಯ ತೆಗೆದುಕೊಂಡಿತು ಎಂದಿದ್ದಾರೆ.
ಮೃತರಲ್ಲಿ ಒಂಬತ್ತು ಭಾರತೀಯರು ಮತ್ತು ಬಾಂಗ್ಲಾದೇಶ ಪ್ರಜೆಯೂ ಸೇರಿದ್ದಾರೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ಬೆನ್ನಲ್ಲೇ ಮಾಲ್ಡೀವಿಯನ್ ರಾಜಕೀಯ ಪಕ್ಷಗಳು ವಿದೇಶಿ ಕಾರ್ಮಿಕರ ಪರಿಸ್ಥಿತಿಗಳನ್ನು ನೋಡಿ ಸರ್ಕಾರವನ್ನು ಟೀಕಿಸಿವೆ.(ಏಜೆನ್ಸೀಸ್​)
ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ನೀವು ಪ್ರತಿನಿತ್ಯ ಸರಿಯಾದ ಕ್ರಮದಲ್ಲಿ ನೀರು ಕುಡಿಯುತ್ತಿದ್ದೀರಾ? ತಿಳಿಯಬೇಕಿದ್ದರೆ ಈ ಮಾಹಿತಿ ಓದಿ…

ತಲೆಯಿಂದ ಡಿಚ್ಚಿ ಹೊಡೆದು ಚಲಿಸುತ್ತಿದ್ದ ಬಸ್ಸಿನ​ ಗಾಜು ಪುಡಿ ಪುಡಿ ಮಾಡಿದ ಯುವಕ: ಭಯಾನಕ ವಿಡಿಯೋ ವೈರಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
