ಅಮೃತಸರ್​:ಒಂಬತ್ತು ವರ್ಷದ ಬಾಲಕಿಯೊಬ್ಬಳ ಹೃದಯವನ್ನು ಬಗೆದು ತೆಗೆದಿರುವ ಪಂಜಾಬ್​ನ ಅಮೃತಸರ ಬಳಿಯ ಮುಧಾಲ್ ಗ್ರಾಮದಲ್ಲಿ ನಡೆದಿದೆ.ಇದನ್ನೂ ಓದಿ:ಭಾರತ್‌ NCAP ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ: ಈ ವಿಷಯಗಳ ಬಗ್ಗೆ ನಿಮಗೆ ಗೊತ್ತಿರಲಿ…ಮೃತ ಬಾಲಕಿಯನ್ನು ಸುಖಮನ್ದೀಪ್ ಕೌರ್(9) ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಹಿಳೆ ಜಸ್ಬೀರ್ ಕೌರ್, ಆಕೆಯ ಪತಿ ದಲ್ಬೀರ್ ಸಿಂಗ್, ಮಗ ಮತ್ತು ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆ ಹಿನ್ನೆಲೆ:ಜುಲೈ 11ರಂದು ಸುಖಮನ್ದೀಪ್ ಕೌರ್ ಎನ್ನುವ ಬಾಲಕಿ ನಾಪತ್ತೆಯಾದ ನಂತರ ಆಕೆಯ ಕುಟುಂಬವು ರಾತ್ರಿ ದೂರು ದಾಖಲಿಸಿದೆ. ಹುಡುಕಾಟದ ಸಮಯದಲ್ಲಿ, ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ನೆರೆಹೊರೆಯಿಂದ ಹೊರಗೆ ಹೋಗುತ್ತಿರುವ ಹುಡುಗಿ ಏಕಾಏಕಿ ನಾಪತ್ತೆಯಾಗಿದ್ದಳು.
ಪ್ರಕರಣವನ್ನು ಗಂಭೀರವಾಗಿ ತೆಗೆದು ಕೊಂಡ ಪೋಲಿಸರು ಬಾಲಕಿಯನ್ನು ಜಸ್ಬೀರ್ ನಿವಾಸಕ್ಕೆ ಕರೆದೊಯ್ಯುವುದನ್ನು ಮಾತ್ರ ಕಂಡು ಹಿಡಿದಿದ್ದರು. ಸುಳಿವು ಆಧರಿಸಿ ಅಕ್ಕಪಕ್ಕದ ಮನೆಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಭಯಾನಕ ಮಾಹಿತಿ ಹೊರಬಿದ್ದಿದೆ.ಜಸ್ಬೀರ್ ತನ್ನ ವಿಚಾರಣೆಯ ವೇಳೆ ಪೊಲೀಸರಿಗೆ ತಾನು ತಾಂತ್ರಿಕನಿಂದ ಹಲವು ವರ್ಷಗಳಿಂದ ಮಾಟಮಂತ್ರವನ್ನು ಕಲಿತಿದ್ದು, ತನ್ನ ಕುಟುಂಬದ ವ್ಯವಹಾರವನ್ನು ವಿಸ್ತರಿಸುವ ನೆಪದಲ್ಲಿ ಹುಡುಗಿಯನ್ನು ಕೊಲ್ಲಲು ಆತನಿಂದ ಪ್ರೇರಣೆ ಪಡೆದಿರುವುದಾಗಿ ತಿಳಿಸಿದ್ದಾಳೆ.ಇದನ್ನೂ ಓದಿ:ಮೋದಿ ಉಪನಾಮ ಪ್ರಕರಣ: ರಾಹುಲ್ ಗಾಂಧಿ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ಗ್ರೀನ್​ ಸಿಗ್ನಲ್​​ಬಾಲಕಿ ಕಾಣೆಯಾದ ದಿನ ಸಂಜೆ ಬಾಲಿಕಿಯನ್ನು ತನ್ನ ಮನೆಗೆ ಕರೆಸಿಕೊಂಡು ಚಾಕುವಿನಿಂದ ಆಕೆಯ ಹೃದಯಕ್ಕೆ ಇರಿದು ಹೃದಯ ಬಗೆದಿದ್ದರಿಂದ ಆಕೆ ಸಂಕಟದಿಂದ ಮೃತಪಟ್ಟಿದ್ದಾಳೆ ಎಂದು ಆರೋಪಿಯು ತಿಳಿಸಿದ್ದಾಳೆ. ಬಳಿಕ ಆಕೆಯ ಶವವನ್ನು ಗೋಣಿಚೀಲದಲ್ಲಿ ತುಂಬಿ ರಾತ್ರಿ ವೇಳೆ ಸಮೀಪದಲ್ಲಿ ಎಸೆದಿದ್ದು, ಅನುಮಾನ ಬರದಂತೆ ಬಾಲಕಿಯನ್ನು ಹುಡುಕಲು ಸಂತ್ರಸ್ತೆಯ ಮನೆಯವರ ಜೊತೆ ಸೇರಿಕೊಂಡು ಹುಡುಕಾಟವನ್ನು ನಡೆಸಿದ್ದಾಳೆ.ಆದರೆ ಯಾವಾಗ ಪೊಲೀಸರ ಸಿಸಿಟಿವಿ ಪರಿಶೀಲಿಸಿದರೋ ಅವಾಗ ಆಕೆಯ ನಿಜಮಖ ಬಯಲಿಗೆ ಬಂದಿದೆ. ಮಹಿಳೆಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇದೀಗ ಮೂಲ ತಾಂತ್ರಿಕನ ಬೇಟೆಗೆ ಮುಂದಾಗಿದ್ದು, ಇದುವರೆಗೆ ಆತನ ಗುರುತು ಅಥವಾ ಆತ ಇರುವ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 1 =
Remember me
