ನವದೆಹಲಿ:ವಿಶ್ವದ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಎಲಾನ್​​ ಮಸ್ಕ್, ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್​​ ಮತ್ತು ಪೋಸ್ಟ್​​ಗಳಿಗೆ ನೀಡುವ ಪ್ರತಿಕ್ರಿಯೆ ಮೂಲಕ ಆಗಾಗ್ಗೆ ಜಾಲತಾಣದಲ್ಲಿ ಮುನ್ನೆಲೆಯಲ್ಲಿರುತ್ತಾರೆ. ಪ್ರಸ್ತುತ ಎಕ್ಸ್​​ ಬಳಕೆದಾರರೊಬ್ಬರು ಹಂಚಿಕೊಂಡಿರುವ ಫೋಟೋಗೆ ಕಾಮೆಂಟ್​​ ಮಾಡುವ ಮೂಲಕ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಇದನ್ನು ಓದಿ:ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಒಡೆತನದ ಬೇಕರಿ ನೆಲಸಮ; ಸಿಎಂ ಯೋಗಿ ಸರ್ಕಾರದಿಂದ ಬುಲ್ಡೋಜರ್​ ಕ್ರಮ
ಡಾಡ್ಜ್ ಡಿಸೈನರ್ ಎಂಬ ಎಕ್ಸ್​​​ ಬಳಕೆದಾರರೊಬ್ಬರು ಒಂಬತ್ತು ವರ್ಷಗಳ ಹಳೆಯದಾದ ಪ್ರಧಾನಿ ಮೋದಿ ಅವರ ಫೋಟೊವನ್ನು ಹಂಚಿಕೊಂಡಿದ್ದಾರೆ. ಎಲಾನ್​ ಮಸ್ಕ್​​ ಮತ್ತು ಅವರ ಮಕ್ಕಳು ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಎಂದು ಶೀರ್ಷಿಕೆ ಬರೆದಿದ್ದಾರೆ. ಫೋಟೋದಲ್ಲಿ ಎಲಾನ್​​ ಮಸ್ಕ್​ ಅವರ ಒಬ್ಬ ಮಗ ಪ್ರಧಾನಿ ಮೋದಿ ಅವರೊಂದಿಗೆ ಹ್ಯಾಂಡ್​ಶೇಕ್​ ಮಾಡುತ್ತಿದ್ದರೆ, ಮತ್ತೊಬ್ಬ ಮಗ ಪ್ರಧಾನಿ ಮೋದಿ ಅವರನ್ನು ನೋಡುತ್ತಾ ನಗುತ್ತಿದ್ದಾನೆ. ಈ ಫೋಟೋದಲ್ಲಿ ಎಲಾನ್​ ಮಸ್ಕ್​​ ಕೂಡ ಇದ್ದು ಅವರು ನಗುತ್ತಿರುವುದನ್ನು ಕಾಣಬಹುದು. ಸದ್ಯ ಈ ಫೋಟೋ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
Elon Musk & his kids with the Prime Minister of India, Narendra Modi.pic.twitter.com/1jH1DZXmXi
ಈ ಫೋಟೋಗೆ ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ. ಅಲ್ಲದೆ ಎಕ್ಸ್​​​ (ಈ ಹಿಂದೆ ಟ್ವಿಟರ್​) ಮಾಲೀಕ ಎಲಾನ್​ ಮಸ್ಕ್​ ಕೂಡ ಪ್ರತಿಕ್ರಿಯಿಸಿದ್ದಾರೆ. ಈ ಫೋಟೋ ನೋಡಿ ಎಲಾನ್​ ಮಸ್ಕ್​​ ಪ್ರೀತಿಯಿಂದ ಡಾಮಿಯನ್ ಮತ್ತು ಕಾಕೋಟ್ ಎಂದು ತಮ್ಮ​​ ಮಕ್ಕಳ ಹೆಸರನ್ನು ಬರೆದಿದ್ದಾರೆ. ಎಲಾನ್​​ ಮಸ್ಕ್​​ ಅವರ ಮೊದಲ ಪತ್ನಿ ಜಸ್ಟಿನ್ ಮಸ್ಕ್ ಅವರ ಮಕ್ಕಳು ಇವರು. ಸದ್ಯ ಈ ಫೋಟೋವನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಎಲಾನ್​ ಮಸ್ಕ್​​ ಅವರ ಪ್ರತಿಕ್ರಿಯೆ ನಂತರ ಸುಮಾರು 2,700 ಲೈಕ್‌ಗಳನ್ನು ಪಡೆದುಕೊಂಡಿದೆ. (ಏಜೆನ್ಸೀಸ್​​)
ನಾರ್ಕೊ-ಟೆರರ್​​​ ಲಿಂಕ್​​; ಪಾಕಿಸ್ತಾನದ ಐಎಸ್​ಐ ಜತೆ ನಂಟು ಹೊಂದಿದ್ದ ಆರು ಅಧಿಕಾರಿಗಳು ವಜಾ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − 4 =
Remember me
