ನವದೆಹಲಿ:ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಹಗರಣದ ಆರೋಪಿ, ಆರ್ಥಿಕ ಅಪರಾಧಿ, ವಜ್ರದ ವ್ಯಾಪಾರಿ ನೀರವ್​ ಮೋದಿ ಹಾಗೂ ಅವರ ಚಿಕ್ಕಪ್ಪ ಮೆಹುಲ್​ ಚೋಕ್ಸಿ ಅವರು ಕದ್ದುಮುಚ್ಚಿ ದುಬೈಗೆ ಸಾಗಿಸಿದ್ದ ​2,340 ಕೆಜಿ ತೂಕದ, 1350 ಕೋಟಿ ರೂ.ಬೆಲೆಬಾಳುವ ಪಾಲಿಶ್​ ಡೈಮಂಡ್ಸ್​, ಮುತ್ತುಗಳು, ಬೆಳ್ಳಿಯ ಆಭರಣಗಳು ಸೇರಿ ಹಲವು ಜ್ಯುವೆಲರಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾರತಕ್ಕೆ ವಾಪಸ್ ತಂದಿದ್ದಾರೆ.ಇದನ್ನೂ ಓದಿ:ಮಿತಿಮೀರುತ್ತಿರುವ ಕರೊನಾ ಆತಂಕದ ನಡುವೆ ಆದಿತ್ಯ ಠಾಕ್ರೆ ಕೊಟ್ರು ಗುಡ್​ನ್ಯೂಸ್​; ಇನ್ನು ಭಯ ಪಡುವ ಅಗತ್ಯವಿಲ್ಲ…
ಇ.ಡಿ. ಬುಧವಾರ ಹೇಳಿಕೆ ಬಿಡುಗಡೆ ಮಾಡಿದೆ. ನೀರವ್​ ಮೋದಿ ಮತ್ತು ಮೆಹುಲ್​ ಚೋಕ್ಸಿ ಅಕ್ರಮವಾಗಿ ಸಾಗಿಸಿದ್ದ ಬೆಲೆಬಾಳುವ ಸರಕುಗಳನ್ನು ಹಾಂಗ್​ಕಾಂಗ್​ನಿಂದ ಮುಂಬೈಗೆ ತರಲಾಗಿದೆ. ಇದೆಲ್ಲವನ್ನೂ ತನಿಖೆ ನಡೆಯುತ್ತಿರುವಾಗಲೇ ದುಬೈಗೆ ಸಾಗಿಸಿದ್ದರು. ಅದನ್ನು ಹಾಂಗ್​ಕಾಂಗ್​ಗೆ ಆಮದು ಮಾಡಿಕೊಂಡು, ಅಲ್ಲಿಂದ ಮುಂಬೈಗೆ ತರಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. 2,340 ಕೆಜಿ ತೂಕದ ಬೆಲೆಬಾಳುವ ಸರಕುಗಳ 108 ಪ್ಯಾಕ್​​ಗಳನ್ನು ಹಾಂಗ್​ಕಾಂಗ್​ನ ಲಾಜಿಸ್ಟಿಕ್ಸ್​ ಕಂಪನಿಯ ಗೋಡೌನ್​​ನಲ್ಲಿ ಇಡಲಾಗಿತ್ತು ಎಂದು ಮಾಹಿತಿ ನೀಡಿದೆ.ಇದನ್ನೂ ಓದಿ:ಗುಡ್​​ನ್ಯೂಸ್..! ವನ್ಯಜೀವಿ ಪ್ರಿಯರಿಗೆ ಶೀಘ್ರವೇ ತೆರೆದುಕೊಳ್ಳಲಿವೆ ಹುಲಿ ಅಭಯಾರಣ್ಯಗಳು
ನೀರವ್​ ಮೋದಿ ಮತ್ತು ಮೆಹುಲ್​ ಚೋಕ್ಸಿ ಇಬ್ಬರೂ ವಂಚಕ ಉದ್ಯಮಿಗಳಾಗಿದ್ದು, ಅಕ್ರಮ ಹಣ ಸಾಗಣೆ ಪ್ರಕರಣದಡಿ ಇ.ಡಿ.ಯಿಂದ ತನಿಖೆಗೆ ಒಳಪಟ್ಟಿದ್ದಾರೆ. (ಏಜೆನ್ಸೀಸ್​)
ಪಾಕ್​​ನಲ್ಲಿ ಮಾಸ್ಕ್​ ಧರಿಸದೆ ಹೊರಗೆ ಬಂದರೆ ಶಾಕ್​ ಟ್ರೀಟ್​ಮೆಂಟ್​; ಸತ್ತೇ ಹೋದಷ್ಟು ನೋವು ಎಂದ ಶಿಕ್ಷೆಗೊಳಗಾದವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 4 =
Remember me
