ಮುಂಬೈ:ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ಸುಮಾರು -ಠಿ;14 ಸಾವಿರ ಕೋಟಿ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ಉದ್ಯಮಿ ನೀರವ್ ಮೋದಿಗೆ ಸೇರಿದ ಬೆಲೆಬಾಳುವ ವಸ್ತುಗಳ ಹರಾಜು ಪ್ರಕ್ರಿಯೆ ಮಾರ್ಚ್ 5ಕ್ಕೆ ನಡೆಯಲಿದೆ.
ಈ ಮೊದಲು ಹರಾಜು ಗುರುವಾರ ನಡೆಯಲಿದೆ ಎಂದು ಹೇಳಲಾಗಿತ್ತು. ಸಫರಾನ್ ಆರ್ಟ್ ಲಿಮಿಟೆಡ್ ಕಂಪನಿ ಮೂಲಕ ನೀರವ್​ರ ಐಶಾರಾಮಿ ರೋಲ್ಸ್ ರಾಯ್್ಸ ಕಾರು, ದುಬಾರಿ ಕೈಗಡಿಯಾರಗಳು, ಚರ್ಮದ ಬ್ಯಾಗ್​ಗಳು ಸೇರಿ ಒಟ್ಟು 112 ಪರಿಕರಗಳನ್ನು ಹರಾಜು ಮಾಡಲಾಗುತ್ತಿದೆ. ಆನ್​ಲೈನ್ ಮೂಲಕ ಹರಾಜು ನಿಗದಿಯಂತೆ
ಮಾ. 3 ಮತ್ತು 4 ರಂದು ನಡೆಯಲಿದೆ. ಆನ್​ಲೈನ್​ನಲ್ಲಿ ಸುಮಾರು 72 ವಸ್ತುಗಳು ಲಭ್ಯವಿವೆ. ಖ್ಯಾತ ಕಲಾವಿದರು ಬಿಡಿಸಿದ 15ಕ್ಕೂ ಹೆಚ್ಚು ಕಲಾಕೃತಿಗಳೂ ಇದ್ದು, ಪ್ರತಿ ವಸ್ತುಗಳಿಗೆ ಜಾರಿ ನಿರ್ದೇಶನಾಲಯದ ಜತೆ ಸಮಾಲೋಚಿಸಿ ಬೆಲೆ ನಿಗದಿ ಮಾಡಲಾಗಿದೆ ಎಂದು ಸಫರಾನ್ ಕಂಪನಿ ಸಿಇಒ ದಿನೇಶ್ ವಾಜಿರಾನಿ ಹೇಳಿದ್ದಾರೆ. ನೀರವ್ ಮೋದಿಗೆ ಸಂಬಂಧಪಟ್ಟ ವರ್ಣಚಿತ್ರಗಳನ್ನು ಕಳೆದ ಮಾರ್ಚ್​ನಲ್ಲಿ ಆನ್​ಲೈನ್ ಹರಾಜು ಮಾಡಿದ್ದ ಸಫರಾನ್ ಆರ್ಟ್ ಕಂಪನಿ ಆದಾಯ ತೆರಿಗೆ ಇಲಾಖೆಗೆ -ಠಿ; 54.84 ಕೋಟಿ ಸಂಗ್ರಹಿಸಿಕೊಟ್ಟಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − one =
Remember me
