ನವದೆಹಲಿ: ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವ ದಿನ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಕೊನೆಯ ಆಸೆ ತಿಳಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಗಲ್ಲಿಗೇರಿಸುವ ಮುನ್ನ ಕುಟುಂಬದ ಯಾವ ಸದಸ್ಯರನ್ನು ಭೇಟಿಯಾಗಲು ಇಚ್ಛಿಸುತ್ತಿರಿ ಹಾಗೂ ನಿಮ್ಮ ಆಸ್ತಿಯನ್ನು ವಿಲ್ ಮಾಡಲು ಬಯಸುತ್ತೀರಾ ಎಂದು ತಿಹಾರ್ ಜೈಲು ಅಧಿಕಾರಿಗಳು ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ಕೇಳಿದ್ದಾರೆ. ಆದರೆ ನಾಲ್ವರು ಅಪರಾಧಿಗಳು ಅಧಿಕಾರಿಗಳ ಯಾವ ಪ್ರಶ್ನೆಗಳಿಗೂ ಉತ್ತರಿಸದೆ ಮೌನ ವಹಿಸಿದ್ದಾರೆ ಎನ್ನಲಾಗಿದೆ.
ಗಲ್ಲಿಗೇರಿಸುವ ಮುನ್ನ ಪ್ರತಿ ಅಪರಾಧಿಗೂ ಅವರ ಕುಟುಂಬದ ಅಥವಾ ಸ್ನೇಹಿತರ ಒಬ್ಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತದೆ. ಆಸ್ತಿಯನ್ನು ಅವರು ಬಯಸಿದವರಿಗೆ ವಿಲ್ ಮಾಡಲು ಅವಕಾಶ ನೀಡಲಾಗುತ್ತದೆ. ಫೆ.1ರಂದು ನಿರ್ಭಯಾ ಅಪರಾಧಿಗಳನ್ನು ನೇಣಿಗೇರಿಸಲು 2ನೇ ಡೆತ್ ವಾರಂಟ್ ಹೊರಡಿಸಿ ರುವುದರಿಂದ ತಿಹಾರ್ ಜೈಲು ಆಡಳಿತ ಅಪರಾಧಿಗಳ ಕೊನೆ ಕೋರಿಕೆಗಳನ್ನು ಪ್ರಶ್ನಿಸಿದೆ. ಆದರೆ ಮುಕೇಶ್ ಸಿಂಗ್, ವಿನಯ್ ಶರ್ವ, ಅಕ್ಷಯ್ ಸಿಂಗ್ ಮತ್ತು ಪವನ್ ಗುಪ್ತಾ ಕೊನೆ ಕೋರಿಕೆಗಳ ಬಗ್ಗೆ ಏನೂ ಬಾಯ್ಬಿಡುತ್ತಿಲ್ಲ. ಇವರು ಗಲ್ಲು ಶಿಕ್ಷೆ ಜಾರಿಯನ್ನು ಮತ್ತಷ್ಟು ಮುಂದೂಡುವ ಯೋಜನೆಯಲ್ಲಿದ್ದು, ಅದಕ್ಕಾಗಿಯೇ ಕೊನೆ ಕೋರಿಕೆಗಳನ್ನು ಹೇಳುತ್ತಿಲ್ಲ ಎಂದೂ ಹೇಳಲಾಗುತ್ತಿದೆ.
ದೆಹಲಿಯ ವಿಚಾರಣಾ ನ್ಯಾಯಾಲಯ ಈ ಹಿಂದೆ ನಾಲ್ವರು ಅಪರಾಧಿಗಳನ್ನು ಜ. 22ರಂದು ಗಲ್ಲಿಗೇರಿಸಿ ಎಂದು ಡೆತ್ ವಾರಂಟ್ ಹೊರಡಿಸಿತ್ತು. ಆದರೆ ಮುಕೇಶ್ ಸಿಂಗ್ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರಿಂದಾಗಿ ಈ ದಿನಾಂಕ ಮುಂದೂಡಲಾಯಿತು. ಬಳಿಕ ರಾಷ್ಟ್ರಪತಿಗಳು ಅರ್ಜಿ ತಿರಸ್ಕರಿಸಿದ ನಂತರ ಫೆ.1ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ಎರಡನೇ ಡೆತ್ ವಾರಂಟ್ ಹೊರಡಿಸಲಾಗಿದೆ. ಆದರೆ ಇನ್ನೂ ಮೂವರು ಅಪರಾಧಿಗಳ ಬಳಿ ಕ್ಷಮಾದಾನ ಅರ್ಜಿ ಸಲ್ಲಿಸಲು ಹಾಗೂ ಇಬ್ಬರ ಬಳಿ ಕ್ಯುರೇಟಿವ್ ಅರ್ಜಿ ಸಲ್ಲಿಸುವ ಅವಕಾಶಗಳಿರುವುದರಿಂದ ಇವರೆಲ್ಲ ಮರಣದಂಡನೆ ಜಾರಿಯನ್ನು ವಿಳಂಬಗೊಳಿಸಲು ಪ್ರಯತ್ನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಂತಕರ ಭದ್ರತೆಗೆ ನಿತ್ಯ 50 ಸಾವಿರ ರೂ. ವೆಚ್ಚ!
ನಿರ್ಭಯಾ ಅತ್ಯಾಚಾರ ಅಪರಾಧಿಗಳ ಗಲ್ಲುಶಿಕ್ಷ್ಷೆಗೆ ಡೆತ್ ವಾರಂಟ್ ಹೊರಡಿಸಿದಾಗಿನಿಂದ ಅವರ ರಕ್ಷಣೆಗೆ ಪ್ರತಿದಿನ ಸುಮಾರು 50 ಸಾವಿರ ರೂ. ವೆಚ್ಚವಾಗುತ್ತಿದೆ. ಸದ್ಯ ನಾಲ್ವರು ಅಪರಾಧಿಗಳನ್ನು ತಿಹಾರ್​ನ 3ನೇ ನಂಬರ್ ಜೈಲಿನಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಇಡಲಾಗಿದೆ. ಪ್ರತಿ ಸೆಲ್​ಗಳಿಗೂ ಇಬ್ಬರು ಭದ್ರತಾ ಸಿಬ್ಬಂದಿಪಹರೆ ಕಾಯುತ್ತಿದ್ದು, ಎರಡು ತಾಸುಗಳಿಗೊಮ್ಮೆ ಇವರನ್ನು ಬದಲಾಯಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
