ನವದೆಹಲಿ:ನಿರ್ಭಯಾ ಅತ್ಯಾಚಾರ ಅಪರಾಧಿಗಳ ಗಲ್ಲು ಶಿಕ್ಷೆ ಮತ್ತೊಮ್ಮೆ ಮುಂದಕ್ಕೆ ಹೋಗಿದೆ. ಈ ಹಿಂದೆ ದೆಹಲಿ ಕೋರ್ಟ್​ ನೀಡಿದ್ದ ಡೆತ್​ ವಾರೆಂಟ್​ ಅನ್ವಯ ಮಾರ್ಚ್​ 3(ನಾಳೆ)ರಂದು ಮುಂಜಾನೆ 6ಗಂಟೆಗೆ ನಾಲ್ವರು ಅಪರಾಧಿಗಳು ಗಲ್ಲಿಗೇರಬೇಕಿತ್ತು. ಆದರೆ ಮತ್ತೊಮ್ಮೆ ದೆಹಲಿ ಪಟಿಯಾಲಾ ನ್ಯಾಯಾಲಯ ದಿನಾಂಕವನ್ನು ಮುಂದೂಡಿದೆ.
ಗಲ್ಲಿಗೇರುವ ದಿನ ಹತ್ತಿರ ಬರುತ್ತಿದ್ದಂತೆ ಅಪರಾಧಿ ಪವನ್​ ಕುಮಾರ್​ ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಿದ್ದ. ಹಾಗೇ ತಾನು ದಯಾ ಅರ್ಜಿ ಸಲ್ಲಿಸಿದ್ದು, ಅದು ಇತ್ಯರ್ಥ ಆಗುವವರೆಗೆ ಮರಣದಂಡನೆಗೆ ತಡೆ ನೀಡಬೇಕು ಎಂದು ದೆಹಲಿ ಪಟಿಯಾಲಾ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಆ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಮರಣದಂಡನೆಯನ್ನು ಮುಂದೂಡಿ ಇಂದು ಆದೇಶ ನೀಡಿದ್ದಾರೆ.
ದೆಹಲಿ ಪಟಿಯಾಲಾ ಹೌಸ್​ ಕೋರ್ಟ್​ನ ಅಡಿಷನಲ್​ ಸೆಷನ್ಸ್​ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ಪವನ್​ ಕುಮಾರ್​ ಅರ್ಜಿ ವಿಚಾರಣೆಯನ್ನು ಮುಂದೂಡುವ ಜತೆಗೆ, ಗಲ್ಲಿಗೇರಿಸುವ ದಿನವನ್ನೂ ಮುಂದೂಡಿದ್ದಾರೆ.
ಇದನ್ನೂ ಓದಿ:ಗಲ್ಲುಶಿಕ್ಷೆ ತಡೆಗೆ ನೋ ಎಂದ ಹೈಕೋರ್ಟ್​: ನಿರ್ಭಯಾ ಅಪರಾಧಿಗಳಿಗೆ ನಾಳೆಯೇ ನೇಣು
ಪವನ್​ ಕುಮಾರ್​ ಮೊದಲು ಸುಪ್ರಿಂಕೋರ್ಟ್​ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದ, ಅದು ತಿರಸ್ಕೃತವಾಗಿತ್ತು. ರಾಷ್ಟ್ರಪತಿಗೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯೂ ತಿರಸ್ಕೃತಗೊಂಡಿತ್ತು. ಮಾರ್ಚ್​ 3ರಂದು ಬೆಳಗ್ಗೆ ನಿಗದಿಯಾಗಿರುವ ಗಲ್ಲುಶಿಕ್ಷೆಗೆ ತಡೆ ನೀಡಬೇಕು ಎಂದು ಅಪರಾಧಿಗಳಾದ ಅಕ್ಷಯ್​ ಠಾಕೂರ್​, ಪವನ್​ ಗುಪ್ತಾ, ಮುಕೇಶ್​ ಸಿಂಗ್​ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ಬೆಳಗ್ಗೆಯಷ್ಟೇ ವಜಾಗೊಳಿಸಲಾಗಿತ್ತು. ಆದರೆ ಈಗ ಮತ್ತೆ ದೆಹಲಿ ಪಟಿಯಾಲಾ ಕೋರ್ಟ್​ ಗಲ್ಲುಶಿಕ್ಷೆಗೆ ತಡೆ ನೀಡಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 6 =
Remember me
