ನವದೆಹಲಿ:ನಿರ್ಭಯಾ ಪ್ರಕರಣದ ಅಪರಾಧಿ ಮುಕೇಶ್​ ಸಿಂಗ್​ಗೆ ತಿಹಾರ್​ ಜೈಲಿನಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಅಪರಾಧಿ ಪರ ವಕೀಲೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಲ್ಲದೆ ಮುಕೇಶ್​ನ ದಯಾ ಅರ್ಜಿ ತಿರಸ್ಕಾರ ಆಗುವುದಕ್ಕಿಂತ ಮುಂಚೆ ಆತನನ್ನು ಒಬ್ಬನನ್ನೇ ಒಂದು ಕೊಠಡಿಯಲ್ಲಿ ಇರಿಸಲಾಗಿತ್ತು. ಇದು ಜೈಲು ನಿಯಮಗಳಿಗೆ ವಿರುದ್ಧ ಎಂದು ಅಪರಾಧಿ ಪರ ವಕೀಲೆ ಅಂಜನಾ ಪ್ರಕಾಶ್​ ವಾದಿಸಿದರು.
ಇದಕ್ಕೆ ಪ್ರತ್ಯುತ್ತರವಾಗಿ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ, ಜೈಲಿನಲ್ಲಿನ ದುಃಖಗಳು ಕರುಣೆಗೆ ಕಾರಣವಾಗುವುದಿಲ್ಲ. ಅಲ್ಲದೆ ಮುಕೇಶ್​ನನ್ನು ಸೆಲ್​ನಲ್ಲಿ ಒಬ್ಬನನ್ನೇ ಇರಿಸಲಾಗಿಲ್ಲ ಎಂದರು.
ಮರಣದಂಡನೆಗೆ ಒಳಪಟ್ಟ ಅಪರಾಧಿಯ ಕೆಲವೊಮ್ಮೆ, ವೈದ್ಯಕೀಯ ತಪಾಸಣೆ ಅವಶ್ಯವಾಗಿರುತ್ತದೆ. ಒಂದು ವೇಳೆ ಶಿಕ್ಷೆ ವಿಧಿಸಿದ ಅಪರಾಧಿಯ ಆರೋಗ್ಯ ಹದಗೆಟ್ಟರೆ ಅಂಥವರಿಗೆ ಮರಣದಂಡನೆ ವಿಧಿಸಲಾಗುವುದಿಲ್ಲ. ಆದರೆ ಈ ಸಂದರ್ಭದಲ್ಲಿ, ಮುಕೇಶ್​ನ ವೈದ್ಯಕೀಯ ಸ್ಥಿತಿ ಉತ್ತಮವಾಗಿದೆ ಎಂದು ನ್ಯಾಯಾಲಯಕ್ಕೆ ಮೆಹ್ತಾ ತಿಳಿಸಿದರು.
ಪ್ರಕರಣಕ್ಕೆ ಸಂಬಂಧ ಪಟ್ಟ ಅಪರಾಧಿಗಳಿಗೆ ಶನಿವಾರ ಬೆಳಗ್ಗೆ 6ಕ್ಕೆ ಮರಣದಂಡನೆ ವಿಧಿಸಬೇಕಿದೆ. ಆದ್ದರಿಂದ ಮುಕೇಶ್​ ಸಲ್ಲಿಸಿರುವ ಅರ್ಜಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ಹೇಳಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 18 =
Remember me
