ನವದೆಹಲಿ:ನಿರ್ಭಯಾ ಗ್ಯಾಂಗ್​ರೇಪ್​ ಮತ್ತು ಕೊಲೆ ಅಪರಾಧಿಗಳ ಗಲ್ಲುಶಿಕ್ಷೆಗೆ ಇನ್ನು ಒಂದು ವಾರಗಳಷ್ಟೇ ಬಾಕಿ ಇದೆ. ನಾಲ್ವರು ಆರೋಪಿಗಳನ್ನು ಜನವರಿ 22ರಂದು ತಿಹಾರ್ ಜೈಲಿನಲ್ಲಿ ಹ್ಯಾಂಗ್​ಮನ್​ ಪವನ್​ ಜಲ್ಲಾದ್​ ನೇಣಿಗೇರಿಸಲಿದ್ದಾರೆ. ಈ ಕ್ಷಣಕ್ಕಾಗಿ ಇಡೀ ದೇಶವೆ ಎದುರು ನೋಡುತ್ತಿದ್ದು, ಅತ್ಯಾಚಾರಿಗಳಿಗೆ ಇದೊಂದು ಎಚ್ಚರಿಕೆಯ ಪಾಠವಾಗಬೇಕೆಂಬುದು ಎಲ್ಲರ ಆಶಯವಾಗಿದೆ. ಇದರ ನಡುವೆ ನಿರ್ಭಯಾ ಅಪರಾಧಿಗಳ ಜೈಲು ಜೀವನದ ಕೆಲವು ಆಸಕ್ತಿ ವಿಷಯಗಳು ಬಹಿರಂಗವಾಗಿವೆ.
ನಾಲ್ವರು ಅಪರಾಧಿಗಳಾದ ಅಕ್ಷಯ್​ ಠಾಕೂರ್​ ಸಿಂಗ್​, ಮುಕೇಶ್​, ಪವನ್​ ಗುಪ್ತ ಮತ್ತು ವಿನಯ್​ ಶರ್ಮ ಒಟ್ಟು ತಮ್ಮ ಜೈಲು ವಾಸದ ಅವಧಿಯಲ್ಲಿ 1,37,000 ರೂ. ಸಂಪಾದನೆ ಮಾಡಿದ್ದಾರೆ. ಅಲ್ಲದೆ, 23 ಬಾರಿ ಜೈಲು ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಜೈಲು ಮೂಲಗಳು ತಿಳಿಸಿವೆ.
ಅಪರಾಧಿ ವಿನಯ್​ ಜೈಲು ನಿಯಮ ಉಲ್ಲಂಘನೆ ಅಡಿಯಲ್ಲಿ 11 ಬಾರಿ ಶಿಕ್ಷೆಗೆ ಗುರಿಯಾಗಿದ್ದಾರೆ. ಅಕ್ಷಯ್​ ಒಂದು ಬಾರಿಯಾದರೆ, ಮುಕೇಶ್​ 3 ಹಾಗೂ ಪವನ್​ 8 ಬಾರಿ ಜೈಲು ನಿಯಮವನ್ನು ಉಲ್ಲಂಘಿಸಿದ್ದಾರೆ.
ಇನ್ನು ಕಳೆದ 7 ವರ್ಷಗಳ ಜೈಲು ವಾಸದ ಅವಧಿಯಲ್ಲಿ ಮುಕೇಶ್​ ಯಾವುದೇ ಕೂಲಿ ಕೆಲಸವನ್ನು ಆಯ್ದುಕೊಂಡಿಲ್ಲ. ಇದನ್ನು ಹೊರತುಪಡಿಸಿದರೆ, ಅಕ್ಷಯ್​ 69,000 ರೂ., ಪವನ್​ 29,000 ರೂ. ಮತ್ತು ವಿನಯ್​ 39,000 ರೂ. ಸಂಪಾದಿಸಿದ್ದಾನೆ ಎಂದು ಜೈಲು ಮೂಲಗಳು ಮಾಹಿತಿ ನೀಡಿವೆ.
2016ರಲ್ಲಿ ಮುಕೇಶ್​, ಪವನ್​ ಮತ್ತು ಅಕ್ಷಯ್​ 10ನೇ ತರಗತಿಗೆ ಪ್ರವೇಶ ಪಡೆದು ಎಸ್​ಎಸ್​ಎಲ್​ಸಿ ಪರೀಕ್ಷೆ ಎದುರಿಸಿದ್ದರೂ ಉತ್ತೀರ್ಣರಾಗಿಲ್ಲ. ವಿನಯ್​ 2015ರಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ನೀಡಿದರೂ ಅದನ್ನು ಪೂರ್ಣಗೊಳಿಸಲಾಗುವುದಿಲ್ಲ.
ಅಪರಾಧಿಗಳನ್ನು ನೇಣಿಗೇರಿಸುವ ಮುನ್ನ ಎರಡು ಬಾರಿ ಅವರನ್ನು ಭೇಟಿ ಮಾಡಲು ಕುಟುಂಬಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಮಂಗಳವಾರವಷ್ಟೇ ವಿನಯ್​ ತಂದೆ ಭೇಟಿ ಮಾಡಿ ಹೋಗಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 5 =
Remember me
